ಕ್ರೀಡೆ ಜೀವನದ ಅವಿಭಾಜ್ಯ ಅಂಗವಾಗಿ ಬೆಳೆಯಬೇಕು : ವಿಶ್ವಾಸ ವೈದ್ಯ
ಯರಗಟ್ಟಿ 9: : ಇತ್ತಿಚೀನ ದಿನಮಾನಗಳಲ್ಲಿ ಇಂತಹ ಗ್ರಾಮೀಣ ಕ್ರೀಡೆ ಬಹಳ ಅವಶ್ಯಕತೆ ಇದೆ. ಸದೃಢ ದೇಹವನ್ನು ಹೊಂದಿದರೆ ಆರೋಗ್ಯಕರ ಮನಸ್ಸು ಹೊಂದಲು ಸಾಧ್ಯ. ಎಲ್ಲಾ ಪೋಷಕರು ತಮ್ಮ ಮಕ್ಕಳಿಗೆ ಪಠ್ಯದ ಜೊತೆಗೆ ಪಠ್ಯೆತರ ಚಟುವಟಿಕೆಗಳನ್ನು ತಿಳಿಸಿಕೊಡಿ. ಕಡಬಿ ಗ್ರಾಮವೇಂದರೆ ಒಂದು ಬಾರಿ ಮಾತು ಕೊಟ್ಟು ನಂಬಿದರೆ ಯಾವತ್ತು ಕೈ ಬಿಡದ ಗ್ರಾಮವೇಂದರೆ ಅದು ಕಡಬಿ ಗ್ರಾಮ ಎಂದು ನಾನು ಭಾವಿಸುತ್ತೇನೆ. ಸುಮಾರು 800ಕ್ಕೂ ಹೆಚ್ಚು ಮತಗಳನ್ನು ನೀಡಿ ನನಗೆ ಆಶೀರ್ವದಿಸಿದ್ದಿರಿ. ಈ ಗ್ರಾಮದ ಜನತೆಗೆ ನಾನು ಎಷ್ಟು ಅಭಿನಂದನೆ ಸಲ್ಲಿಸಿದರು ಕೂಡ ಕಡಿಮೆ ಎಂದು ಭಾವಿಸುತ್ತೇನೆ. ಯಾವ ಜನ್ಮದ ಪುಣ್ಯನೋ, ಋಣನೋ ಗೊತ್ತಿಲ್ಲ ಈ ಕ್ಷೇತ್ರದ ಈ ಪುಣ್ಯ ನೆಲದಲ್ಲಿ ಹುಟ್ಟಿ ತಮ್ಮ ಸೇವೆಯನ್ನು ಮಾಡುವಂತಹ ಅವಕಾಶವನ್ನು ನನಗೆ ಆ ತಾಯಿ ಯಲ್ಲಮ್ಮ ನನಗೆ ಕಲ್ಪಿಸಿ ಕೊಟ್ಟಿದ್ದಾಳೆ. ಅದನ್ನ ಸದುಪಯೋಗ ಪಡೆಸಿಕೊಂಡು ನಿಮ್ಮೆಲ್ಲರ ಸೇವೆಯನ್ನು ನಿಮ್ಮ ಅಣ್ಣ ತಮ್ಮನಾಗಿ ನಿಮ್ಮ ಸ್ನೇಹಿತನಾಗಿ ಒಳ್ಳೆಯ ನಡುವಳಿಕೆಯನ್ನು ಇಟ್ಟಕೊಂಡು ನಿರಂತರವಾಗಿ ನನ್ನ ಉಸಿರು ಇರುವರೆಗೂ ತಮ್ಮ ಜೊತೆಗೆ ನಾನು ನಿಮ್ಮ ಸೇವೆಯನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಸವದತ್ತಿ ಶಾಸಕರಾದ ವಿಶ್ವಾಸ ವೈದ್ಯರವರು ಹೇಳಿದರು.
