ಅಮಾವಾಸ್ಯೆಯ ಅಂಗವಾಗಿ ಮಂದಿರಗಳಲ್ಲಿ ವಿಶೇಷ ಪೂಜೆ
ಯರಗಟ್ಟಿ 04: ಮಹಾಲಯ ಅಮಾವಾಸ್ಯೆಯ ಅಂಗವಾಗಿ ಪಟ್ಟಣದ ಶಕ್ತಿದೇವತೆ ರಾಜರಾಜೇಶ್ವರಿ ಮಂದಿರಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ದುರ್ಗಾದೇವಿಯ ಮೂರ್ತಿ ಪ್ರತಿಷ್ಠಾಪನೆ ಮಾಡಿ ಕೆಲ ಮಂದಿರಗಳಲ್ಲಿ ಘಟ್ಟ ಸ್ಥಾಪನೆ ಮಾಡಲಾಯಿತು. ಪಟ್ಟಣದ ಗ್ರಾಮದೇವಿಯರ ದೇವಸ್ಥಾನ, ಯಲ್ಲಮ್ಮದೇವಿ ದೇವಸ್ಥಾನದಲ್ಲಿ ದುರ್ಗಾದೇವಿ, ಮಾಯಮ್ಮದೇವಿ, ಮಾರುತೇಶ್ವರ ದೇವಸ್ಥಾನ, ಅಯ್ಯಪ್ಪ ಸ್ವಾಮಿ ದೇವಾಲಯಜಲ್ಲಿ 9 ದಿನಗಳ ದೀಪ ಬೆಳಗಿಸಲಾಯಿತು. ದೈವಿಶಕ್ತಿಯ ಧ್ಯೋತಕವೆಂದೇ ದುರ್ಗೆಯ ಪ್ರತಿಮೆಗಳನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಮಾಡಲಾಯಿತು. ಒಂಬತ್ತು ದಿನ ನಿತ್ಯ ವಿಶೇಷ ಪೂಜೆ ಹಾಗೂ ಅಲಂಕಾರ ನಡೆಯಲಿದೆ. ನವರಾತ್ರಿ ಉತ್ಸವದ ಪ್ರಯುಕ್ತ ದೇಗುಲಗಳನ್ನು ಹೂವು, ತಳಿರು ತೋರಣಗಳಿಂದ ಅಲಂಕರಿಸಲಾಗಿದೆ. ಈ ವೇಳೆ ಪೂಜೆ ಗಣಪತಿ ಮಹಾರಾಜರು, ಮಡಿವಾಳಪ್ಪ ವನ್ನೂರ ದೇವಿ ಪಾರಾಯಣ ಮಾಡಿದರು, ಡಾ. ವಿಶ್ವನಾಥ ತಾವಂಶಿ, ಪಿ. ಎಚ್. ಪಾಟೀಲ, ರಾಜೇಂದ್ರ ವಾಲಿ, ರಾಜೇಂದ್ರ ಶೆಟ್ಟಿ, ಚಿದಾನಂದ ಕದಂ, ಭಾಸ್ಕರ ಹಿರೇಮೆತ್ರಿ, ಮೈತ್ರಾ ಹೊಂಗಲ ಸೇರಿದಂತೆ ಅನೇಕರು ಇದ್ದರು.