ಜಮಖಂಡಿ

ಆಧ್ಯಾತ್ಮಿಕ ತಿಳುವಳಿಕೆಯು ಯುವಕರಿಗೆ ಬೇಕಾಗಿದೆ: ಶಾಸಕ ನ್ಯಾಮಗೌಡ

ಆಧ್ಯಾತ್ಮಿಕ ತಿಳುವಳಿಕೆಯು ಯುವಕರಿಗೆ ಬೇಕಾಗಿದೆ: ಶಾಸಕ ನ್ಯಾಮಗೌಡ

ಜಮಖಂಡಿ05: ಆಧ್ಯಾತ್ಮಿಕ ಚಿಂತನೆಗಳ ಅವಶ್ಯಕತೆಯು ಯುವಕರಿಗೆ ಅವಶ್ಯಕತೆ ಬೇಕಾಗಿದೆ. ವಯೋವೃದ್ಧರಿಗಿಂತ ಎರಡು ಪಟ್ಟು ಆಧ್ಯಾತ್ಮಿಕ ತಿಳುವಳಿಕೆಯು ಯುವಕರಿಗೆ ಬೇಕಾಗಿದೆ ಎಂದು ಶಾಸಕ ಆನಂದ ನ್ಯಾಮಗೌಡ ಹೇಳಿದರು. 

ನಗರದ ಚೌಧರಿ ಪ್ಲಾಟ್‌ದಲ್ಲಿ ನಡೆದ ಪವಿತ್ರವನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ಆಧ್ಯಾತ್ಮಿಕ ಶಿಕ್ಷಣ ತರಬೇತಿ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಜೀವದಲ್ಲಿ ಕಷ್ಟ-ಸುಖಗಳು ಬರುತ್ತವೆ. ಕಷ್ಟವನ್ನು ಮೆಟ್ಟಿ ಯಾರು ಜೀವನವನ್ನು ಸಾಗಿಸುತ್ತಾರೆ ಅವರು ತಮ್ಮ ಜೀವದಲ್ಲಿ ಸಾಧನೆಯನ್ನು ಗೆಲುತ್ತಾರೆ. ಇಂದಿನ ಯುವಕರು ಆಧ್ಯಾತ್ಮದ ಕಡೆಗೆ ಹೆಚ್ಚು ಗಮನ ಹರಿಸುತ್ತಿಲ್ಲ. ಆದರೆ ಯುವಕರಲ್ಲಿ ದುಷ್ಟಶಕ್ತಿಗಳು ಹೆಚ್ಚಾಗಿ ಇರುತ್ತವೆ. ಅವುಗಳನ್ನು ಹೋಗಲಾಡಿಸಿಕೊಳ್ಳಬೇಕಾದರೆ. ಇಂತಹ ಧಾರ್ಮಿಕ ಆಧ್ಯಾತ್ಮದ ಕಡೆಗೆ ಹೆಚ್ಚು ಒಲವು ನೀಡಿದರೆ ಮಾತ್ರ ಮನಸಿಗೆ ನೆಮ್ಮದಿ ದೊರೆಯಲು ಸಾಧ್ಯವಾಗುತ್ತದೆ ಎಂದರು.  

ಪವಿತ್ರವನದ ಆಧ್ಯಾತ್ಮಿಕ ಶಿಕ್ಷಣ ತರಬೇತಿ ಕೇಂದ್ರಕ್ಕೆ 10,ಲಕ್ಷ ರೂ, ನೀಡುತ್ತೇನೆಂದು ವಾಗ್ದಾನ ಮಾಡಿದೆ. ಆದರೆ ಇವಾಗ 5,ಲಕ್ಷ ರೂ,ಗಳನ್ನು ನೀಡಿದೇನೆ. ಮತ್ತೇ ಉಳಿದ ಹಣವನ್ನು ನೀಡುತ್ತೇನೆ. ಇಂದಿನ ದಿನಮಾನಗಳಲ್ಲಿ ಆಧ್ಯಾತ್ಮಿಕ ಶಿಕ್ಷಣದ ಅವಶ್ಯಕತೆಯು ಬಹಳ ಮುಖ್ಯವಾಗಿದೆ. ಬ್ರಹ್ಮಕುಮಾರಿ ಈಶ್ವರಿಯ ಮಹಾವಿದ್ಯಾಲಯವು ಆಧ್ಯಾತ್ಮಿಕತೆ ಬಗ್ಗೆ ಶಿಕ್ಷಣವನ್ನು ಪ್ರಾರಂಭ ಮಾಡುತ್ತಿರುವದು ಶ್ಲಾಘನೀಯವಾಗಿದೆ ಎಂದರು. 

