ಬ್ಯಾಡ್ಗಿ

ಮೆಣಸಿನಕಾಯಿ ಆವಕ ಇಳಿಕೆಯಾದರೂ ದರದಲ್ಲಿ ಸ್ಥಿರತೆ

ಮೆಣಸಿನಕಾಯಿ ಆವಕ ಇಳಿಕೆಯಾದರೂ ದರದಲ್ಲಿ ಸ್ಥಿರತೆ
ಬ್ಯಾಡಗಿ: ಸೋಮವಾರ ಮಾರುಕಟ್ಟೆಗೆ ಆಗಮಿಸಿದ ಮೆಣಸಿನಕಾಯಿ ಚೀಲಗಳು.

ಬ್ಯಾಡಗಿ 02: ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಗೆ ಮಾ.01 ರಂದು 1.82 ಸಾವಿರ ಮೆಣಸಿನಕಾಯಿ ಚೀಲಗಳು ಆವಕವಾಗಿದ್ದು, ಕಳೆದ ತಿಂಗಳ ಪ್ರಕಾರ ಆವಕ ಪ್ರಮಾಣ ಇಳಿಕೆ ಕಂಡಿದ್ದರೂ ದರದಲ್ಲಿ ಸ್ಥಿರತೆ ಕಂಡು ಬಂದಿದೆ.

ಕಳೆದ ಫೆ.26 ರಂದು ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆಗೆ 1.60 ಸಾವಿರ ಮೆಣಸಿನಕಾಯಿ ಚೀಲಗಳು ಆಗಮಿಸಿದ್ದು. ಸೋಮವಾರ ಹದಿನಾರು ಸಾವಿರ ಮೆಣಸಿನಕಾಯಿ ಚೀಲಗಳು ಹೆಚ್ಚಿಗೆ ಬಂದಿದ್ದರು, ಸಹ ಕಳೆದ ತಿಂಗಳಿಗೆ ಹೋಲಿಸಿದಲ್ಲಿ ಆವಕದಲ್ಲಿ ಇಳಿಕೆ ಕಂಡು ಬಂದಿದೆ.

ಅಕಾಲಿಕ ಮಳೆ ಅಲ್ಪಮಟ್ಟಿನ ದರ ಕುಸಿತ, ಆವಕದಲ್ಲಿ ಇಳಿಕೆ ಕಂಡು ಬರಲು ಕಾರಣವೆನ್ನಲಾಗುತ್ತಿದೆ, ಈಗಾಗಲೇ ಮೂರು ಬಾರಿ ಮಾರುಕಟ್ಟೆಗೆ 2 ಲಕ್ಷಕ್ಕೂ ಅಧಿಕ ಮೆಣಸಿನಕಾಯಿ ಆವಕಾಗಿತ್ತು. ಸೋಮವಾರ ಸಹ 2 ಲಕ್ಷ ಮೆಣಸಿನಕಾಯಿ ಚೀಲಗಳ ಆವಕದ ನಿರೀಕ್ಷೆ ಹೊಂದಲಾಗಿತ್ತು.

ಸೋಮವಾರದ ಮಾರುಕಟ್ಟೆ ದರ: ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆಗೆ ಒಟ್ಟು 1.82.031 ಮೆಣಸಿನಕಾಯಿ ಚೀಲಗಳು ಆವಕ ವಾಗಿದ್ದು ಬ್ಯಾಡಗಿ ಕಡ್ಡಿತಳಿ ಪ್ರತಿ ಕ್ವಿಂಟಲ್‍ಗೆ ಕನಿಷ್ಠ 1089, ಗರಿಷ್ಠ 24410 ಮಾದರಿ 11279 ದರಗಳಿಗೆ ಮಾರಾಟವಾದರೇ, ಡಬ್ಬಿ ತಳಿ ಕನಿಷ್ಠ 1909 ಗರಿಷ್ಠ 61.11 ಸರಾಸರಿ 14800 ಹಾಗೂ ಗುಂಟೂರ ತಳಿ ಕನಿಷ್ಠ 700 ಗರಿಷ್ಟ 10209 ಮಾದರಿ 4699 ರೂ.ಗಳಿಗೆ ಮಾರಾಟವಾಯಿತು.

ಸುದ್ದಿ ಓದಿ