ಗೋಕಾಕ್

ಮಕ್ಕಳಲ್ಲಿ ಮಾನವೀಯತೆಯನ್ನು ಬಿತ್ತಿ: ಶಿಕ್ಷಕಿ ಇಟ್ನಾಳ

ಮಕ್ಕಳಲ್ಲಿ ಮಾನವೀಯತೆಯನ್ನು ಬಿತ್ತಿ: ಶಿಕ್ಷಕಿ ಇಟ್ನಾಳ

ಗೋಕಾಕ 03: ತಾಲೂಕಿನ ದುಂಡಾನಟ್ಟಿ ಗ್ರಾಮದ ಸಿದ್ಧಾರೂಡ ಮಠದ ಆವರಣದಲ್ಲಿ ಮಮದಾಪೂರ ಗ್ರಾಮದ ಸಾಮಾಜಿಕ ಕಳಕಳಿ ಹೊಂದಿದ ಮನಸ್ಸುಗಳ ಹೃದಯಗಳ ಆಶಯದಂತೆ  ರಸಸವೀ ಫೌಂಡೇಶನ್ ಅಡಿಯಲ್ಲಿ ಪಾಕ್ಷಿಕ ಜ್ಞಾನಾಕ್ಷಯ ಚಿಂತಕರ ಚಾವಡಿ 31ನೇ ಮಾಲಿಕೆ ಕಾರ್ಯಕ್ರಮ ಜರುಗಿತು.  

ಮುಖ್ಯ ಅತಿಥಿಗಳಾಗಿ ಆಗಮಿಸಿದ ಮೂಡಲಗಿ ತಾಲೂಕಿನ ಮೆಳವಂಕಿ ಸರಕಾರಿ ಪ್ರೌಢ ಶಾಲೆಯ ಕನ್ನಡ ಶಿಕ್ಷಕಿ ಜಯಶ್ರೀ ಇಟ್ನಾಳರವರು ಇಂದು ಗುರು-ಶಿಷ್ಯ, ತಂದೆ-ತಾಯಿ-ಮಕ್ಕಳು, ಮಿತ್ರರು, ನೆರೆ ಹೊರೆ ಹೀಗೆ ಹಲವಾರು ಸಂಬಂಧಗಳು ಸ್ವಾರ್ಥ ಹಾಗೂ ಮಾಧ್ಯಮಗಳಿಂದ ನಶಿಸುತ್ತಿವೆ ಅದರಲ್ಲೂ ಮೋಬೈಲ್ ಪ್ರಮುಖ ಕಾರಣವಾಗಿದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲರೂ ಸ್ವಾರ್ಥಿಗಳಾಗಿ ಜೀವನ ನಡೆಸುತ್ತಿದ್ದಾರೆ. ಸೇವಾ ಮನೋಭಾವನೆ ಕೊರತೆಯಾಗಿದೆ. ಮಕ್ಕಳ ನಡುವೆ ಇಂದು ಪ್ರೀತಿ, ವಿಶ್ವಾಸ, ಅನುಕಂಪ, ಕರುಣೆ, ಸಂಬಂಧಗಳು, ಮಾನವೀಯತೆಯನ್ನು ಬಿತ್ತಬೇಕಾಗಿದೆ. ಪಾಲಕರು ತಮ್ಮ ಮಕ್ಕಳನ್ನು ಬೆಳೆಸುತ್ತಿರುವ ರೀತಿ ಬದಲಾಗಬೇಕಿದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು. 

ಅಧ್ಯಕ್ಷತೆ ವಹಿಸಿಕೊಂಡ ಗ್ರಾಮದ ಹಿರಿಯರಾದ ರೇಣುಕಾ ಗೋವಿಂದಪ್ಪಗೋಳ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಸುತ್ತ ಇಂದಿನ ದಿನದ ಪ್ರೀತಿ, ವಿಶ್ವಾಸ, ಅನುಕಂಪ, ಮಾನವೀಯ ಮೌಲ್ಯಗಳು ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಕಲಿಸುತ್ತಿಲ್ಲ ಎಂದು ವಿಷಾದಿಸಿದರು.  

ಯಲ್ಲವ್ವ ಧರೆನ್ನವರ ಮತ್ತು ಉದ್ದವ್ವ ವಡ್ಡರಗಾಂವಿ ವಿಜ್ಞಾನ ಗೀತೆಯನ್ನು ಹಾಡಿದರು. ಸಾಂವಕ್ಕ ತೋಳಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ಆಯೋಜಿಸಿದ ಚಿಂತಾಮಣಿ ಪಾವಟೆ ಪ್ರೌಢ ಶಾಲೆಯ ವಿಜ್ಞಾನ ಶಿಕ್ಷಕ ಜ್ಞಾನಾಕ್ಷಯ ಚಿಂತಕರ ಚಾವಡಿ ಸಂಚಾಲಕ ರ. ವೀ ದೇಮಶೆಟ್ಟಿ ವಿದ್ಯಾರ್ಥಿಗಳೊಂದಿಗೆ ಗೌರವ ಸಮರ್ಪಿಸಿ ವಂದಿಸಿದರು. ಕಾವೇರಿ ಮದನ್ನವರ ನಿರೂಪಿಸಿದರು. ತಂಗೆಮ್ಮಾ ರೆಡ್ಡಿ ವಚನವನ್ನು ವಾಚಿಸಿದರು 

ಸುದ್ದಿ ಓದಿ