ಜೂನ್ ಮೊದಲ ವಾರದಲ್ಲಿ ಮಳೆ ನೋಡಿಕೊಂಡು ಬಿತ್ತನೆ ಕಾರ್ಯ ಆರಂಭಿಸಿ : ಕಳಸಪ್ಪನವರ
ಯರಗಟ್ಟಿ 26: ರಾಜ್ಯದಲ್ಲಿ ಈ ವರ್ಷ ಮುಂಗಾರು ಪೂರ್ವ ಮಳೆಯ ಕೊರತೆ ಕಾಡುತ್ತಿದೆ. ಯರಗಟ್ಟಿ ತಾಲ್ಲೂಕಿನ ಸುತ್ತಮುತ್ತಲೂ ಮೇ ತಿಂಗಳಿನಲ್ಲಿ ಮಳೆ ಉತ್ತಮವಾಗಿ ಸುರಿಯುತ್ತಿತ್ತು. ಇದರಿಂದ ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ವೇಗ ಸಿಗುತ್ತಿತ್ತು. ಆದರೆ, ಈ ವರ್ಷ ಮಳೆಯ ಕೊರತೆ ಇದೆ.
ಕಳೆದ ವಾರವಷ್ಟೇ ಸೈಕ್ಲೋನ್ ವೆಕ್ಟ್ನಿಂದ ಒಂದೆರಡು ಬಾರಿ ಮಳೆ ಸುರಿದಿದ್ದು ಬಿಟ್ಟರೆ ಮತ್ತೆ ವರುಣನ ದರ್ಶನವಿಲ್ಲ. ಮುಂಗಾರು ಪೂರ್ವದಲ್ಲಿ ಹೊಲ ಹದಗೊಳಿಸಲು ಮಳೆ ಬೇಕಾಗಿತ್ತು. ಮೇ ಅವಧಿಯಲ್ಲಿ ತಾಲೂಕಿನಲ್ಲಿ ಸಾಮಾನ್ಯವಾಗಿ ಮಳೆ ಈ ಬಾರಿ ಅಷ್ಟಾಗಿಲ್ಲ. ತಾಲೂಕಿನ ಹಲವು ಕಡೆಗಳಲ್ಲಿ ಮಳೆ ಆಗಿಲ್ಲ. ರೆಂಟೆ, ಕುಂಟೆ ಹೊಡೆಯಲು ಹೆಚ್ಚು ಮಳೆ ಬೇಕಾಗಿತ್ತು.ಹೆಚ್ಚಿನ ಮಳೆಯಾದರೆ ಉಳುಮೆ ಉತ್ತಮವಾಗಲಿದೆ ಎಂದು ಈ ಭಾಗದ ರೈತರು ಹೇಳಿದರು.
ಈ ವೇಳೆ ಯರಗಟ್ಟಿ ಸುತ್ತಮುತ್ತ ಜಮಿನುಗಳಿಗೆ ಭೇಟಿ ನೀಡಿದ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ಭೂಮಿಯ ತೇವಾಂಶ ಬಗ್ಗೆ ಪರೀಶೀಲನೆ ನಡೆಸಿದರು.ಉಪ ಕೃಷಿ ನಿರ್ದೇಶಕರು ಎಸ್. ಬಿ. ಕೊಂಗವಾಡ, ಕೃಷಿ ಅಧಿಕಾರಿ ಎಂ. ಜಿ. ಕಳಸಪ್ಪನವರ, ಕೃಷಿ ಇಲಾಖೆ ಸಿಬ್ಬಂದಿಯಾದ ಉಮೇಶ ಯರಗಟ್ಟಿ, ರೈತರಾದ ಮಂಜುನಾಥ ಮೋದಗಿ, ವಿಜಯ ಚಿಕ್ಕೊಡಿ, ಹನುಮಂತ ತಳವಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಹೇಳಿಕೆ: ತಾಲೂಕಿನಲ್ಲಿ ಉತ್ತಮ ಮುಂಗಾರು ಮಳೆಯ ನೀರೀಕ್ಷೆ ಇದ್ದು, ಇದಕ್ಕಾಗಿ ರೈತರು ಎಲ್ಲ ತಯಾರಿ ಮಾಡಿಕೊಂಡಿದ್ದಾರೆ.
ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಯರಗಟ್ಟಿ ಕೃಷಿ ಮಾರುಕಟ್ಟೆ ಮಾಡಲಾಗಿದೆ. ಸದ್ಯ ರೈತರು ಜಮೀನು ಹಸನು ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ. ಭೂಮಿಯ ತೇವಾಂಶ ಕಡಿಮೆಯಿದ್ದು ರೈತರು ಮಳೆ ನೋಡಿಕೊಂಡು ಜೂನ್ ಮೊದಲ ವಾರ ಬಿತ್ತನೆ ಕಾರ್ಯ ಆರಂಭಿಸುವುದು ಉತ್ತಮ.
ಎಸ್. ಎಸ್. ಪಾಟೀಲ ಜಂಟಿ ನಿರ್ದೇಶಕರು ಕೃಷಿ ಇಲಾಖೆ ಬೆಳಗಾವಿ