ಲಂಡನನಿಂದ ಆಗಮಿಸಿದ ಬ್ರಹ್ಮಾಕುಮಾರಿಸ್ ಸಂಸ್ಥೆ ಹೆಚ್ಚುವರಿ ಮುಖ್ಯಸ್ಥೆ ರಾಜಯೋಗಿನಿ ಬ್ರಹ್ಮಕುಮಾರಿ ಜಯಂತಿ ದೀದೀಜಿ ಮಾತನಾಡಿದ ಅವರು, ಚಿಕ್ಕದಾದ ಬೆಳಕಿನಿಂದ ಅಂಧಕಾರವನ್ನು ತೊಲಗಿಸಲು ಸಾಧ್ಯವಾಗುತ್ತದೆ. ಹಾಗೆಯೇ ರಾಜ ಯೋಗದಿಂದ ಮನಸಿನಲ್ಲಿ ಅಡಗಿರುವ ಅಂಧಕಾರವನ್ನು ಆಧ್ಯತ್ಮಿಕತೆಯು ಕಳೆದು ಎಲ್ಲರ ಜೀವನದಲ್ಲಿ ಹೊಸ ಚೈತನ್ಯ ಮೂಡಿಸುತ್ತಿದೆ ಎಂದರು. 

ಮೊದಲು ನಾನು ನನ್ನ ಕುಟುಂಬ ಬದಲಾದರೆ ಪ್ರಪಂಚ ಬದಲಾಗುತ್ತದೆ. ಪರಿಶುದ್ಧ ಮನಸ್ಸಿನ ಪ್ರೀತಿಯಿಂದ ಪರಿವರ್ತನೆಯಾಗಲು ಸಾಧ್ಯ. ಮಾನವನ ಕ್ರೋಧದಿಂದ ಅಲ್ಲ. ಶಾಂತಿಯಿಂದ ಪರಿವರ್ತನೆಯಾಗಲು ಸಾಧ್ಯ. ಮನುಷ್ಯನ ದೃಷ್ಟಿ ಬದಲಾದರೆ ಪ್ರಕೃತಿ ಬದಲಾಗುತ್ತೆ. ಪ್ರಕೃತಿ ಬದಲಾದರೆ ಸಂಸ್ಕೃತಿ ಬದಲಾಗುತ್ತದೆ. ಸಂಸ್ಕೃತಿ ಬದಲಾದರೆ ಈ ಸೃಷ್ಟಿಯೇ ಬದಲಾಗುತ್ತೆ. ಶಿವನ ನೆನೆಯದ ಜೀವ ಶವಕ್ಕೆ ಸಮಾನ. ನಮ್ಮಲ್ಲಿರುವ ಜ್ಯೋತಿ ಸ್ವರೂಪವನ್ನು ಹೊರತಂದು ಈಶ್ವರನಿಗೆ ಹತ್ತಿರವಾಗೋಣ ಎಂದು ಆರ್ಶೀವಚನ ನೀಡಿದರು. 

ಹುಲ್ಯಾಳದ ಗುರುದೇವ ಆಶ್ರಮದ ಹರ್ಷಾನಂದ ಶ್ರೀಗಳು ಮಾತನಾಡಿ, ಮಠ-ಮಂದಿರ-ಆಶ್ರಮಗಳಲ್ಲಿ ಜ್ಞಾನವನ್ನು ಮಾಡುತ್ತಿದರು. ಇವಾಗ ಮನಸಿಗೆ ನೆಮ್ಮದಿಯಿಂದ ಇರಲು ಆಧ್ಯತ್ಮಿಕ ಶಿಕ್ಷಣ ದೊರುತ್ತಿದೆ. ಸಂಸಾರದಲ್ಲಿ ದುಃಖ-ಕಷ್ಟಗಳನ್ನು ಅನುಭವಿಸಿ. ದುಃಖದಿಂದ ದೂರವಾಗಬೇಕಾದರೆ ಆಧ್ಯಾತ್ಮಿಕತೆ ಬಹಳ ಮುಖ್ಯವಾಗಿದೆ. ಗಾಳಿಯೊಳ್ಳಗಿನ ದೀಪ ಯಾವಗ ಆರುತ್ತದೆ ತಿಳಿಯುವುದಿಲ್ಲ. ಹಾಗೆ ಜೀವನ ಎಂಬುವುದು ಯಾವಾಗ ಆರುತ್ತದೆ ಎಂಬುವುದು ತಿಳಿಯದು. ಆದರೆ ಹಿರಿಯರ ಮಾತುಗಳನ್ನು ಎಲ್ಲರು ತಿಳಿದುಕೊಳಬೇಕೆಂದು ಆರ್ಶೀವಚನ ನೀಡಿದರು. 

ಓಲೇಮಠದ ಡಾ,ಚನ್ನಬಸವ ಮಾಹಾಸ್ವಾಮೀಜಿ ಮಾತನಾಡಿದ ಅವರು, ಜೀವನದಲ್ಲಿ ಜ್ಞಾನದ ಜೊತೆಗೆ ಆಧ್ಯಾತ್ಮಿಕತೆಯು ಅವಶ್ಯವಾಗಿದೆ. ತಮ್ಮ ಜೀವನದಲ್ಲಿ ಇಂತಹ ಆಧ್ಯಾತ್ಮಿಕತೆ ಶಿಕ್ಷಣವು ಬಹಳ ಮುಖ್ಯವಾಗಿದೆ. ಜಮಖಂಡಿ ಶಾಸಕ ಆನಂದ ನ್ಯಾಮಗೌಡ ಅವರಂತೆ ತೇಜಸು ಹೊಂದಿದ್ದಾರೆ. ಅವರಂತೆ ಇಂದಿನ ಯುವಕರು ಸಹ ಅವರಂತೆ ಮುಖದಲ್ಲಿ ತೇಜಸುವನ್ನು ಹೊಂದಬೇಕು. ಅನ್ನದಾನದಲ್ಲಿ ಕೊಡುಗೈ ದಾನಿಗಳಾದ ಜಗದೀಶ ಗುಡಗುಂಟಿ ಅವರು ಇದ್ದಾರೆ ಎಂದು ಕೊಂಡಾಡಿ ಆರ್ಶೀವಚನ ನೀಡಿದರು. 

