ಗ್ರಾಮ ಮಟ್ಟದಲ್ಲಿನ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸಿ
ಲೋಕದರ್ಶನ ವರದಿ
ತಹಶೀಲ್ದಾರ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಸಿ.ಎಸ್.ಕುಲಕರ್ಣಿ ಸೂಚನೆ
ಚಿಕ್ಕೋಡಿ 22: ಗ್ರಾಮ ಮಟ್ಟದಲ್ಲಿ ಇರುವ ಸಮಸ್ಯೆಗಳನ್ನು ತಾಲೂಕಾ ಮಟ್ಟದ ಅಧಿಕಾರಿಗಳು ಸ್ಥಳದಲ್ಲಿಯೇ ಪರಿಹರಿಸಬೇಕು. ಗ್ರಾಮೀಣ ಭಾಗದ ಜನರಿಗೆ ಯಾವುದೇ ತೊಂದರೆ ಆಗದಂತೆ ಅಧಿಕಾರಿಗಳು ಸಮಯ ಪ್ರಜ್ಞೆಯಿಂದ ಕಾರ್ಯನಿರ್ವಹಿಸಬೇಕು ಎಂದು ತಹಶಿಲ್ದಾರರ ಸಿ.ಎಸ್.ಕುಲಕರ್ಣಿ ಹೇಳಿದರು.
ತಾಲೂಕಿನ ಕಮತೇನಟ್ಟಿ ಗ್ರಾಮದಲ್ಲಿ ತಹಶೀಲ್ದಾರ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಗ್ರಾಮಸ್ಥರ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು. ಬೇಸಿಗೆ ಸಮಯದಲ್ಲಿ ಈ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅಧಿಕಾರಿಗಳು ಮುಜಾಗೃತೆ ವಹಿಸಬೇಕು ಹಾಗೂ ಕಾಟಾಚಾರಕ್ಕೆ ತಹಶೀಲ್ದಾರ ನಡೆ ಹಳ್ಳಿ ಕಡೆಯಾಗಬಾರದು ಹಾಗೂ ಅಧಿಕಾರಿಗಳಿಂದ ಸಾವರ್ಜನಿಕರ ಕುಂದು ಕೊರತೆಯನ್ನು ಸಾಧ್ಯವಾದಷ್ಟು ಬಗ್ಗೆ ಹರಿಸುವ ಕೆಲಸವಾಗಬೇಕು ಹಾಗೂ
ಸರಕಾರದ ಯೋಜನೆಗಳನ್ನು ಹಳ್ಳಿಯ ಜನರಿಗೆ ತಲುಪಿಸುವುದು ಇದರ ಉದ್ದೇಶವಾಗಿದೆ. ಪ್ರತಿ ತಿಂಗಳೂ ಮೂರನೆ ಶನಿವಾರ ಈ ಕಾರ್ಯಕ್ರಮ ನಡೆಯುತ್ತದೆ. ಜನರ ಸಮಸ್ಯೆ ಕುರಿತು ಅಹವಾಲ ನೀಡಿದರೇ ತಕ್ಷಣಾ ಸ್ಪಂಧನೆ ಮಾಡಿ ಸಮಸ್ಯೆ ಬಗೆಹರಿಸಲಾಗುತ್ತದೆ ಎಂದರು. ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಮಾತನಾಡಿ ಮುಂದಿನ ಒಂದು ವಾರದಲ್ಲಿ ಕುಡಿಯುವ ನೀರನ ಸಮಸ್ಯೆ ಬಗ್ಗೆ ಹರಿಸಬೇಕು ಎಂದು ತಾಲೂಕಾ ಕುಡಿಯುವ ನೀರು ಸರಬರಾಜು ಅಧಿಕಾರಿಗೆ ತಾಕೀತು ಮಾಡಿದರು ಸಶ್ಮಾನ ಭೂಮಿಗೆ ಸರಕಾರದ ಆದೇಶ ಪ್ರಕಾರ ಈ ಗ್ರಾಮಕ್ಕೆ ಸಶ್ಮಾನ ಭೂಮಿ ಒದಗಿಲಾಗುವದು ರೈತರಿಗೆ ಮುಂದಿನ ಆರು ತಿಂಗಳಲ್ಲಿ ಸರಿಯಾದ ವಿದುತ್ತ ಪುರೈಕೆ ಮಾಡಲಾಗುವದು ಶಾಲೆಗಳಲ್ಲಿ ಆಟದ ಮೈದಾನ ನಿರ್ಮಿಸಲು ಗ್ರಾಮ ಪಂಚಾಯತಿ ಅನುದಾನ ನೀಡಲಾಗುವದು ಎಂದರು . ಸಶ್ಮಾನ ಭೂಮಿ, ಬಿಪಿಎಲ್ ಕಾರ್ಡ್ಗ ಳು ಪುರೈಕೆ, ಗ್ರಾಮದಲ್ಲಿ ಕುಡಿಯುವ ನೀರು ರೈತರಿಗೆ ಸರಿಯಾಗಿ ವಿದುತ್ತ ಪುರೈಕೆ ಬಸ್ಸಿನ ಸೌಲಭ್ಯ ಶಾಲೆಗಳಲ್ಲಿ ಗುಣಮಟ್ಟ ಆಹಾರ ಪುರೈಯಕೆ ಗ್ರಾಮೀಣ ಭಾಗದ ರಸ್ತೆಗಳು ಚರಂಡಿ ನಿರ್ಮಾಣ ಶುದ್ದ ಕುಡಿಯುವ ನೀರಿನ ಘಟಕ ದುರಸ್ತಿ ಹಾಗೂ ಗ್ರಾಮವನ್ನು ಪೋಡಿಮುಕ್ತ ಗ್ರಾಮವಾನಾಗಿ ಮಾಡಿ ಕೊಂಡಬೇಕೆಂದು ಕಮತೇನಟ್ಟಿ ಗ್ರಾಮಸ್ಥರಿಂದ ತಹಶೀಲ್ದಾರರಿಗೆ ಮನವಿ ಮಾಡಿದರು.
ಗ್ರಾ.ಪಂ ಸದಸ್ಯ ರುದ್ರಗೌಡ ಪಾಟೀಲ ಅಧ್ಯಕ್ಷತೆ ವಹಿಸಿದರು. ಕೃಷಿ ಇಲಾಖೆ ಸಹಾಯಕ ನಿತ್ದೇಶಕ ಮಂಜುನಾಥ ಜನಮಟ್ಟಿ,ಟಿಎಚ್ ಒ ಡಾ ವಿಠ್ಠಲ ಶೀಂಧೆ, ಶಿವಪ್ಪಾ ಪೋಗತ್ಯಾನಟ್ಟಿ,ವಿಜಕುಮಾರ ಚೌಗಲಾ, ಆರ.ಜಿ.ನ್ಯಾಮಗೌಡ,ವಿಜಯಕುಮಾರ ಸಂಗಪಗೊಳ,ಎಸ.ಎಸ.ಹೊಸಮನಿ,ಸುಪ್ರಿಯಾ ಜಡಗೆ. ಸದರವಾಲೆ ಪೀರಜಾದೆ,ಮಲ್ಲಿಕಾಜರ್ುನ ಹುಳಾಗಡ್ಡಿ, ತಾಲೂಕಿನ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದರು. ಚಂದ್ರಶೇಖರ ಕುಂಬಾರ ಸ್ವಾಗತಿಸಿ ನಿರುಪಿಸಿದರು