ಗೋಶಾಲೆಯಲ್ಲಿ ಶ್ರೀಗಳ ಪಾದಪೂಜೆ
ಲೋಕದರ್ಶನ ವರದಿ
ಶಿಗ್ಗಾವಿ 12: ತಾಲೂಕಿನ ಗಂಗಿಭಾವಿಯ ಶಶಿಧರ ಯಲಿಗಾರ ರೆಸಾರ್ಟನಲ್ಲಿ ಬಂಕಾಪೂರ ಷ.ಬ್ರ. ರೇವಣಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಅರಳೇಲೆ ಹಿರೇಮಠದ ಶ್ರೀಗಳ 64ನೇ ವರ್ಷದ ಹುಟ್ಟು ಹಬ್ಬದ ನಿಮಿತ್ಯ ಸಿ.ಬಿ.ಯಲಿಗಾರ ಸಂಸ್ಥೆಯ ಅಧ್ಯಕ್ಷ ಶಶಿಧರ ಯಲಿಗಾರ ಹಾಗೂ ಅವರ ಧರ್ಮಪತ್ನಿ ಸುನೀತಾ ಶಶೀಧರ ಯಲಿಗಾರ, ಆಕಾಶ ಯಲಿಗಾರ, ಆರಾಧ್ಯ ಯಲಿಗಾರ ನೇತೃತ್ವದಲ್ಲಿ ಗೋಶಾಲೆಯಲ್ಲಿ ಶ್ರೀಗಳ ಪಾದಪೂಜೆ ಜರುಗಿತು. ಈ ಸಂದರ್ಭದಲ್ಲಿ ಹಿರೇಮಣಕಟ್ಟಿಯ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಬಸವಣ್ಣೆಪ್ಪ ಬನ್ನಿಕಲ್ಲ, ನೀಲಮ್ಮ ಬನ್ನಿಕಲ್ಲ, ನಾಗರಾಜ ಸೂರಗೊಂಡ, ಬಸವರಾಜ ಕುರಗೋಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.