ಗಂಗಾವತಿ

ಅಂಗನವಾಡಿ ಕೇಂದ್ರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

ಅಂಗನವಾಡಿ ಕೇಂದ್ರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

ಗಂಗಾವತಿ 06  ಹಿರೇಜಂತಕಲ್ 34 ನೇ ವಾರ್ಡ್‌ 3 ನೇ ಅಂಗನವಾಡಿ ಕೇಂದ್ರದಲ್ಲಿ  ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಮಕ್ಕಳೊಂದಿಗೆ ಆಚರಣೆ ಮಾಡಲಾಯಿತು ನಂತರ ಮಾತನಾಡಿದ ಅಂಗನವಾಡಿ ಶಿಕ್ಷಕಿ ಸುನಿತಾ ಅರುಣುಕುಮಾರ "ಕರ್ಮಕ್ಕೆ ತಕ್ಕ ಫಲ ಪ್ರಾಪ್ತಿ,ಭೂಮಿಯ ಪ್ರತಿಯೊಂದು ಚರಾಚರಗಳಲ್ಲೂ ನಾನಿದ್ದೇನೆ. ನಿನ್ನ ಸುತ್ತಲು ಬದುಕು ಸಂಪೂರ್ಣ ಪವಾಡಗಳಿಂದಲೆ ತುಂಬಿದೆ. ಅವುಗಳನ್ನು ಕಂಡು ಖುಷಿಪಡು. ಜಗತ್ತಿನಲ್ಲಿ ದೇವರಿರುವುದಲ್ಲ, ದೇವರೊಳಗೆ ಸಂಪೂರ್ಣ ಜಗತ್ತಿದೆ. ನಿನ್ನ ಕರ್ಮಕ್ಕೆ ತಕ್ಕ ಫಲವನ್ನು ನಾನು ನೀಡಿಯೆ ತೀರುತ್ತೇನೆ. ಕರ್ತವ್ಯ ಲೋಪವಾಗದಂತೆ ನೀನು ಫಲ ಬಯಸದೆ ಕರ್ಮ ಮಾಡು" ಶ್ರೀಕೃಷ್ಣ ಪರಮಾತ್ಮ.ಇಂದು ಶ್ರೀಕೃಷ್ಣ ಜನ್ಮಾಷ್ಟಮಿ. ಮಾನವ ಕುಲಕೋಟಿಯನ್ನು ಉದ್ಧರಿಸಲು ಶ್ರೀ ಕೃಷ್ಣ ಪರಮಾತ್ಮನೆ ಈ ಭೂಮಿಯ ಮೇಲೆ ಜನ್ಮ ತಾಳಿದ ಮಹತ್ವದ ದಿನ.ಶ್ರೀಕೃಷ್ಣ ಜನ್ಮಾಷ್ಟಮಿ ಭಾರತದಲ್ಲಿ ಆಚರಿಸಲ್ಪಡುವ ಒಂದು ಪ್ರಮುಖವಾದ ಹಬ್ಬ. ಶ್ರೀಕೃಷ್ಣ ಹುಟ್ಟಿದ ದಿನವನ್ನು ಕೃಷ್ಣ ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಎಂದು ವೈಭವದಿಂದ ಆಚರಿಸಲಾಗುತ್ತದೆ.  

ಶ್ರೀಕೃಷ್ಣನ ಜನ್ಮದಿನವನ್ನು ಚಾಂದ್ರಮಾನ ರೀತಿಯಲ್ಲಿ ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು, ಸೌರಮಾನ ರೀತಿಯಲ್ಲಿ ಸಿಂಹಮಾಸದ ರೋಹಿಣಿ ನಕ್ಷತ್ರದ ದಿನ ಆಚರಿಸುತ್ತಾರೆ. ಪುರಾಣಗಳ ಪ್ರಕಾರ ಶ್ರಾವಣ ಮಾಸದಲ್ಲಿ ಬರುವ ಕೃಷ್ಣ ಪಕ್ಷದ ಅಷ್ಟಮಿಯಂದು ಶ್ರೀಕೃಷ್ಣ ಹುಟ್ಟಿದ ದಿನ. ಅಷ್ಟಮಿಯ ಮಧ್ಯರಾತ್ರಿ, ಕಾರಾಗೃಹದಲ್ಲಿ ಶ್ರೀಕೃಷ್ಣನ ಜನನವಾಯಿತು. ಭಗವತ್ ಗೀತೆಯಲ್ಲಿನ ಶ್ರೀಕೃಷ್ಣನ ಬೋಧನೆಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಾವು ಧರ್ಮವನ್ನು ರಕ್ಷಿಸಿದರೆ, ಧರ್ಮವು ನಮ್ಮನ್ನು ರಕ್ಷಿಸುತ್ತದೆ ಎಂಬ ಶ್ರೀಕೃಷ್ಣ ಪರಮಾತ್ಮನ ಮಾತು ಅಕ್ಷರಶಃ ಸತ್ಯ.ಗೋಕುಲಾಷ್ಟಮಿಯ ಪವಿತ್ರ ದಿನವಾದ ಇಂದು ತಮ್ಮೆಲ್ಲರಲ್ಲಿ ನನ್ನದೊಂದು ಮನವಿ. ಈ ದಿನ ತಾವು ಶ್ರೀಕೃಷ್ಣನ 208 ನಾಮಗಳನ್ನು ಜಪಿಸಬೇಕು, ಇದು ಬಹಳ ಮುಖ್ಯ. ಅಲ್ಲದೆ ಎಲ್ಲರೂ ತಪ್ಪದೆ ಭಗವತ್ ಗೀತೆ ಓದುವುದನ್ನು ರೂಢಿಸಿಕೊಳ್ಳಿ. ಈ ಸಂದರ್ಭದಲ್ಲಿ ಪಾಲಕರು ಅಂಗನವಾಡಿ ಸಹಾಯಕರು ಸೇರಿದಂತೆ ಇತರರು ಇದ್ದರುಜಗದೋದ್ಧಾರಕ  ಶ್ರೀಕೃಷ್ಣ ಪರಮಾತ್ಮನು ಕೊರೋನಾ ಎಂಬ ಮಹಾಮಾರಿಯನ್ನು ಹೊಡೆದೋಡಿಸಿ, ಮನು ಕುಲಕ್ಕೆ ಬಂದಿರುವ ಕಂಟಕವನ್ನು ದೂರ ಮಾಡಲಿ ಎಂದು ಹೇಳಿದರು. 


ಸುದ್ದಿ ಓದಿ