ಮನರಂಜನೆ

ಕನ್ನಡ ಚಿತ್ರರಂಗಕ್ಕೆ ಮರೆಯದ ಗೀತೆಗಳನ್ನಿತ್ತ ಶ್ರೀರಂಗ .....

ಕನ್ನಡ ಚಿತ್ರರಂಗಕ್ಕೆ ಮರೆಯದ ಗೀತೆಗಳನ್ನಿತ್ತ ಶ್ರೀರಂಗ .....

ಬೆಂಗಳೂರು, ಮೇ 10 :  ಕನ್ನಡ ಚಿತ್ರರಂಗ ಎಂದಿಗೂ ಮರೆಯದ ಹಾಡುಗಳನ್ನು ನೀಡಿದ ಶ್ರೀರಂಗ ಅವರ ಅಂತ್ಯಕ್ರಿಯೆ ಸೋಮವಾರ ನೆರವೇರಿದೆ. ಭಂಗಿ ರಂಗ ಎಂದೇ ಜನಪ್ರಿಯರಾಗಿದ್ದ ಅವರು 87 ವರ್ಷ ವಯಸ್ಸಿನ ಅವರು ವಯೋಸಹಜ ಕಾಯಿಲೆಗಳಿಂದಾಗಿ ಭಾನುವಾರ ವಿಧಿವಶರಾಗಿದ್ದರು.

ಸುಮಾರು ಒಂದು ಸಾವಿರಕ್ಕೂ ಹೆಚ್ಚು ಸಿನಿಮಾ ಹಾಡುಗಳನ್ನು ಬರೆದಿರುವ ಶ್ರೀರಂಗ 1957 ಸಿನಿರಂಗಕ್ಕೆ ಎಂಟ್ರಿಯಿತ್ತು, ನಂಜುಂಡಿ ಕಲ್ಯಾಣ, ಆಸೆಗೊಬ್ಬ ಮೀಸೆಗೊಬ್ಬ, ಜನುಮದ ಜೋಡಿ, ರಕ್ತ ಕಣ್ಣೀರು ಸೇರಿದಂತೆ ಹಲವು ಸಿನಿಮಾಗಳಿಗೆ ಹಿಟ್ ಹಾಡುಗಳನ್ನು ಬರೆದಿದ್ದಾರೆ. ಅಂಜದ ಗಂಡು, ಕಿಂದರಿ ಜೋಗಿ, ಮುತ್ತೈದೆ ಭಾಗ್ಯ, ಭೂಲೋಕದಲ್ಲಿ ಯಮ ರಾಜ ಸೇರಿದಂತೆ ಹಲವು ಚಿತ್ರಗಳಿಗೆ ಸಂಭಾಷಣೆಯನ್ನೂ ರಚಿಸಿದ್ದಾರೆ.  

ನಾಗರಭಾವಿಯಲ್ಲಿ ವಾಸವಿದ್ದ ಶ್ರೀರಂಗ ಅವರು ಜ್ಯೋತಿಷ್ಯವನ್ನೂ ಕಲಿತು ಇಳಿ ವಯಸ್ಸಿನಲ್ಲಿಯೂ ಜಾತಕ ಬರೆಯುವುದರ ಜೊತೆಗೆ ಹಾಡುಗಳನ್ನು ಸಹ ಬರೆಯುತ್ತಿದ್ದರು ಎಂದು ಅವರ ಪತ್ನಿ ಸರೋಜಮ್ಮ ಮಾಹಿತಿ ನೀಡಿದ್ದಾರೆ. ಮೃತರು ಪತ್ನಿ, ಪುತ್ರ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.  

ಸುದ್ದಿ ಓದಿ