ಕ್ರೀಡಾಕೂಟ: ಜಿಲ್ಲಾ ಮಟ್ಟಕ್ಕೆ ವಿದ್ಯಾರ್ಥಿಗಳ ಆಯ್ಕೆ
ಸಿಂದಗಿ: ದೇವರ ಹಿಪ್ಪರಗಿಯ ಸಾಲಕ್ಕಿ ಪದವಿ-ಪೂರ್ವ ಕಾಲೇಜಿನ ಆವರಣದಲ್ಲಿ ಜರುಗಿದ ತಾಲೂಕಾ ಮಟ್ಟದ ಕ್ರೀಡಾಕೂಟದ ಬರ್ಚಿ ಎಸೆತ ಸ್ಪರ್ಧೆಯಲ್ಲಿ ಪ್ರೇರಣಾ ಪಬ್ಲಿಕ್ ಸ್ಕೂಲನ್ ವಿದ್ಯಾರ್ಥಿ ಶರತ ಹಂಚಿನಾಳ ಪ್ರಥಮ ಸ್ಥಾನ ಮತ್ತು ಭಾಗೇಶ ತಳವಾರ ದ್ವಿತೀಯ ಸ್ಥಾನ ಪಡೆದುಕೊಂಡು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಮತ್ತು ತರಬೇತಿ ನೀಡಿದ ಶಾಲಾ ದೈಹಿಕ ಶಿಕ್ಷಕ ಪರುಶುರಾಮ ಕುಂಟೋಜಿ ಅವರಿಗೆ ಸಂಸ್ಥೆಯ ಅಧ್ಯಕ್ಷರಾದ ಕೆ.ಎ.ಕುಲಕರ್ಣಿ, ನಿರ್ದೇಶಕ ಕ.ಆ. ಕುಲಕರ್ಣಿ, ಮುಖ್ಯಶಿಕ್ಷಕರು, ಎಲ್ಲ ಬೋಧಕ ಸಿಬ್ಬಂದಿ ಹಾಗೂ ವಿದ್ಯಾರ್ಥಿ ಬಳಗದ ವತಿಯಿಂದ ಅಭಿನಂದನೆ ಸಲ್ಲಿಸಿದ್ದಾರೆ.