ಶ್ರೀಸ್ನೇಹ ಜ್ಯೋತಿ ಸೊಸೈಟಿ ವಾರ್ಷಿಕ ಸಭೆ
ಯರಗಟ್ಟಿ 23: ಸಹಕಾರ ಸಂಘಗಳು ನೌಕರರ ಹಾಗೂ ನಿರ್ದೇಶಕ ಮಂಡಳಿಯವರ ಪ್ರಾಮಾಣಿಕ ಕರ್ತವ್ಯ ಹಾಗೂ ಕಾರ್ಯಕ್ಷಮತೆಯಿಂದ, ಸಕಾಲದಲ್ಲಿ ಸಾಲ ಮರುಪಾವತಿ ಮಾಡುವ ಗ್ರಾಹಕರಿಂದ ಪ್ರಗತಿ ಸಾಧಿಸಲು ಕಾರಣವಾಗುತ್ತದೆ. ಪರಸ್ಪರ ಅಭಿವೃದ್ಧಿಯ ಗುರಿಯನ್ನು ಹೊಂದಿರುವ ಸಹಕಾರ ಸಂಘಗಳು ಉತ್ತಮವಾಗಿ ಕಾರ್ಯನಿರ್ವಹಿಸಿ ಆರ್ಥಿಕಾಭಿವೃದ್ಧಿಯನ್ನು ಸಾಧಿಸುತ್ತವೆ ಎಂದು ಶ್ರೀಸ್ನೇಹ ಜ್ಯೋತಿ ಕೊ.ಆಪ್. ಕ್ರೆಡಿಟ್ ಸೊಸೈಟಿ ಚೇರಮನ್ ಗುರುಸಿದ್ಧ ಶೆಟ್ಟರ ಹೇಳಿದರು.
ಅವರು ಸಮೀಪದ ಮುನವಳ್ಳಿ ಪಟ್ಟಣದ ಶ್ರೀಸ್ನೇಹ ಜ್ಯೋತಿ ಸೊಸೈಟಿಯ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡತ್ತಿದ್ದರು. ಇದೇ ಸಂದರ್ಭದಲ್ಲಿ ಸವದತ್ತಿ ಹಾಗೂ ಯರಗಟ್ಟಿ ತಾಲೂಕಾ ಟಿ.ಎ.ಪಿ.ಸಿ.ಎಂ.ಸೊಸೈಟಿಗೆ ನಿರ್ದೇಶಕರಾಗಿ ಆಯ್ಕೆಯಾದ ಗಜಾನನ ಕಲಾಲ ಹಾಗೂ ಸಿದ್ಧಾರೂಢ ಬಿಲಕಂಚಿ ಅವರನ್ನು ಸ್ಮಾನಿಸಲಾಯಿತು. ಕಾರ್ಯನಿರ್ವಾಹಕ ಮಾರುತಿ ರಾಸನಕರ ಸೊಸೈಟಿಯ ಪ್ರಗತಿಯನ್ನು ತಿಳಿಸಿದರು. ಸಮಾರಂಭದಲ್ಲಿ ಎಂ.ಆರ್.ಗೋಮಾಡಿ, ಮಹಾರುದ್ರ್ಪ ಬುರ್ಜಿ, ಈಶ್ವರ ಕರೀಕಟ್ಟಿ, ನಬಿಸಾಬ ತಾಸೇದ, ಉದಯ ಯಕ್ಕುಂಡಿ, ವೀರಣ್ಣ ಕೊಳಕಿ, ಗುರುಪಾದ ಬೆಲ್ಲದ, ಪ್ರಕಾಶ ಕಡಕೋಳ, ಅಲ್ಲಪ್ಪ ಚುಳಕಿ, ಲಕ್ಷ್ಮಣ ಕಂಕಣವಾಡಿ, ಜಹಾಂಗೀರ ಕಿತ್ತೂರ, ರಾಜು ಭಜಂತ್ರಿ, ಬಸವರಾಜ ದೊಡಮನಿ, ಮಹಾಂತೇಶ ಗೋಮಾಡಿ, ಈರಣ್ಣ ಮೊರಬದ, ಕಾರ್ತಿಕ ದೊಡವಾಡಮಠ, ಸೇರಿದಂತೆ ಇತರರು ಇದ್ದರು.