ತಾಳಿಕೋಟಿ

ಡಾ.ಬಿ.ಎಸ್‌.ಯಾದವಾಡರಿಗೆ ರಾಜ್ಯ ವೈದ್ಯರ ದಿನಾಚರಣೆ ಪ್ರಶಸ್ತಿ ಪ್ರದಾನ

ಡಾ.ಬಿ.ಎಸ್‌.ಯಾದವಾಡರಿಗೆ ರಾಜ್ಯ ವೈದ್ಯರ ದಿನಾಚರಣೆ ಪ್ರಶಸ್ತಿ ಪ್ರದಾನ
ಡಾ.ಬಿ.ಎಸ್‌.ಯಾದವಾಡರಿಗೆ ರಾಜ್ಯ ವೈದ್ಯರ ದಿನಾಚರಣೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ತಾಳಿಕೋಟೆ03: ಪಟ್ಟಣದ ಹಿರಿಯ ವೈದ್ಯರಾದ ಡಾ.ಬಿ.ಎಸ್‌.ಯಾದವಾಡರಿಗೆ ಇಂಡಿಯನ್ ಮೆಡಿಕಲ್ ಅಸೋಶಿಯೇಶನ್ ರಾಜ್ಯ ಘಟಕದವರು ಕೊಡಮಾಡುವ ರಾಜ್ಯ ವೈದ್ಯರ ದಿನಾಚರಣೆ ಪ್ರಶಸ್ತಿಯನ್ನು ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಕರ್ನಾಟಕದ ಮಾಜಿ ಲೋಕಾಯುಕ್ತ, ನ್ಯಾಯಮೂರ್ತಿ ಎನ್‌.ಸಂತೋಷ್ ಹೆಗ್ಡೆ ಇತರ ಪ್ರಮುಖರು ಪ್ರದಾನ ಮಾಡಿದರು. 

ಕರ್ನಾಟಕ ರಾಜ್ಯ ಶಾಖೆಯ ಸಮಿತಿಯು ಅವರ ವೈದ್ಯಕೀಯ ವೃತ್ತಿ ಮತ್ತು ಸಮುದಾಯಕ್ಕೆ ಲೈಫ್ ಟೈಮ್ ಸಲ್ಲಿಸಿದ ಸೇವೆಗಳನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಲಾಗಿದೆ. ಪಟ್ಟಣದಲ್ಲಿ ನಾಲ್ಕು ದಶಕಗಳಿಗು ಅಧಿಕ ಕಾಲ ವೈಧ್ಯಕೀಯ ವೃತ್ತಿಯನ್ನು ಕೈಕೊಂಡ ಡಾ.ಬಿ.ಎಸ್‌.ಯಾದವಾಡ ಬಡವರ ಪಾಲಿನ ಆಶಾಕಿರಣವಾಗಿದ್ದಾರೆ. 

ಸುದ್ದಿ ಓದಿ