ಯರಗಟ್ಟಿ

ಶ್ರೀಶೈಲ ಕರವೀರಪ್ಪ ಜೀವನ ಶ್ಲಾಘನೀಯ: ಶ್ರೀ ಮುರುಘೇಂದ್ರ ಸ್ವಾಮೀಜಿ

ಶ್ರೀಶೈಲ ಕರವೀರಪ್ಪ ಜೀವನ ಶ್ಲಾಘನೀಯ: ಶ್ರೀ ಮುರುಘೇಂದ್ರ ಸ್ವಾಮೀಜಿ

ಯರಗಟ್ಟಿ 30: ಸಾಮಾಜಿಕ ಕಾರ್ಯಕರ್ತ, ಎರಡು ಬಾರಿ ಗ್ರಾಪಂ ಸದಸ್ಯರಾಗಿ ಆಯ್ಕೆಯಾದ, ಶ್ರೀ ರೇಣುಕಾ ಶುಗರ್ಸ್‌ ಗುತ್ತಿಗೆದಾರರಾದ ಶ್ರೀಶೈಲ ಕರವೀರ​‍್ಪ ಬಿಜಗುಪ್ಪಿ ಅವರ ಸಾಮಾಜಿಕ ಸೇವೆ, ಉದಾರಿಗುಣ, ಜೀವನ ಶ್ಲಾಘನೀಯ ಎಂದು ಶ್ರೀ ಮುರುಘೇಂದ್ರ ಸ್ವಾಮೀಜಿ ಹೇಳಿದರು.  

ಅವರು ಸಮೀಪದ ಮುನವಳ್ಳಿ ಪಟ್ಟಣದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಕ್ರೀಡಾ ಮತ್ತು ಸಾಂಸ್ಕೃತಿಕ ಕಲಾ ಬಳಗದವರು ಏರಿ​‍್ಡಸಿದ ಶ್ರೀಶೈಲ ಬಿಜಗುಪ್ಪಿ ಅವರ ಶ್ರದ್ಧಾಂಜಲಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡುತ್ತಿದ್ದರು. ಜೀವ ನಮ್ಮ ಕೈಯ್ಯಲ್ಲಿ ಇಲ್ದದಿದ್ದರೂ ಜೀವನ ನಮ್ಮ ಕೈಯ್ಯಲ್ಲಿ ಇರುವುದರಿಂದ ಸುಂದರವಾದ ಹಾಗೂ ಇನ್ನೊಬ್ಬರಿಗೆ ಆದರ್ಶವಾದ ಬದುಕನ್ನು ನಾವು ನಡೆಸಿ ಸಮಾಜಕ್ಕೆ ನಮ್ಮದೇ ಆದ ಕೊಡುಗೆ ನೀಡಬೇಕು. ಜೀವ ನಶ್ವರ ಎಂದು ತಿಳಿದರೂ ಸಮಾಜ ಸೇವೆ, ದೇಶ ಸೇವೆ ಎನ್ನುವುದಿಲ್ಲ, ಸ್ವಾರ್ಥ ಮನೋಭಾವ ತೊರೆದು ನಿಸ್ವಾರ್ಥದಿಂದ ಸಮಾಜಸೇವೆ ಗೈದರೆ ನಾವೂ ಇಲ್ಲದಿದ್ದರೂ ಜನಮಾನಸದಲ್ಲಿ ಸದಾ ಇರುತ್ತೇವೆ ಎಂದರು.  

ಮುಖಂಡರಾದ ರವೀಂದ್ರ ಯಲಿಗಾರ, ಉಮೇಶ ಬಾಳಿ, ಶಿಂದೋಗಿ ಗ್ರಾಪಂ ಅಧ್ಯಕ್ಷ ಡಿ.ಡಿ.ಟೋಪೋಜಿ, ಉಮೇಶ ಬಾಳಿ, ಶಂಕರ ಬಿಜಗುಪ್ಪಿ, ಶ್ವೇತಾ ಶ್ರೀಶೈಲ ಬೀಜಗುಪ್ಪಿ, ಎಂ.ಆರ್‌.ಗೋಪಶೆಟ್ಟಿ, ವೀರಣ್ಣ ಕಮ್ಮಾರ, ಸಿಪಿಐಪ್ರಮೋದ ಯಲಿಗಾರ, ಫಕ್ಕೀರಪ್ಪ ಚಂದರಗಿ, ಫಕ್ಕೀರಪ್ಪ ಹದ್ದಣ್ಣವರ, ಮೋಹನ ಕಾಮಣ್ಣವರ, ಈರಣ್ಣ ತುಳಜಣ್ಣವರ, ವೀರೇಶ ಬ್ಯಾಹಟ್ಟಿ, ಬಿ.ಬಿ.ಹುಲಿಗೊಪ್ಪ, ಎಂ.ಎ.ಕಮತಗಿ, ಅಮಿತ ಕರೀಕಟ್ಟಿ, ಡಾ. ರವಿ ಹನಸಿ, ಪ್ರಾ. ಎಂ.ಎಚ್‌.ಪಾಟೀಲ, ಕೃಷ್ಣಾ ಪಾಟೀಲ, ಬಿ.ಎಚ್‌.ಖೊಂದುನಾಯ್ಕ, ವಿಜಯ ಅಮಠೆ, ಸೋಮನಗೌಡ ಹಿರಲಿಂಗಣ್ಣವರ, ಪ್ರಶಾಂತ ತುಳಜಣ್ಣವರ, ಚಂದ್ರಶೇಖರ ಚಿಕ್ಕುಂಬಿ, ಉಮೇಶ ಚುಳಕಿ, ಬಾಳು ಹೊಸಮನಿ, ವೀರಣ್ಣ ಕೊಳಕಿ, ಅಪ್ಪು ಕಾತರಕಿ, ರುದ್ರಪ್ಪ ನಿಲುಗಲ್ಲ, ಮಂಗಲಾ ಕಮತಗಿ,  ಸೇರಿದಂತೆ ಇದ್ದರು. 


ಸುದ್ದಿ ಓದಿ