ರಾಣೆಬೆನ್ನೂರ

ಸ್ಪಟಿಕ್ ಲಿಂಗದ ಮಹತ್ವವನ್ನು ಜಗತ್ತಿಗೆ ಸಾರಿದ ಕೀರ್ತಿ ವೀರಭದ್ರ ಶಿವಾಚಾರ್ಯ ಶ್ರೀಗಳಿಗೆ ಸಲ್ಲುತ್ತದೆ: ರವೀಂದ್ರಗೌಡ

ಸ್ಪಟಿಕ್ ಲಿಂಗದ ಮಹತ್ವವನ್ನು ಜಗತ್ತಿಗೆ ಸಾರಿದ ಕೀರ್ತಿ ವೀರಭದ್ರ ಶಿವಾಚಾರ್ಯ ಶ್ರೀಗಳಿಗೆ ಸಲ್ಲುತ್ತದೆ: ರವೀಂದ್ರಗೌಡ

ರಾಣೇಬೆನ್ನೂರು 14: ನಾಡಿನ ಅತ್ಯಂತ ಪವಿತ್ರ, ಪುಣ್ಯ ಪ್ರಾಪ್ತಿಯ, ಧಾರ್ಮಿಕ ಐತಿಹಾಸಿಕ ಹಿನ್ನೆಲೆ ಹೊಂದಿರುವ ಸ್ಪಟಿಕದ ಲಿಂಗದಹಳ್ಳಿ ಗ್ರಾಮವನ್ನು ನಾಡು, ದೇಶ, ಮತ್ತುವಿಶ್ವಕ್ಕೆ ಪರಿಚಯಿಸಿದ ಕೀರ್ತಿ ರಂಭಾಪುರಿ ಶಾಖಾ ಹಿರೇಮಠದ ಶ್ರೀ ವೀರಭದ್ರ ಶಿವಾಚಾರ್ಯರಿಗೆ ಸಲ್ಲುತ್ತದೆ ಎಂದು ರಾಜ್ಯ ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ರವೀಂದ್ರ ಗೌಡ ಪಾಟೀಲ್ ಹೇಳಿದರು. ಅವರು ಸುಕ್ಷೇತ್ರ ಲಿಂಗದಹಳ್ಳಿ ಗ್ರಾಮದಲ್ಲಿ ಜರುಗಿದ ಕಡೆ ಶ್ರಾವಣ ಮಾಸದ ಅಮಾವಾಸ್ಯೆ ಮುನ್ನಾ ದಿನವಾದ  ಇಂದು ಆಯೋಜಿಸಿದ್ದ ಧಾರ್ಮಿಕ ಜಾಗೃತಿ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.  

ಸ್ಪಟಿಕ ಲಿಂಗದ ಬಗ್ಗೆ ವಿಶೇಷ ಅಧ್ಯಯನ ನಡೆಸಿದ, ಶ್ರೀಗಳು, ನಾಡಿನ ಬಹುದೊಡ್ಡ ಧಾರ್ಮಿಕ ಜಾಗೃತಿಯ ಸ್ಥಾನವಾದ ಲಿಂಗದಹಳ್ಳಿ ರಂಭಾಪುರಿ ಶಾಖಾ ಹಿರೇಮಠ ಪರಿಸರದಲ್ಲಿ ಪ್ರತಿಷ್ಠಾಪಿಸಿ, ಲಿಂಗದ ಮಹತ್ವವನ್ನು ಇಂದು ಲಕ್ಷಾಂತರ ಭಕ್ತರಿಗೆ ಪರಿಚಯಿಸಿದ್ದಾರೆ. ಗ್ರಾಮವನ್ನು ಪಾವನ ಮತ್ತು ಪುಣ್ಯಕ್ಷೇತ್ರವನ್ನಾಗಿ ಮಾಡಿರುವುದು ಅವರ ಸಾಧನೆಗೆ ಸಾಕ್ಷಿಯಾಗಿದೆ ಎಂದರು.             ಧರ್ಮ ಜಾಗೃತಿಯ ಸಭಾ ಕಾರ್ಯಕ್ರಮವನ್ನು  ಶ್ರೀ ಜಗದ್ಗುರು ರೇಣುಕ ಜೀವನ ಜ್ಞಾನ ವಿಜ್ಞಾನ  ಕೇಂದ್ರ,ರಂಭಾಪುರಿ ವೀರ ಸಿಂಹಾಸನ ಶಾಖಾ ಹಿರೇಮಠ, ಹಾಗೂ ಸುಕ್ಷೇತ್ರ ಲಿಂಗದಹಳ್ಳಿ ಸ್ಪಟಿಕ ಶಿವಲಿಂಗ   ಅವರು ಇಂದು ಶ್ರೀ ಜಗದ್ಗುರು ರೇಣುಕ ಜೀವನಜ್ಞಾನವಿಜ್ಞಾನ ಕೇಂದ್ರ ಮತ್ತು ರಂಭಾಪುರಿ ವೀರಸಿಂಹಾಸನ ಶಾಖಾ ಹಿರೇಮಠ ಮತ್ತು ಸ್ಪಟಿಕ್ ಶಿವಲಿಂಗ ಶ್ರೀ ಕ್ಷೇತ್ರ ಲಿಂಗದಹಳ್ಳಿ ಸಂಯುಕ್ತವಾಗಿ ಆಯೋಜಿಸಿತ್ತು. ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ, ಮಾಜಿ ಉಪಮುಖ್ಯಮಂತ್ರಿ ಕೆಎಸ್ ಈಶ್ವರ​‍್ಪ ಅವರು, ರೈತರು ದೇಶದ ಬೆನ್ನೆಲುಬು, ಸಮಾಜದಲ್ಲಿ ಅನ್ನದಾತರು ಅವರಾಗಿದ್ದಾರೆ, ಶ್ರೀ ಕ್ಷೇತ್ರದ ಈ ಗಳು ಈ ಭಾಗದ ಭಕ್ತರ, ಮತ್ತು ಲೋಕ ಕಲ್ಯಾಣಕ್ಕಾಗಿ ಅನೇಕ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಧರ್ಮ ಸಂಸ್ಕೃತಿಯನ್ನು ಅಳವಡಿಸಿಕೊಂಡು ಸಾಗಿರುವುದು ಗ್ರಾಮದ ಮತ್ತು ಜಿಲ್ಲೆಯ ನಾಡಿನ ಪವಿತ್ರ ತಾಣವಾಗಿಸಿದ್ದಾರೆ ಎಂದು ಶ್ರೀಗಳಿಗೆ ತಮ್ಮ ಭಕ್ತಿ ಸಮರೆ​‍್ಣ ಸಲ್ಲಿಸಿದರು.ರೈತರನ್ನು ಈ ನಾಡಿನಲ್ಲಿ ಕಾಯಕಯೋಗಿಗಳೆಂದು ಕರೆಯುತ್ತೇವೆ.   

