ಚಿಕ್ಕೋಡಿ ನಗರದ ಸಮಗ್ರ ಅಭಿವೃದ್ಧಿಗೆ ವಿಶೇಷ ಪ್ರಯತ್ನ: ಗಣೇಶ ಹುಕ್ಕೇರಿ
ಇಂದಿರಾನಗರದಲ್ಲಿ ಬಿಸಿ ನೀರಿನ ಘಟಕ ಮತ್ತು ಹೈ ಮಾಸ್ಟ ವಿದ್ಯುತ್ ದೀಪಗಳ ಉದ್ಘಾಟನೆ
ಚಿಕ್ಕೋಡಿ 08: ಜಿಲ್ಲಾ ಸ್ಥಾನಮಾನ ಹೊಂದಿರುವ ಚಿಕ್ಕೋಡಿ ನಗರದ ಅಭಿವೃದ್ಧಿಗೆ ವಿಶೇಷ ಕಾಳಜಿ ಹೊಂದಿದ್ದು, ನಗರದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಲಾಗಿದೆ ಎಂದು ಶಾಸಕ ಗಣೇಶ ಹುಕ್ಕೇರಿ ಹೇಳಿದರು.
ಚಿಕ್ಕೋಡಿ ಇಂದಿರಾ ನಗರದ ವಾರ್ಡ ನಂಬರ 14 ಮತ್ತು 15 ರಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ಬಿಸಿ ನೀರು ಘಟಕ ಮತ್ತು ಹೈ ಮಾಸ್ಟ ವಿದ್ಯುತ್ ದೀಪಗಳ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ತಂದೆಯವರಾದ ಪ್ರಕಾಶ ಹುಕ್ಕೇರಿ ಅವರು ಸಚಿವರು ಮತ್ತು ಸಂಸದರಾಗಿದ್ದ ವೇಳೆಯಲ್ಲಿ ಚಿಕ್ಕೋಡಿ ಅಭಿವೃದ್ಧಿಗೆ ಸಾಕಷ್ಟು ಅನುದಾನ ಖಚರ್ು ಮಾಡಿದ್ದಾರೆ. ಚಿಕ್ಕೋಡಿ ನಗರಕ್ಕೆ ಬೇಕಾಗಿರುವ ದಿನನಿತ್ಯ ಕುಡಿಯುವ ನೀರಿನ ಯೋಜನೆ, ಚರಂಡಿ ನಿಮರ್ಾಣ, ಹೈಟಿಕ ಬಸ್ ನಿಲ್ದಾಣ ಸೇರಿದಂತೆ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿ ಜನರಿಗೆ ಅನುಕೂಲ ಕಲ್ಪಿಸಲಾಗಿದೆ ಎಂದರು.
ಚಿಕ್ಕೋಡಿ ನಗರದ ವಾರ್ಡ ನಂಬರ 14 ಮತ್ತು 15ರಲ್ಲಿ ಬರುವ ಇಂದಿರಾನಗರ, ಎಸ್ಬಿಐ ಕಾಲೋನಿಯಲ್ಲಿ ಪುರಸಭೆ ಸದಸ್ಯರಾದ ಸಾಭೀರ ಜಮಾದಾರ ಮತ್ತು ನ್ಯಾಯವಾದಿ ಮುದ್ದಸರ ಜಮಾದಾರ ಇಬ್ಬರು ಸಹೋಧರರು ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ಜನರಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸುತ್ತಾ ಬಂದಿದ್ದಾರೆ. ಇಂದಿರಾ ನಗರದಲ್ಲಿ ಎರಡು ಕಡೆ ಬಿಸಿ ನೀರಿನ ಘಟಕ ಸ್ಥಾಪಿಸಿ ಕಡು ಬಡವರಿಗೆ ಅನುಕೂಲ ಕಲ್ಪಿಸಿರುವ ಕಾರ್ಯ ಶ್ಲಾಘನೀಯ ಎಂದರು.
ಪುರಸಭೆ ಸದಸ್ಯರಾದ ರಾಮಾ ಮಾನೆ, ಗುಲಾಬ ಬಾಗವಾನ, ಮಾಜಿ ಸದಸ್ಯ ಪ್ರಭಾಕರ ಕೋರೆ, ಅನೀಲ ಮಾನೆ, ನ್ಯಾಯವಾದಿ ಮುದ್ದಸರ ಜಮಾದಾರ, ಇರ್ಪಾನ ಬೇಪಾರಿ, ಶ್ರೀಮಂತ ಮಾಳಗೆ, ವರ್ಧಮಾನ ಸದಲಗೆ, ವಿನೋಧ ಮಾಳಗೆ, ರವಿ ದರ್ಜಿ , ಸುಧೀರ ಮಾಯಪ್ಪಗೊಳ, ಇರ್ಪಾನ ಕಲೇಗಾರ, ಪೀರೋಜ ಕಲಾವಂತ, ಬಾಬು ಸಮ್ಮತ್ತಶೆಟ್ಟಿ ಮುಂತಾದವರು ಇದ್ದರು.
**ಇಂದಿರಾ ನಗರದ ಜನರಿಗೆ ಉಪಯೋಗವಾಗಲು ಬಿಸಿ ನೀರಿನ ಘಟಕ ಸ್ಥಾಪಿಸಲಾಗಿದೆ. ಜನರಿಗೆ ಶುದ್ಧ ಕುಡಿಯುವ ನೀರಿನ ಘಟಕ ಸಹ ಸ್ಥಾಪನೆ ಮಾಡಲಾಗಿದೆ. ನಗರದ ಪ್ರಮುಖ ಸರ್ಕಲಗಳಲ್ಲಿ ಹೈಟಿಕ ವಿದ್ಯುತ್ ದೀಪದ ಕಂಬಗಳನ್ನು ಅಳವಡಿಸಲಾಗಿದೆ. ಮತ್ತು ಉದ್ಯಾನವನ ಮತ್ತು ಸಾಂಸ್ಕೃತಿ ಭವನ ನಿರ್ಮಾಣಕ್ಕೆ ಶಾಸಕರ ನಿಧಿಯಲ್ಲಿ 12 ಲಕ್ಷ ರೂ ಅನುದಾನ ಮಂಜೂರಾಗಿದೆ.
-ಸಾಭೀರ ಜಮಾದಾರ ಪುರಸಭೆ ಸದಸ್ಯರು ಚಿಕ್ಕೋಡಿ