ರಾಣೆಬೆನ್ನೂರು ಆರ್ಟಿಇಎಸ್ ಕಾಲೇಜಿನಲ್ಲಿ ಕ್ರೀಡಾ ದಿನಾಚರಣೆ
ರಾಣೆಬೆನ್ನೂರು 11: ನಗರ ಹೊರವಲಯದ ಆರ್ ಟಿ ಇ ಎಸ್ ಕಾಲೇಜು, ಸಾಹುಕಾರ ಸಭಾಭವನದಲ್ಲಿ ಇತ್ತೀಚೆಗೆ ರಾಷ್ಟ್ರೀಯ ಕ್ರೀಡಾ ದಿನಾಚರಣೆ ನಡೆಯಿತು. ನೆಹರು ಯುವ ಕೇಂದ್ರ, ಯುವ ವ್ಯವಹಾರಗಳ ಸಚಿವಾಲಯ, ರಾಷ್ಟ್ರೀಯ ಸೇವಾ ಯೋಜನಾ ಘಟಕ ರಾ.ತಾ ಶಿ ಸಂಸ್ಥೆ, ಐಕ್ಯೂಎಸಿ ಕೋಶ ಮತ್ತು ಯುವಕ-ಯುವತಿ ಮಂಡಳಿಗಳು ಸಂಯುಕ್ತವಾಗಿ ಆಯೋಜಿಸಿದ್ದವು. ದಿನಾಚರಣೆ ಉದ್ಘಾಟಿಸಿದ ನೆಹರು ಯುವ ಕೇಂದ್ರದ, ಹೇಮಗಿರಿ ಅಂಗಡಿ ಅವರು, ಮಾನಸಿಕ ದೈಹಿಕ ಬೌದ್ಧಿಕ ಬೆಳವಣಿಗೆಗೆ ನಮ್ಮ ರಾಷ್ಟ್ರೀಯ ಕ್ರೀಡೆಗಳು ಅತ್ಯಂತ ಸಹಕಾರಿಯಾಗಿದೆ. ಯುವ ಸಮುದಾಯ ನಾಲ್ಕು ಗೋಡೆಗಳ ಮಧ್ಯೆ ನಡೆಯುವ ಪಾಠ ಪ್ರವಚನಗಳಿಗೆ ಮಾತ್ರ ಸೀಮಿತವಾಗದೆ, ಕ್ರೀಡೆ, ಕಲೆ, ಸಾಹಿತ್ಯ, ಸಂಗೀತ ಮತ್ತು ಜಾನಪದ ಕಲೆಗಳನ್ನು ನಿತ್ಯದ ಬದುಕಿನಲ್ಲಿ ಅಳವಡಿಸಿಕೊಂಡು ವ್ಯಕ್ತಿತ್ವವನ್ನು ನಿ ರೂಪಿಸಿಕೊಳ್ಳಲು ಮುಂದಾಗಬೇಕು ಎಂದರು. ಕಾಲೇಜು ಪ್ರಾಚಾರ್ಯ ಸಿ. ಎ.ಹರಿಹರ ಅವರು, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕ್ರೀಡೆಗಳ ಪಿತಾಮಹ, ಮೇಜರ್ ಧ್ಯಾನ್ ಚಂದ್ ಅವರ, ಜೀವನ ಮತ್ತು ಸಾಧನೆ ಕುರಿತು, ಸಂಪನ್ಮೂಲ ವ್ಯಕ್ತಿಯಾಗಿದ್ದ, ಎನ್ ಬಸವರಾಜ್ ಅವರು ವಿಶೇಷ ಉಪನ್ಯಾಸ ನೀಡಿದರು. ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಡಾ : ಸರಸ್ವತಿ ಬೊಮ್ಮನಾಳ,ಅವರುವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಿದರು. ಇನ್ನೋರ್ವ ಸಂಯೋಜನಾಧಿಕಾರಿ ಡಾ : ಮಧುಕುಮಾರ್ ಆರ್, ಬಸವರಾಜ ಕಾಟೇನಹಳ್ಳಿ, ಶಿವಕುಮಾರ ಬೆಣ್ಣಿ, ಸೇರಿದಂತೆ ಕಾಲೇಜು ಉಪನ್ಯಾಸಕರು, ಕ್ರೀಡಾಪಟುಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ರೇವತಿ ಸಂಗಡಿಗರು ಪ್ರಾರ್ಥಿಸಿದರು. ಶರತ್ ಗೌಡ ಎಡಚಿ ಸ್ವಾಗತಿಸಿ ನಿರೂಪಿಸಿದರು.