ಕಾರವಾರ

ಪ್ರೇಕ್ಷಣಿಯ ಸ್ಥಳಗಳ ವಿಕ್ಷಣೆಗೆ ವಿಶೇಷ ಸಾರಿಗೆ ವ್ಯವಸ್ಥೆ

ಪ್ರೇಕ್ಷಣಿಯ ಸ್ಥಳಗಳ ವಿಕ್ಷಣೆಗೆ ವಿಶೇಷ ಸಾರಿಗೆ ವ್ಯವಸ್ಥೆ

ಕಾರವಾರ 19: ವಿಶ್ವ ಪ್ರಸಿದ್ಧ ಪ್ರೇಕ್ಷಣಿಯ ಸ್ಥಳಗಳಾದ ಜೋಗ ಜಲಪಾತ ಮತ್ತು ಮುರ್ಡೇಶ್ವರ ವೀಕ್ಷೆಣೆಗಾಗಿ ಕಾರವಾರ, ಯಲ್ಲಾಪುರ ಹಾಗೂ ಕಾರವಾರದಿಂದ ಮುರುಡೇಶ್ವರ್ ಸಂಚರಿಸಲಿಚ್ಚಿಸುವ ಪ್ರಯಾಣಿಕರಿಗಾಗಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಶಿರಸಿ ವಿಭಾಗ ಜುಲೈ 24ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ವಿಶೇಷ ಸಾರಿಗೆ ಬಸ್‌ಗಳ ಓಡಾಟದ ಪ್ಯಾಕೆಜ್‌ನ್ನು ಪ್ರಾರಂಭಿಸಲಿದೆ ಎಂದು ವಾಕರಸಾ ಸಂಸ್ಥೆಯ ಶಿರಸಿ ವಿಭಾಗೀಯ ನಿಯಂತ್ರಣಾಧಿಕಾರಿ ಎಂ. ರಾಜ್‌ಕುಮಾರ್ ಪ್ರಟಕಣೆಯಲ್ಲಿ ತಿಳಿಸಿದ್ದಾರೆ. 

ಕಾರವಾರದಿಂದ ಬೆಳಿಗ್ಗೆ 8ಕ್ಕೆ ಹೊರಡಲಿರುವ ಬಸ್ 9ಕ್ಕೆ ಅಂಕೋಲಾ, 10ಕ್ಕೆ ಕುಮಟಾ, 10.30ಕ್ಕೆ ಹೊನ್ನಾವರ ತಲುಪಲಿದ್ದು, ಮಾರ್ಗ ಮಧ್ಯದ ಮಿರ್ಜಾನ ಕೋಟೆ ಹಾಗೂ ಬಂಗಾರಮಕ್ಕಿ ವೀರಾಂಜನೇಯ ದೇವಸ್ಥಾನ ಭೇಟಿ ಜೊತೆಗೆ ಮಧ್ಯಾಹ್ನ 12.30ಕ್ಕೆ ಜೋಗಫಾಲ್ಸ್‌ಗೆ ತಲುಪುತ್ತದೆ. ನಂತರ ಪ್ರಯಾನಿಕರಿಗೆ ಜೋಗಫಾಲ್ಸ್‌ ವೀಕ್ಷಣೆಗೆ 4 ಗಂಟೆಗಳ ಕಾಲಾವಕಾಶವಿದ್ದು, ಸಂಜೆ 4:30ಕ್ಕೆ ಬಸ್ ಜೋಗಫಾಲ್ಸ್‌ನಿಂದ ಮರಳಿ ನಿರ್ಗಮಿಸಲಿದೆ. ಕಾರವಾರದಿಂದ ಜೋಗಕ್ಕೆ ಪ್ರಯಾಣಿಸುವ ಪ್ರತೀ ಪ್ರಯಾನಿಕರಿಗೆ ಹೋಗುವ- ಬರುವ(ಣಠಿ ್ಘ ಜಠಟಿ) ಸೇರಿದಂತೆ ಒಟ್ಟು 400 ರೂ ಟಿಕೆಟ್ ದರವನ್ನು ನಿಗಧಿ ಪಡಿಸಲಾಗಿದೆ. 

