ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿ ಪ್ರಶಸ್ತಿ ವಿತರಣಾ ಸಮಾರಂಭ
ರಾಣಿಬೆನ್ನೂರ 28: ಯುವಕರು ಮೊಬೈಲ್ಗೀಳನ್ನು ಬಿಟ್ಟು ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸುವುದರಿಂದ ಮಾನಸಿಕ ನೆಮ್ಮದಿ, ಆರೋಗ್ಯ ಜೊತೆ ಸದಾ ಕ್ರೀಯಾಶೀಲರಾಗಿರಲು ಸಾಧ್ಯವಾಗುತ್ತದೆ ಎಂದು ಗ್ರಾಪಂಅಧ್ಯಕ್ಷ ಹೊನ್ನಪ್ಪ ಮುಡದೇವಣ್ಣನವರ ಹೇಳಿದರು.
ತಾಲೂಕಿನ ಕರೂರ ಗ್ರಾಮದಲ್ಲಿ ಲೆವೆನ್ ಸ್ಟಾರ್ ಕ್ರಿಕೆಟ್ ಕ್ಲಬ್ ವತಿಯಂದ ನಡೆದ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಯ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು. ಆಟದಲ್ಲಿ ಸೋಲು ಗೆಲುವು ಮುಖ್ಯವಲ್ಲ, ಕ್ರೀಡಾಕೂಟದಲ್ಲಿ ಸಕ್ರೀಯವಾಗಿ ಭಾಗವಹಿಸುವುದು ಬಹು ಮುಖ್ಯವಾಗಿರುತ್ತದೆ ಎಂದರು.
ಪ್ರಕಾಶ್ ಹೊರಕೇರಿ, ಮಾಲತೇಶ ಮಣಕೂರು, ವಸಂತ ಹಿರೇಬಿದರಿ, ಸಾಗರ ಕಡೂರು, ಕೆಂಚ್ಚಪ್ಪ ಮೂಗಪ್ಪನವರ, ಪಕ್ಕೀರೇಶ್ ಕೋಲಾಟಿ, ಗೋವಿಂದ ಬೆನ್ನೂರು, ಶಂಕರ ಕನ್ನಗೌಡರ, ಪ್ರಕಾಶ ರಡ್ಡೇರ, ರವಿ ಬೆತೂರ, ಎಲ್ಲಪ್ಪ ಹಲುವಾಗಲ, ಚಂದ್ರು ಬಾರ್ಕಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಪಂದ್ಯಾವಳಿಯಲ್ಲಿ 35 ತಂಡಗಳು ಭಾಗವಹಿಸಿದ್ದವು.
ಫಲಿತಾಂಶ : ಪ್ರಥಮ ಸ್ಥಾನವನ್ನು ಕನವಳ್ಳಿ ಕ್ರೀಕೆಟ್ ಕ್ಲಬ್ ಕನವಳ್ಳಿ, ದ್ವಿತಿಯ ಸ್ಥಾನ ಲೆವನ್ ಸ್ಟಾರ್ ಕ್ರಿಕೆಟ ಕ್ಲಬ್ ಕರೂರು, ತೃತಿಯ ಕನಕದಾಸ ಕ್ರಿಕೆಟ್ ಕ್ಲಬ್ ಮೆಡ್ಲೇರಿ, ಉತ್ತಮ ಬಾಲರ್ ಎಲ್ಲಪ್ಪ ಹಲುವಾಗಲ, ಉತ್ತಮಕೀಪರ್ ನಿಕಿಲ್ ಹೊನ್ನಪ್ಪನವರ, ಉತ್ತಮ ಪಿಲ್ಡರ್ ಅರುಣ, ಉತ್ತಮ ಬ್ಯಾಟ್ಸಮ್ಯಾನ ರಮೇಶ್ ಪಡೆದುಕೊಂಡರು.