ಗೀತ ಗಾಯನ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ: ಅಭಿನಂದನೆ
ಶಿಗ್ಗಾವಿ 18: ಪಟ್ಟಣದ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಯ ಕಬ್ಸ್ ಮತ್ತು ಬುಲ್ ಬುಲ್ ವಿದ್ಯಾರ್ಥಿಗಳು, ದಿ ಭಾರತ್ ಸ್ಕೌಟ್ಸ್ ಅಂಡ್ ಗೈಡ್ ವತಿಯಿಂದ ರಾಣೆಬೆನ್ನೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಗೀತ ಗಾಯನ ಸ್ಪರ್ಧೆಯಲ್ಲಿ ಕಬ್ಸ್ ವಿಧ್ಯಾರ್ಥಿಗಳಾದ ಕಿಶೋರ ಕೆ.ಎಲ್, ಅರವಿಂದ ಓಲೇಕಾರ, ವರುಣ ಕಬ್ಬೇರ, ಸಮರ್ಥ ಬಿಂದಲಿ, ಆಕಾಶ ಭೋರಣ್ಣನವರ, ಬುಲ್ ಬುಲ್ ವಿಧ್ಯಾರ್ಥಿಗಳಾದ ಪ್ರಣತಿ, ಮುಬಾರಕ ತಾಜಿ, ಸಂಗೀತ ಮುಗಳಿ, ಧರಣಿ ವಾಲ್ಮೀಕಿ, ಬಿಂದುಶ್ರೀ ಮಡಿವಾಳರ, ಗಂಗಾ ಹರಿಗೊಂಡ, ನವನೀತ ಕಲಾಲ ಭಾಗವಹಿಸಿ ಪ್ರಥಮ ಸ್ಥಾನವನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಮಾರ್ಗದರ್ಶಕರಾಗಿ ಶಿಕ್ಷಕರಾದ ಸುಮಾ ಆರ್, ಲಿಂಗೇಶ್ ಕೆ ಹೆಚ್, ಬಿ ಜಿ ಕಂಕನವಾಡ ಮತ್ತು ಮಮತಾ ಶೀಲವಂತ ಗುರುಗಳು ಮಾರ್ಗದರ್ಶನ ನೀಡಿದ್ದರು. ವಿದ್ಯಾರ್ಥಿಗಳಿಗೆ ಶಾಲೆಯ ಎಸ್‌ಡಿಎಂಸಿಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರುಗಳು ಮತ್ತು ಮಕ್ಕಳ ಪಾಲಕರು, ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಇತರ ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.