ಹಾಗೇನೆ ಯಲ್ಲಾಪುರದಿಂದ ಜೋಗಫಾಲ್ಸ್‌ಗೆ ಬೆಳಿಗ್ಗೆ 8ಕ್ಕೆ ಹೊರಡುವ ಬಸ್ 10ಕ್ಕೆ ಶಿರಸಿ, 10.45ಕ್ಕೆ ಸಿದ್ದಾಪುರ ತಲುಪಲಿದ್ದು, ಮಾರ್ಗ ಮಧ್ಯದ ಶಿರಸಿಯ ಮಾರಿಕಾಂಬಾ ದೇವಸ್ಥಾನ ಹಾಗೂ ನಿಪ್ಪಲಿ ಫಾಲ್ಸ್‌ ವೀಕ್ಷಣೆಯೊಂದಿಗೆ ಮಧ್ಯಾಹ್ನ 12.30ಕ್ಕೆ ಜೋಗಫಾಲ್ಸ್‌ಗೆ ತಲುಪುತ್ತದೆ. ನಂತರ ಪ್ರಯಾಣಿಕರಿಗೆ ಜೋಗಫಾಲ್ಸ್‌ ವೀಕ್ಷಣೆಗೆ 4 ಗಂಟೆಗಳ ಕಾಲಾವಕಾಶವಿದ್ದು, ಸಂಜೆ 4.30ಕ್ಕೆ ಬಸ್ ಮರಳಿ ಜೋಗಫಾಲ್ಸ್‌ನಿಂದ ಬರಲಿದೆ. ಯಲ್ಲಾಪುರದಿಂದ ಜೋಗಕ್ಕೆ ಪ್ರತೀ ಪ್ರಯಾಣಿಕರಿಗೆ ಹೋಗುವ-ಬರುವ(ಣಠಿ ್ಘ ಜಠಟಿ) ಸೇರಿದಂತೆ ಒಟ್ಟು 250 ರೂ ಟಿಕೆಟ್ ದರ  ನಿಗಧಿ ಪಡಿಸಲಾಗಿದೆ. 

ಕಾರವಾರದಿಂದ ಮುರ್ಡೇಶ್ವರಕ್ಕೆ ಬೆಳಿಗ್ಗೆ 8ಕ್ಕೆ ಹೊರಡುವ ಬಸ್ 9ಕ್ಕೆ ಅಂಕೋಲಾ, 10ಕ್ಕೆ ಕುಮಟಾ, 10.30ಕ್ಕೆ ಹೊನ್ನಾವರ ತಲಿಪಲಿದ್ದು, ಮಾರ್ಗ ಮಧ್ಯದ ಮಿರ್ಜಾನ ಕೋಟೆ ಹಾಗೂ ಇಕೋ ಬೀಚ್ ವೀಕ್ಷಣೆಯೊಂದಿಗೆ ಮಧ್ಯಾಹ್ನ 12.30ಕ್ಕೆ ಮುರ್ಡೇಶ್ವರ ತಲುಪುತ್ತದೆ. ನಂತರ ಪ್ರಯಾನಿಕರಿಗೆ ಮುಡೇಶ್ವರ ವೀಕ್ಷಣೆಗೆ 4 ಗಂಟೆಗಳ ಕಾಲಾವಕಾಶವಿದ್ದು, ಸಂಜೆ 4:30ಕ್ಕೆ  ಬಸ್ ಮುಡೇಶ್ವರದಿಂದ ಮರಳಿ ನಿರ್ಗಮಿಸುತ್ತದೆ. ಕಾರವಾರದಿಂದ ಮುರ್ಡೇಶ್ವರಕ್ಕೆ ಪ್ರತೀ ಪ್ರಯಾಣಿಕರಿಗೆ(ಣಠಿ ್ಘ ಜಠಟಿ) 300 ರೂ ಟಿಕೆಟ್ ದರ ನಿಗಧಿ ಪಡಿಸಲಾಗಿದೆ. 

ಈ ವಿಶೇಷ ಪ್ಯಾಕೇಜ್‌ನ ಸಾರಿಗೆಯಲ್ಲಿ ಪ್ಯಾಕೆಜ್ ಟೂರ್ ಪ್ರಯಾಣಿಕರನ್ನು ಹೊರತುಪಡಿಸಿ ಇತರೆ ಪ್ರಯಾಣಿಗೆ ಅವಕಾಶವಿರುವುದಿಲ್ಲ. ಈ ವಿಶೇಷ ಬಸ್‌ಗಳ ಮುಂಗಡ ಟಿಕೇಟ್ ಬುಕ್ಕಿಂಗ್‌ಗಾಗಿ ತಿತಿತಿ.ಡಿಣಛಿ.ಟಿನಲ್ಲಿ ಅಥವಾ ಬಸ್ ನಿಲ್ದಾಣ ರಿಸರ್ವೇಶನ್ ಕೌಂಟರ ಮೂಲಕ ಆಸನಗಳನ್ನು ಕಾಯ್ದಿರಿಸಬಹುದಾಗಿದೆ. ಪ್ರಯಾಣಿಕರು 


ಸುದ್ದಿ ಓದಿ