ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಬಿತ್ತನೆ ಬೀಜ ವಿತರಣೆ
ಯರಗಟ್ಟಿ 30: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಶನಿವಾರ ಕೃಷಿ ಇಲಾಖೆಯಿಂದ ಹಿಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆಗೆ ತಹಶೀಲ್ದಾರ ಎಮ್. ಎನ್. ಮಠದ ಹಾಗೂ ಕೃಷಿ ಇಲಾಖೆ ನಿರ್ದೇಶಕ ಶಿವಪ್ರಕಾಶ ಪಾಟೀಲ ಚಾಲನೆ ನೀಡಿದರು. ಎಂಪಿಎಂಸಿ ಅಧ್ಯಕ್ಷ ನೀಲಕಂಠ ಸಿದ್ದಬಸನವರ ಮಾತನಾಡಿ, ಅಧಿಕಾರಿಗಳ ಜತೆ ರೈತರು ನೇರವಾಗಿ ಸಂಪರ್ಕ ಹೊಂದಿರಬೇಕು. ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳಬೇಕು. ಅಧಿಕಾರಿಗಳು ರೈತರ ಸಮಸ್ಯೆಗಳನ್ನು ಆದಷ್ಟು ಬೇಗ ಬಗೆಹರಿಸಬೇಕು ಎಂದರು. ಹಿಂಗಾರಿ ಹಂಗಾಮಿನಲ್ಲಿ ಕಡಲೆ, ಜೋಳ ಸೇರಿ ವಿವಿಧ ಬೀಜಗಳನ್ನು ವಿತರಣೆ ಮಾಡಲಾಯಿತು.
ಈ ವೇಳೆ ಕೃಷಿ ಅಧಿಕಾರಿ ಎಮ್. ಜಿ. ಕಳಸಪ್ಪನವರ, ನೀಲಕಂಠ ಸಿದ್ದಬಸನವರ, ನಿಖಿಲ ಪಾಟೀಲ, ಶಿವಾನಂದ ಕರಿಗೋಣ್ಣವರ, ಮಂಜುನಾಥ ತಡಸಲೂರ, ರಫೀಕ ಡಿ ಕೆ, ಸೋಮು ರೈನಾಪೂರರೈತ ಅನುವುಗಾರರು ಹನುಮಂತ ತಳವಾರ, ಮಂಜು ಮುಂಡೆ, ತುಕಾರಾಮ ಕಮತಗಿ, ವಿಜಯ ಚಿಕ್ಕೋಡಿ ರೈತರಾದ ಬಸವರಾಜ ಸತ್ತೂರಿ, ಹನುಮಂತ ರಂಗಾಪುರ, ಅದ್ರುಶ ಶೀಲವಂತರ, ಬಾಲಪ್ಪ ಬಂಡಿವಡ್ಡರ, ಕಲ್ಲಪ್ಪ ಹರಿಜನ, ರಾಮಪ್ಪ ಬಡೆನ್ನವರ, ಇತರರಿದ್ದರು.