ಯರಗಟ್ಟಿ

ವಿದ್ಯಾರ್ಥಿಗಳಿಗೆ ಪಾಠದೊಂದಿಗೆ ಕ್ರೀಡೆಗಳು ಮುಖ್ಯ: ಮೋಹನ ದಂಡಿನ

ವಿದ್ಯಾರ್ಥಿಗಳಿಗೆ ಪಾಠದೊಂದಿಗೆ ಕ್ರೀಡೆಗಳು ಮುಖ್ಯ: ಮೋಹನ ದಂಡಿನ

ಯರಗಟ್ಟಿ,22 : ನಮ್ಮ ದೈಹಿಕ ಮಾಗೂ ಮಾನಸಿಕ ಸದೃಢತೆಗೆ ಕ್ರೀಡೆಗಳು ತುಂಬಾ ಸಹಕಾರಿಯಾಗಿದ್ದು, ವಿದ್ಯಾರ್ಥಿಗಳಿಗೆ ಪಾಠದೊಂದಿಗೆ ಕ್ರೀಡೆಗಳು ಮುಖ್ಯವೆಂದು ಬಿಇಓ ಮೋಹನ ದಂಡಿನ ಹೇಳಿದರು. 

ಅವರು ಪಟ್ಟಣ ಬಾಲಾಜಿ ಪ್ರೌಢ ಶಾಲಾ ಆವರಣದಲ್ಲಿ ಆಯೋಜಿಸಿದ ಶಿವಾಪೂರ ವಲಯಗಳ ಪ್ರೌಢ ಶಾಲಾ ವಿಭಾಗದ 2024 25ನೇ ಸಾಲಿನ ವಲಯ ಮಟ್ಟದ ಕ್ರೀಡಾಕೂಟ ಕಾರ್ಯಕ್ರಮದಲ್ಲಿ ಮಾತನಾಡಿದರು.ಕ್ಷೇತ್ರ ಸಮನ್ವಯಾಧಿಕಾರಿ ಬಿ. ಎನ್‌. ಬ್ಯಾಳಿ ಕಾರ್ಯಕ್ರಮ ಉದ್ಘಾಟಿಸಿದರು. ಬಾಲಾಜಿ ಸಂಸ್ಥೆ ಕಾರ್ಯದರ್ಶಿ ರಾಜೇಂದ್ರ ಶೆಟ್ಟಿ ಸೇರಿ ಇತರರು ಮಾತನಾಡಿದರು.ಕ್ರೀಡೆಯಲ್ಲಿ ಶಿವಾಪೂರ ವಲಯಗಳ ಒಟ್ಟು 5 ಶಾಲೆಗಳು ಭಾಗವಹಿಸಿದ್ದವು. 

ಈ ವೇಳೆ ಸಂಸ್ಥೆಯ ಅಧ್ಯಕ್ಷ ಮಾತೋಶ್ರೀ ವೆಂಕವ್ವ ಯರಡ್ಡಿ, ಕೃಷ್ಣಮೂರ್ತಿ ತೊರಗಲ್, ಎಂ. ಎಂ. ವಿರಕ್ತಮಠ, ಸಂಜು ಬಾಂಡವಾಲಕರ, ಕಾಳಪ್ಪ ಬಡಿಗೇರ, ಪ್ರಕಾಶ ಕೊಪ್ಪದ, ಮುಖ್ಯೋಪಾಧ್ಯಾಯ ಎ. ಎಚ್‌. ವಜ್ರಮುಟ್ಟಿ, ಶಿಕ್ಷಕರಾದ ಎಮ್‌. ಬಿ. ಸುತಗಟ್ಟಿ, ಬಿ. ಪಿ. ಪಟ್ಟಣಶೆಟ್ಟಿ, ವ್ಹಿ. ಎನ್‌. ರೆಡ್ಡಿ, ಎಸ್‌. ಜೆ. ಹಳ್ಳಂಡಿ, ಎಮ್‌. ಎಸ್‌. ಇಟ್ನಾಳ, ಎಸ್‌. ಎನ್‌. ನದಾಫ, ಎಸ್‌. ಎಸ್‌. ಪಾಟೀಲ, ಸೇರಿ ಇತರರಿದ್ದರು. 


ಸುದ್ದಿ ಓದಿ