ಸ್ಥಳೀಯ ಗ್ರಾಮದಲ್ಲಿ ಗಣೇಶ ಚತುರ್ಥಿ ನಿಮಿತ್ಯವಾಗಿ ಸ್ಥಳೀಯ ಗಜಾನನ ಮಿತ್ರ ಮಂಡಳಿಯಿಂದ ಆಯೋಜಿಸಿದ್ದ ಕಬಡ್ಡಿ ಪಂದ್ಯಾವಳಿಗಳನ್ನು ಉದ್ಘಾಟಣೆ ಮಾಡಿ ಮಾತನಾಡಿ, ಕ್ರೀಡೆ ಜೀವನದ ಅವಿಭಾಜ್ಯ ಅಂಗವಾಗಿ ಬೆಳೆಯಬೇಕು. ಟಿವಿ, ಮೊಬೈಲ್ನೊಂದಿಗೆ ಆಟ ಆಡುವುದು ಈಚೆಗೆ ಹೆಚ್ಚಾಗುತ್ತಿದೆ ಇದರಿಂದ ದೈಹಿಕ ಸಮಸ್ಯೆಗಳು ಉಲ್ಬಣಗೊಳ್ಳುತ್ತವೆ ಮೈದಾನದಲ್ಲಿ ಕ್ರೀಡೆಯಲ್ಲಿ ತೊಡಗುವುದರಿಂದ ಸದೃಢ ದೇಹ ಹೊಂದುವ ಜೋತೆಗೆ ಬೌದ್ಧಿಕ ಶಕ್ತಿಯನ್ನು ಹೆಚ್ಚಿಸಿಕೋಳ್ಳಬವುದು ಎಂದು ಯುವಕರಿಗೆ ಸಲಹೆ ನೀಡಿದರು. ಕಡಬಿ ಹಾಗೂ ಸುತ್ತಮುತ್ತಲಿನ ಗ್ರಾಮದ ಜನರು ತುಂಬಾ ಬಡತನ ಇರತಹಕಂತ ಜನರು. ಇಲ್ಲಿ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ಏನಿದೆ ಅದನ್ನ ಮೇಲ್ದರ್ಜೆಗೆ ಏರಿಸಿ 30 ಹಾಸಿಗೆಯುಳ್ಳ ಸುಸಜ್ಜಿತ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೆ ಏರಿಸುವ ಕನಸನ್ನು ಹೊತ್ತುಕೋಡಿದ್ದೇನೆ. ಈಗಾಗಲೇ ಪ್ರಚಾರಕ್ಕಾಗಿ ಪ್ರಸ್ತಾವಣೆಯನ್ನು ಸಲ್ಲಿಸಿ ಆಡಳಿತಾತ್ಮಕ ಅನಮೋದನೆ ಬಂದಿದೆ. ಮುಂದಿನ ದಿನಗಳಲ್ಲಿ 30 ಹಾಸಿಗೆಯುಳ್ಳ ಸುಸಜ್ಜಿತ ಆಸ್ಪತ್ರೆಯನ್ನು ಪ್ರಾಮಾಣಿಕವಾಗಿ ನಿರ್ಮಾಣ ಮಾಡಿಕೊಡುತ್ತೇನೆ. ಲೋಕೋಪಯೋಗಿ ಇಲಾಖೆಯ ನಮ್ಮ ನಿಮ್ಮೆಲ್ಲರ ಸಚಿವರಾದ ಸನ್ಮಾನ್ಯ ಸತೀಶಣ್ಣಾ ಜಾರಕಿಹೊಳಿರವರು ಸುಮಾರು 14 ಕೋಟಿ ರೂಪಾಯಿ ವೆಚ್ಚದಲ್ಲಿ ಯರಝರ್ವಿಯಿಂದ ಕಡಬಿವರೆಗೆ ಒಂದು ಅದ್ಭುತವಾದ ರಾಜ್ಯ ಹೆದ್ದಾರಿಗೆ ಪ್ರಧಾನವನ್ನು ಶುರು ಮಾಡಿದ್ದಾರೆ. ಈ ಸಂದರ್ಭದಲ್ಲಿ ಸತೀಶಣ್ಣಾ ಜಾರಕಿಹೊಳಿರವರಿಗೆ ನನ್ನಿಂದ ಹಾಗೂ ಗ್ರಾಮದ ವತಿಯಿಂದ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಇಲ್ಲಿ ಇರತಕ್ಕಂತ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುತ್ತೇನೆ. ನಿಮ್ಮ ಹಾಗೂ ಸತೀಶಣ್ಣಾ ಜಾರಕಿಹೊಳಿರವರ ಆಶೀರ್ವಾದದಿಂದ ಒಳ್ಳೆಯ ಕೆಲಸಗಳು ನಡೆಯುತ್ತೀವೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ಒಳ್ಳೆಯ ಕೆಲಸಗಳನ್ನು ನಾನು ಮಾಡುತ್ತೇನೆ. ಶ್ರೀ ಸಿದ್ದಾರೂಢರ ಮಠದ ಆವರಣದಲ್ಲಿ ಒಂದು ಸುಸಜ್ಜಿತ ಕಲ್ಯಾಣ ಮಂಟಪವನ್ನು ನಿರ್ಮಾಣ ಮಾಡಿ ಇಲ್ಲಿ ಇರತಕಂತ ಜನರಿಗೆ, ಬಡವರಿಗೆ ಹಾಗೂ ಬೇರೆಯವರ ಊರಿಂದ ಬರತಕಂತ ಜನರಿಗೆ ಅನುಕೂಲವಾಗುವಂತ ಕೆಲಸವನ್ನು ನಾನು ಅತೀ ಶೀಘ್ರದಲ್ಲಿ ಮಾಡುತ್ತೇನೆ ಎಂದರು.
ಸಂದರ್ಭದಲ್ಲಿ ಯರಝರ್ವಿ ಮಠದ ಯಲ್ಲಾಲಿಂಗ ಮಹಾಸ್ವಾಮಿಗಳು, ಜ್ಯೋತೆಪ್ಪ ಮಹಾಸ್ವಾಮಿಗಳು, ಗ್ರಾಪಂ ಅಧ್ಯಕ್ಷರು ಫಕೀರ್ಪ ಸುಣಧೋಳಿ, ಚಾಯಪ್ಪ ಹುಂಡೇಕಾರ, ರೇವಪ್ಪ ರೆಬ್ಬನ್ನವರ, ಸಂಜು ಹುಂಡೇಕಾರ, ಪ್ರಕಾಶ ವಾಲಿ, ಲಕ್ಷ್ಮಣ ಕುಂಟಿರ್ಪಗೋಳ, ಷಣ್ಮುಖ ಮಾಳಕ್ಕನವರ, ಗಂಗಪ್ಪ ಮೀಶಿ, ತಿಪ್ಪಣ್ಣ ಉದಗಟ್ಟಿ, ಗಜಾನನ ಮಿತ್ರ ಮಂಡಳಿ ಹಾಗೂ ಕಾಂಗ್ರೇಸ ಮುಖಂಡರು ಉಪಸ್ಥೀತರಿದ್ದರು.