ಸಮೃದ್ದ ಮಳೆ ಬೆಳೆಗಾಗಿ ವಿಶೇಷ ಪೂಜೆ
ಯರಗಟ್ಟಿ 18: ಸಮೃದ್ದ ಮಳೆ ಬೆಳೆಗಾಗಿ ಸಮೀಪದ ತಲ್ಲೂರ ಗ್ರಾಮಸ್ಥರು ಗುಡ್ಡದ ಪ್ರದೇಶದಲ್ಲಿರುವ ಆರಾಧ್ಯ ದೇವರು ತೀರ್ಥ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಮಳೆ ಕೈಕೊಟ್ಟಾಗ ಈ ರೀತಿ ದೇವರ ಮೊರೆ ಹೋದರೆ ಮಳೆಯಾಗುವ ನಂಬಿಕೆ ರೈತರಲ್ಲಿದೆ ಎಂಬ ಪ್ರಥಿತಿ ಇದೆ. ಬೆಳಿಗ್ಗೆ ಇಂದ ಶಿವ ಭಜನೆ ನಾನಾ ಧಾರ್ಮಿಕ ಕಾರ್ಯಕ್ರಮಗಳು, ರುದ್ರಾಭಿಷೆಕ ಸೇರಿದಂತೆ ಧೂಪ, ದೀಪ ಹಾಗೂ ನಾನಾ ದ್ರವ್ಯಗಳಿಂದ ಪೂಜೆ ಸಲ್ಲಿಸಿದರು. ರಾಜ್ಯದಲ್ಲಿ ಸುಖ ಸಮೃದ್ಧಿ ಒಳ್ಳೆಯ ಮಳೆ ಬೆಳೆ, ಜನರ ನಡುವೆ ನೆಮ್ಮದಿ ಮೂಡಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿದರು.
ಹಿರೇಮಠದ ಈರಯ್ಯ ಸ್ವಾಮೀಜಿ, ಪ್ರಸನ್ನ ಶಾಸ್ತ್ರಿ, ಗ್ರಾಪಂ ಮಾಜಿ ಉಪಾಧ್ಯಕ್ಷ ಬಾಬುಗೌಡ ಅಣ್ಣಿಗೇರಿ, ಮುಖಂಡ ನೀಲಕಂಠ ಶೀವಪೂಜಿ, ರುದ್ರ್ಪ ಯರಗಟ್ಟಿ, ಮಹಾಂತೇಶ ಮಠಪತಿ, ಧರ್ಮ ದುಂಡನಕೊಪ್ಪ, ವೀರಭದ್ರ್ಪ ಬೆನಕಟ್ಟಿ, ಪ್ರಶಾಂತ ಗಾಣಿಗೇರ, ಮಡಿವಾಳಪ್ಪ ಬೆನಕಟ್ಟಿ, ಯಶಪಾಲ ಕಾಸಪ್ಪನವರ, ಅಪ್ಪಯ್ಯಪ್ಪ ಶೀಲವಂತರ, ಸಾತವೀರ್ಪ ಶೀಲವಂತರ, ರಾಜು ಉಪ್ಪಾರ, ಮುತ್ತು ಮಠಪತಿ, ಸುಬಾಷ ಚಿಕಾಕಿ ಸೇರಿದಂತೆ ಇತರರು ಇದ್ದರು.