ಲಿಂಗದಹಳ್ಳಿ ಮಠದ ಶ್ರೀಗಳು ಹೆಸ್ಕಾ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಾ,ಮಠ ಸ್ಥಾಪಿಸಿ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುತ್ತಾ ಯಾವುದೇ ಕ್ಷೇತ್ರದಲ್ಲಿ ಚ್ಯುತಿ ಬಾರದಂತೆ ಕಾರ್ಯನಿರ್ವಹಿಸುತ್ತಾ ಅವರೂ ಸಹಾ ರೈತರಂತೆ ನಿಜವಾದ ಎರಡನೇ ಕಾಯಕಯೋಗಿಗಳಾಗಿದ್ದಾರೆ. ಪುಣ್ಯ ಪಾವನ ಕ್ಷೇತ್ರವು ಮತ್ತಷ್ಟು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮುಂದಾಗಲಿ, ತಾವು ಸಹ ಈ ಪುಣ್ಯ ಕಾರ್ಯಕ್ಕೆ  ಭಾಗಿಯಾಗುವುದಾಗಿ ಈಶ್ವರ​‍್ಪ ಅವರು ಹೇಳಿದರು. ಪಾಟೀಲರು ಬಣ ್ಣಸಿದರು.     ಕಾರ್ಯಕ್ರಮದಲ್ಲಿ ಕೆ.ಎಸ್‌. ಈಶ್ವರ​‍್ಪ ಅವರ ಪುತ್ರ ಜಿ.ಪಂ. ಮಾಜಿ ಸದಸ್ಯ ಕಾಂತೇಶ ಈಶ್ವರ​ಪ್ಪ ಮಾತನಾಡಿ ಲೋಕಕಲ್ಯಾಣಾರ್ಥವಾಗಿ ಮಠದ ಶ್ರೀಗಳು ಮಾಡುತ್ತಿರುವ ತ್ಯಾಗ ಸ್ಮರಣಿಯವಾಗಿದೆ.ಇದರಲ್ಲಿ ಅವರ ಯಾವುದೇ ಸ್ವಾರ್ಥವಿಲ್ಲ ಎಲ್ಲವನ್ನೂ ತ್ಯಾಗ ಮಾಡಿಯೇ ಪೀಠ ಅಲಂಕರಿಸಿರುತ್ತಾರೆ. ಅವರ ಸನ್ಮಾರ್ಗದತ್ತ ನಾವೆಲ್ಲಾ ನಡೆದುಕೊಳ್ಳಬೇಕಾಗಿದೆ ಎಂದರು.  

ವೇದಿಕೆ ಮೇಲೆ ಹೊನ್ನಾಳಿಯ ಡಾ. ಚಂದ್ರಶೇಖರ ಸಾಲಿಮಠ, ಮಲ್ಲೇಶಪ್ಪ ಎಮ್ಮಿ, ಮಂಜಪ್ಪ ಲಿಂಗದಹಳ್ಳಿ, ಕರಿಯಪ್ಪ ಜೋಗೇರ, ಶಂಕರಗೌಡ ಪಾಟೀಲ, ನಾಗಪ್ಪ ಚೌಡಪ್ಪಳವರ, ಸಂಜೀವರಡ್ಡಿ ಕೋಟಿ, ಶಿದ್ಲಿಂಗಪ್ಪ ಹೊನ್ನತ್ತಿ ಸೇರಿದಂತೆ ಗ್ರಾಮದ ಮತ್ತು ನಾಡಿನ ಮತ್ತಿತರ ಗಣ್ಯರು  ಉಪಸ್ಥಿತರಿದ್ದರು..     ದಿವ್ಯ ಸಾನ್ನಿಧ್ಯವನ್ನು ವಹಿಸಿದ್ದ  ಶ್ರೀ ವೀರಭದ್ರ್ರ ಶಿವಾಚಾರ್ಯ ಮಹಾಸ್ವಾಮಿಗಳು, ತಮ್ಮ ಸಂದೇಶಾಮೃತವನ್ನು ದಯಪಾಲಿಸಿ, ನಾಡಿನ ಸಾಧಕ ಗಣ್ಯರನ್ನು ಸನ್ಮಾನಿಸಿ ಗೌರವಿಸಿದರು.  ರಿಂದಮ್ಮ ಎನ್‌. ಜಾಧವ ಪ್ರಸಾದ ಸೇವೆ ಸಲ್ಲಿಸಿದರು. ಶಿವರುದ್ರ​‍್ಪ ಕಾಯಕದ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು. 


ಸುದ್ದಿ ಓದಿ