ಇಂಡಿ

ಸೌಹಾರ್ದ ಸಹಕಾರಗಳು ಬಡ ಜನರ ದಾರೀದೀಪ: ಮಹಾರಾಜರು

ಸೌಹಾರ್ದ ಸಹಕಾರಗಳು ಬಡ ಜನರ ದಾರೀದೀಪ: ಮಹಾರಾಜರು


ಇಂಡಿ10:  ಸಹಕಾರ ಸಂಘಗಳಿಂದ ಸಾಕಷ್ಟು ಜನರಿಗೆ ಅನುಕೂಲವಾಗುತ್ತಿದ್ದು ಸೌಹಾರ್ದ ಸಹಕಾರಗಳು ಬಡ ಜನರ ದಾರೀದೀಪವಾಗಿವೆ ಎಂದು ಕೆಸರಟ್ಟಿಯ ಸೋಮನಿಂಗ ಮಹಾರಾಜರು ಹೇಳಿದರು. 

 ಮಂಗಳವಾರ ಪಟ್ಟಣದ ಸಿಂದಗಿ ರಸ್ತೆಯಲ್ಲಿ ಬಂಜಾರಾ ಸೌಹಾರ್ದ ಸಹಕಾರಿಯ ಉದ್ಘಾಟನೆ ಮತ್ತು ಆಡಳಿತ ಮಂಡಳಿ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು. 

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸಂಘ-ಸಂಸ್ಥೆಗಳು ಹುಟ್ಟಿಕೊಳ್ಳುತ್ತಿವೆ. ಆದರೆ ಕೆಲವೊಂದೇ ಸಂಸ್ಥೆಗಳು ನಡೆಯುತ್ತಿವೆ. ಆಡಳಿತ ಮಂಡಳಿಯವರು ಸೌಹಾರ್ದತೆ ಮತ್ತು ಏಕತೆಯಿಂದ, ಪ್ರಾಮಾಣಿಕತೆಯಿಂದ ಕಾರ್ಯ ಮಾಡಿದಾಗ ಮಾತ್ರ ಸಂಸ್ಥೆಗಳು ಬೆಳೆಯುತ್ತವೆ ಎಂದರು. 

ವಿಜು ರಾಠೋಡ, ಹಣಮಂತ್ರಾಯಗೌಡ ಪಾಟೀಲ ಮಾತನಾಡಿ ಸೌಹಾರ್ದ ಸಹಕಾರಿಯಿಂದ ಉತ್ತಮ ಸೇವೆ ನೀಡಿ ಮಾದರಿ ಸಂಘವನ್ನಾಗಿ ಮಾಡಿ, ಲಾಭದ ಜೊತೆಗೆ ಸಾಮಾಜಿಕ ಸೇವೆಗೂ ಆಧ್ಯತೆ ನೀಡಬೇಕೆಂದರು. 

ಹಡಲಸಂಗದ ಪ್ರಕಾಶ ಮಹಾರಾಜರು ಸಾನಿಧ್ಯವಹಿಸಿದ್ದರು. 

ಸೌಹಾರ್ದದ ಅಧ್ಯಕ್ಷ ಲಿಂಬು ವಾ. ರಾಠೋಡ ಅಧ್ಯಕ್ಷತೆವಹಿಸಿದ್ದರು. 

ವಿವೇಕ ರಾಠೋಡ, ಸಂಜು ಚವ್ಹಾಣ, ಮಲ್ಲಿಕಾರ್ಜುನ ಕಿವುಡೆ, ಅನೀಲ ಜಮಾದಾರ, ಕಾಸುಗೌಡ ಬಿರಾದಾರ, ವಿಶ್ವನಾಥ ಚವ್ಹಾಣ, ಗೋವಿಂದ ರಾಠೋಡ, ಸಂಜು ಜಾಧವ, ಮೋಹನ್ ರಾಠೋಡ, ಕಂಟೆಪ್ಪ ಚವ್ಹಾಣ, ಮಲ್ಲು ವಾಲೀಕಾರ, ಬಾಬು ರಾಠೋಡ, ಸುರೇಶ ಚವ್ಹಾಣ, ಬೇಬಿತಾ ಚವ್ಹಾಣ, ಗೋಪು ರಾಠೋಡ, ಗಣಪತಿ ರಾಠೋಡ, ಅಶೋಕ ರಾಠೋಡ, ವಿಕ್ರಮ ರಾಠೋಡ, ಸರ್ಜನ ಜಾಧವ, ಇಲಿಯಾಸ ಬೋರಾಮಣಿ, ಟಿ.ಎಸ್‌. ಖಟ್ಟೆ, ದೇವೆಂದ್ರ ಕುಂಬಾರ ಮತ್ತಿತರರು ಇದ್ದರು. 


ಸುದ್ದಿ ಓದಿ