ರಾಣೆಬೆನ್ನೂರ

26ರಿಂದ ಶ್ರೀದೇವಿ ಮಹಾತ್ಮೆ ಪುರಾಣ ಪ್ರವಚನ

26ರಿಂದ ಶ್ರೀದೇವಿ ಮಹಾತ್ಮೆ ಪುರಾಣ ಪ್ರವಚನ

ರಾಣೆಬೆನ್ನೂರು 18: ಪ್ರತಿವರ್ಷದಂತೆ ಈ ವರ್ಷವೂ ಸಹ, ದಸರಾ ಮಹೋತ್ಸವದ ಶರನ್ನವರಾತ್ರಿ ನಿಮಿತ್ತ ಇಲ್ಲಿನ ಶ್ರೀ ಆದಿಶಕ್ತಿ  ದೇವಸ್ಥಾನದಲ್ಲಿ ಸೆ. 26 ರಿಂದ ಅ.5 ರ ವರೆಗೆ ಒಂಬತ್ತು ದಿವಸಗಳ ಕಾಲ, ಶ್ರೀದೇವಿ ಮಹಾತ್ಮೆ ಪುರಾಣ ಪ್ರವಚನ ಕಾರ್ಯಕ್ರಮ ಆಯೋಜಿಸಲಾಗಿದೆ. ಪುರಾಣ ಪ್ರವಚನಕಾರ ಗದುಗಿನ ಬೆಟ್ಟದಯ್ಯ  ಶಾಸ್ತ್ರಿ ಹಿರೇಮಠ ಅವರು ಪ್ರವಚನ ನಡೆಸಿಕೊಡುವರು. ಪ್ರತಿದಿವಸ ಸಂಜೆ 6.30 ರಿಂದ 8.30 ರವರೆಗೆ ಪ್ರವಚನ ನಡೆಯಲಿದ್ದು, ಭಕ್ತಾದಿಗಳು ಭಾಗವಹಿಸಿ ಪುನೀತರಾಗುವಂತೆ ಶ್ರೀ ಆದಿಶಕ್ತಿ ದೇವಸ್ಥಾನ ಟ್ರಸ್ಟ್ ಕಮಿಟಿ ತನ್ನ ಪ್ರಕಟಣೆಯಲ್ಲಿ ತಿಳಿಸಿದ 

ಸುದ್ದಿ ಓದಿ