ತಾಳಿಕೋಟಿ

'ಮಾದರಿ ಪ್ರೌಢ ಶಾಲೆ' ಹೆಗ್ಗಳಿಕೆಗೆ ಪಾತ್ರವಾಗಿರುವ ಶ್ರೀ ಸೋಮೇಶ್ವರ ಪ್ರೌಢಶಾಲೆ'

'ಮಾದರಿ ಪ್ರೌಢ ಶಾಲೆ' ಹೆಗ್ಗಳಿಕೆಗೆ ಪಾತ್ರವಾಗಿರುವ ಶ್ರೀ ಸೋಮೇಶ್ವರ ಪ್ರೌಢಶಾಲೆ'

ವಿಶೇಷ ವರದಿ

ತಾಳಿಕೋಟಿ05: ದುಡ್ಡು ಸಂಪಾದಿಸುವ ಉದ್ದೇಶವನ್ನಿಟ್ಟುಕೊಂಡು ನಾಯಿಕೊಡೆಗಳಂತೆ ತಲೆಯೆತ್ತಿರುವ ನೂರಾರು ಶಿಕ್ಷಣ ಸಂಸ್ಥೆಗಳ ನಡುವೆ ಗ್ರಾಮೀಣ ಪ್ರದೇಶದ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಏಕೈಕ ಉದ್ದೇಶದಿಂದ ಕಳೆದ 55 ವರ್ಷಗಳಿಂದ ಜ್ಞಾನದಾಸೋಹ ನೀಡುತ್ತಿರುವ ವಿಜಯಪುರ ಜಿಲ್ಲೆ ಯಾಳವಾರ ಗ್ರಾಮದ ಶ್ರೀ ಸೋಮೇಶ್ವರ ಪ್ರೌಢಶಾಲೆ ನಿಜಕ್ಕೂ ಜಿಲ್ಲೆಯ ಒಂದು ಮಾದರಿ ಪ್ರೌಢ ಶಾಲೆಯಾಗಿದೆ.

1967ರಲ್ಲಿ ಗ್ರಾಮದ ಧಣಿಗಳಾದ ಶ್ರೀ ದಿ. ಸಂಗನಗೌಡ ನಾಡಗೌಡರು "ಶ್ರೀ ಸೋಮೇಶ್ವರ ವಿದ್ಯಾವರ್ಧಕ ಸಂಸ್ಥೆ"ಯನ್ನು ಸ್ಥಾಪಿಸಿದರು. ಇಲ್ಲಿಂದ ಆರಂಭವಾದ ಪ್ರಾಥಮಿಕ ಶಾಲೆ ಇಂದು ಪದವಿ ಪೂರ್ವ ಕಾಲೇಜು ತನಕ ಹೆಮ್ಮರವಾಗಿ ಬೆಳೆದಿದೆ. ಇದಕ್ಕೆ ಕಾರಣ ದಿ. ಸಂಗನಗೌಡ ನಾಡಗೌಡರು ಗ್ರಾಮೀಣ ಪ್ರದೇಶದ ಬಡ ವಿದ್ಯಾಥರ್ಿಗಳ ಕುರಿತು ಹೊಂದಿದ್ದ ಅಪಾರ ಕಾಳಜಿಯಾಗಿದೆ. ಈ ಸತ್ಕರ್ಮವನ್ನೀಗ ಅವರ ಪುತ್ರರಾದ ಶ್ರೀ ರಾಜುಗೌಡ ನಾಡಗೌಡರು ಮುಂದುವರೆಸುತ್ತಿದ್ದಾರೆ.

ಕೇವಲ ರೂ. 500 ಪ್ರವೇಶ ಶುಲ್ಕ ಪಡೆದು ಉಚಿತ ವಸತಿ ನಿಲಯದ ಸೌಲಭ್ಯವನ್ನು ನೀಡಲಾಗುತ್ತಿದೆ ಎಂದರೆ ಯಾರೂ ನಂಬುವುದಿಲ್ಲವಾದರು ಇದು ಸತ್ಯ. ಉತ್ತಮವಾದ ನೈಸಗರ್ಿಕ ವಾತಾವರಣ, ವಿಶಾಲವಾದ ಆಟದ ಮೈದಾನ, ಸುಸಜ್ಜಿತವಾದ ವರ್ಗಕೋಣೆಗಳು, ವಿನಯಶೀಲ ಅನುಭವಿ ಶಿಕ್ಷಕ ಸಿಬ್ಬಂದಿ ಈ ಶಾಲೆಯ ವೈಶಿಷ್ಟ್ಯವಾಗಿದೆ.