ರಬಕವಿ ಬ್ರಹ್ಮಾನಂದ ಮಠದ ಗುರುಸಿದ್ದೇಶ್ವರ ಶ್ರೀಗಳು ಆರ್ಶೀವಚನ ನೀಡಿದರು, ಜಗದೀಶ ಗುಡಗುಂಟಿ, ಸುನಂದಾ ಬೆಹನಜಿ ಮಾತನಾಡಿದರು,   

ಬ್ರಹ್ಮಕುಮಾರಿ ಅಂಬಿಕಾ ಅಕ್ಕನವರು, ಮೃತ್ಯಂಜಯ ಅಣ್ಣಾಜಿ, ರಾಜಸ್ಥಾನ ಮೌಂಟ್ ಅಬು ಶಿಕ್ಷಕಿ ಹಂಸಾ ಬೆಹೆನ್, ಜಮಖಂಡಿ ಮತ್ತು ಗೋಕಾಕ ಸೇವಾ ಕೇಂದ್ರ ಸಂಚಾಲಕಿ ಮೀರಾ ಅಕ್ಕನವರು, ಮಾಜಿ ವಿಪ ಸದಸ್ಯ ಜಿ. ಎಸ್‌. ನ್ಯಾಮಗೌಡ, ನಗರಸಭೆ ಪೌರಾಯುಕ್ತೆ ಲಕ್ಷ್ಮಿ ಅಷ್ಟಗಿ, ಶಿಕ್ಷಣಾಧಿಕಾರಿ ಅಶೋಕ ಬಸನ್ನವರ, ಕನ್ನಡ ಸಂಘದ ಅಧ್ಯಕ ಅರುಣಕುಮಾರ ಶಹಾ, ಡಾ. ಎಚ್‌. ಜಿ. ದಡ್ಡಿ, ಸುಶೀಲಕುಮಾರ ಬೆಳಗಲಿ, ಸಂತೋಷ ತಳಕೇರಿ, ಎಸ್‌. ಎಚ್‌. ಲಗಳಿ, ಬಸವರಾಜ ಕಡ್ಡಿ, ಸಂಗಮೇಶ ಮಟೋಳಿ, ವೀಣಾ ಬನ್ನಂಜೆ, ರಾಜಸ್ಥಾನ ನಾಗೇಶ ಅಣ್ಣ, ಲಖನೌ ರಾಧಾ ಬೆಹೆನ್‌ಜಿ, ಗೋವಾ_ಶೋಭಾ ಬೆಹನಜಿ, ಬೈಲಹೊಂಗಲ ಅಂಜಲಿ ಅಕ್ಕನವರು, ಮಹಾದೇವಿ ಅಕ್ಕನವರು, ರಾಜಸ್ಥಾನ ವಿಜಯಲಕ್ಷ್ಮಿ ಬೆಹನ್‌ಜಿ, ಪದ್ಮಾ ಬೆಹನಜಿ, ಉಮಾ ಅಕ್ಕನವರು, ಲೀಲಾ ಅಕ್ಕನವರು,ಕಲಾ ಅಕ್ಕನವರು, ಪಿಯುಶ್ ಭಾಯಿಜಿ, ಪ್ರಕಾಶ ಭಾಯಿಜಿ, ಶಿವಾನಂದ ಅಣ್ಣನವರು,  ಅಚ್ಯುತ ಅಣ್ಣನವರು, ಪಿ,ಎಚ್,ಮಹೇಂದ್ರ​‍್ಪ, ಶರಬಸಪ್ಪ ಹೀರಾ ಅನೇಕರು ವೇದಿಕೆಯಲ್ಲಿ ಉಪಸ್ಥಿತರಿದರು, 

ಎ,ಬಿ, ನಗರದ ಚೌಧರಿ ಪ್ಲಾಟ್‌ದಲ್ಲಿ ನಡೆದ ಪವಿತ್ರವನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ಆಧ್ಯಾತ್ಮಿಕ ಶಿಕ್ಷಣ ತರಬೇತಿ ಕೇಂದ್ರವನ್ನು ಶಾಸಕ ಆನಂದ ನ್ಯಾಮಗೌಡ ಅವರು ಉದ್ಘಾಟಿಸಿ ಮಾತನಾಡುತ್ತಿರುವುದು. 


ಸುದ್ದಿ ಓದಿ