ಬೋರ್ವೆಲ್ ಕೊರೆಯಿಸಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆ
ಚಿಕ್ಕೋಡಿ 18: ಜನರ ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸುವ ನಿಟ್ಟಿನಲ್ಲಿ ತಾಲೂಕಿನ ವಡಗೋಲ ಗ್ರಾಮದಲ್ಲಿ ಗ್ರಾಮಸ್ಥರ ಸಮ್ಮುಖದಲ್ಲಿ ಬೋರ್ವೆಲ್ ಕೊರೆಯಿಸಿ ಕುಡಿಯುವ ನೀರಿನ ಅನುಕೂಲ ಕಲ್ಪಿಸಿದರು.
ಗ್ರಾಮದ ಜನರ ಮನವಿಗೆ ಸ್ಪಂದಿಸಿರುವ ವಿಧಾನ ಪರಿಷತ್ ಸದಸ್ಯ ಪ್ರಕಾಶ್ ಹುಕ್ಕೇರಿ ಹಾಗೂ ಶಾಸಕ ಗಣೇಶ ಹುಕ್ಕೇರಿ ಅವರು ಮುತುವರ್ಜಿ ವಹಿಸಿ ಹೊಸದಾಗಿ ಕೊರೆಯಿಸಿದ್ದ ಬೋರ್ವೆಲ್ನಲ್ಲಿ 3 ಇಂಚು ನೀರು ಬಿದ್ದಿದ್ದರಿಂದ ಕುಡಿಯುವ ನೀರಿನ ಸಮಸ್ಯೆ ನೀಗಿದ ಖುಷಿಯಲ್ಲಿ ಗ್ರಾಮದ ಜನರು ಹರ್ಷ ವ್ಯಕ್ತಪಡಿಸಿ,
ರಾಜ್ಯದ ಬಹುತೇಕ ಕಡೆ ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಜೂನ್ ತಿಂಗಳು ಮುಗಿಯುತ್ತಾ ಬಂದರು ಮುಂಗಾರು ಮಳೆಯಾಗಿಲ್ಲ. ಚಿಕ್ಕೋಡಿ - ಸದಲಗಾ ಮತಕ್ಷೇತ್ರದ ಕೆಲವು ಭಾಗಗಳಲ್ಲಿ ಕುಡಿಯುವ ನೀರಿನ ಅಭಾವವೂ ಹೆಚ್ಚಾಗಿ ಕಾಣಿಸಿಕೊಂಡಿದೆ. ಹೀಗಾಗಿ ಕಳೆದ ಹದಿನೈದು ದಿನಗಳಿಂದ ಕ್ಷೇತ್ರದ ಹಳ್ಳಿಗಳಿಗೆ ಟ್ಯಾಂಕರ್ಗಳ ಮೂಲಕ ನೀರನ್ನು ಪೂರೈಸುವ ಕ್ರಮ ಕೈಗೊಳ್ಳಲಾಗಿದೆ. ಅವಶ್ಯಕತೆ ಅನುಸಾರ ಹಾಗೂ ನೀರಿನ ಸೆಲೆ ಆಧರಿಸಿ ಬೋರ್ವೆಲ್ ಕೊರೆಯಿಸುವ ಕೆಲಸವೂ ಜಾರಿಯಲ್ಲಿದೆ.
ಈ ಸಂದರ್ಭದಲ್ಲಿ ಸದಲಗಾ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಮಲ್ಲಪ್ಪ ವಾಳಕೆ, ಅಣ್ಣಾಸಾಬ ಬಾಗಾಯಿ, ರಾಮು ಮಾರಾಪುರೆ, ನಿಂಗಪ್ಪಾ ಸನದಿ, ಅಶೋಕ ಭಿವಸೆ, ಸ್ಥಳೀಯ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.