ಸುಮಾರು 22 ವರ್ಷಗಳಿಂದ ಈ ಶಾಲೆಯಲ್ಲಿ ಮುಖ್ಯ ಗುರುಗಳಾಗಿ ಸೇವೆ ಸಲ್ಲಿಸುತ್ತಿರುವ ಪಿ.ಎಸ್. ಬ್ಯಾಕೋಡ ಹಾಗೂ ಅಷ್ಟೇ ಶಿಸ್ತುಬದ್ಧವಾಗಿ ಕಾಲೇಜು ನಡೆಸುತ್ತಿರುವ ಪಿಯು ಪ್ರಾಚಾರ್ಯ ಜಿ.ಎಸ್. ನ್ಯಾಮಗೌಡರ ಸೇವಾಮನೋಭಾವ ಪ್ರಶಂಸನೀಯವಾಗಿದೆ. ಸಂಸ್ಥೆಯ ಆಡಳಿತವನ್ನು ಸಮರ್ಥವಾಗಿ ನಡೆಸಿಕೊಂಡು ಬರುತ್ತಿರುವ ಇಲ್ಲಿಯ ನಿದರ್ೇಶಕರ ಕಾರ್ಯವೈಖರಿ ಮೆಚ್ಚುವಂಥಹದ್ದಾಗಿದೆ.

ಈ ಬಾರಿಯ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ 95 ಫಲಿತಾಂಶ ಈ ಶಾಲೆಗೆ ಬಂದಿದ್ದು, ಕುಮಾರಿ ವಿದ್ಯಾ ನ್ಯಾಮಣ್ಣವರ ಶೇ. 98.24 ಅಂಕ ಗಳಿಸಿ ಶಾಲೆಗೆ ಕೀತರ್ಿ ತಂದಿದ್ದಾಳೆ. ಒಟ್ಟು ಪರೀಕ್ಷೆ ಬರೆದ 89 ವಿದ್ಯಾಥರ್ಿಗಳಲ್ಲಿ 23 ಅತ್ಯುನ್ನತ ಶ್ರೇಣಿ, 57 ಪ್ರಥಮ ಶ್ರೇಣಿ ಹಾಗೂ 4 ದ್ವಿತೀಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ.

ಮುಂದಿನ ಶೈಕ್ಷಣಿಕ ವರ್ಷದಿಂದ ಪದವಿ ಕಾಲೇಜನ್ನು ಆರಂಭಿಸುವ ಯೋಜನೆ ಇದೆ ಎಂದು ಅಧ್ಯಕ್ಷ ನಾಡಗೌಡರು ತಿಳಿಸುತ್ತಾರೆ. ಈ ಸಂಸ್ಥೆಯ ಕುರಿತು ಯಾಳವಾರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರಲ್ಲಿ ಅಭಿಮಾನ ಇದೆ.

ಜಾಗತೀಕರಣ ಹಾಗೂ ವ್ಯಾಪಾರೀಕರಣದಿಂದಾಗಿ ಹಾಳಾಗಿ ಹೋಗುತ್ತಿರುವ ಇಂದಿನ ಶಿಕ್ಷಣ ವ್ಯವಸ್ಥೆಗೆ ಕಾಯಕಲ್ಪ ಕಲ್ಪಿಸುವ ಯಾಳವಾರದ ಶ್ರೀ ಸೋಮೇಶ್ವರ ಶಿಕ್ಷಣ ಸಂಸ್ಥೆಯಂಥಹ ನೂರಾರು ಸಂಸ್ಥೆಗಳು ಹುಟ್ಟಿಕೊಳ್ಳುವ ಅನಿವಾರ್ಯತೆ ಇದೆ 

ಸುದ್ದಿ ಓದಿ