ರಾಣೆಬೆನ್ನೂರ

ಮಣ್ಣು ಆರೋಗ್ಯ ನಿರ್ವಹಣೆ ಕಾರ್ಯಾಗಾರ

ಮಣ್ಣು ಆರೋಗ್ಯ ನಿರ್ವಹಣೆ ಕಾರ್ಯಾಗಾರ

ರಾಣೀಬೆನ್ನೂರು 19:  ಕೃಷಿ ಇಲಾಖೆ ಮತ್ತು ನೀಡ್ಸ್ ಸಂಸ್ಥೆ ಸಹಯೋಗದಲ್ಲಿ ತಾ.ನ ಆಲದ ಕಟ್ಟಿ ಗ್ರಾಮದ ವೀರಮಹೇಶ್ವರ ದೇವಸ್ಥಾನದ ಆವರಣದಲ್ಲಿ ಮಣ್ಣು ಆರೋಗ್ಯ ನಿರ್ವಹಣೆ ಕಾರ್ಯಾಗಾರವು ಆಯೋಜಿಸಲಾಗಿತ್ತು.

ಮುಖ್ಯ ಅಥಿತಿಯಾಗಿ ಪಾಲ್ಗೊಂಡಿದ್ದ ಹನುಮನಮಟ್ಟಿ ಕೃಷಿ ವಿಜ್ಞಾನಕೇಂದ್ರದ ಹವಾ ಮಾನತಜ್ಞ ಡಾ.ಶಾಂತವೀರಯ್ಯ ಅವರು ಮಾತನಾಡಿ ಭೌತಿಕ ಸ್ಥಿತಿಗತಿಗಳೆಂದರೆ ರಚನೆ ಮತ್ತು ಉಳುಮೆ, ಗಾಳಿಯಾ ಡುವಿಕೆ, ನೀರನ್ನು ಹಿಡಿಯುವ ಸಾಮರ್ಥ್ಯ ಕೊಚ್ಚಣೆ ನಿರೋಧಕತೆ ಇತ್ಯಾದಿ ಅಲ್ಲದೇ ಸಾವಯವ ವಸ್ತುಗಳು ಸಸ್ಯ ಪೋಷ ಕಗಳ ಭಂಡಾರ ಅದರಲ್ಲಿಯೂ ಮುಖ್ಯವಾಗಿ ಮಣ್ಣುಗಳಲ್ಲಿರುವ ಸಾರಜನಿಕದ ಭಂಡಾರ ಈ ದೃಷ್ಟಿಯಿಂದ ನೋಡಿದಾಗ ಮಣ್ಣಿನಲ್ಲಿ ಸಾವಯವ ವಸ್ತು ಶೇಕಡಾ 2-10 ಭಾಗ ಮಾತ್ರ ಇರುವುದಾದರೂ ಮಣ್ಣುಗಳಲ್ಲಿರುವ ಅಸಾಧಾರಣ ಪ್ರಾಮುಖ್ಯತೆ ಇರುವುದು ಕಂಡುಬರುತ್ತದೆ ಎಂದು ಹೇಳಿದರು. 

ಹಮಾಮಾನದ ಕುರಿತು ಪ್ರತಿ ಮಂಗಳವಾರ ಮತ್ತು ಶುಕ್ರವಾರ ಕೃಷಿ ವಿಜ್ಞಾನ ಕೇಂದ್ರದಲ್ಲಿ ನೋಂದಣಿಗೊಂಡ ಮೊಬೈಲ್ ಸಂಖ್ಯೆಗಳಿಗೆ ಹವಾಮಾನ ವರದಿಗಳನ್ನು ನೀಡುತ್ತಿದ್ದು ಹವಾಮಾನದ ವರದಿಗಳ ಅನುಗುಣವಾಗಿ ರೈತರು ತಮ್ಮ ಬೆಳೆಗಳನ್ನು ಬೆಳೆಯಲು ಮುಂದಾಗಬೇಕು ಎಂದರು. 

ನೀಡ್ಸ್ ಸಂಸ್ಥೆಯ ಸಂಯೋಜಕ ತಿಪ್ಪೇಶ ಕನ್ನಮ್ಮನವರ ಅವರು ಮಾತನಾಡಿ ಮಣ್ಣು ಭೂಮಿಯ ಮೇಲ್ಪದರಿನಲ್ಲಿರುವ ಶಿಥಲಿಕರಣಗೊಂಡ ಶಿಲೆ ಮತ್ತು ಖನಿಜಗಳ ಪುಡಿ, ಇದು ಸಸ್ಯ ಮತ್ತು ಮಾನವ ಸಂಪನ್ಮೂಲಗಳನ್ನು ಒಳಗೊಂಡಂತೆ ಪ್ರಾಣಿಗಳ ಪೋಶಣೆ ಮತ್ತು ಬೆಳವಣಿಗೆ ಅವಶ್ಯಕತೆ ಮೂಡಿಸುತ್ತದೆ. ಪರಿಸರದಲ್ಲಿ ಗಾಳಿ, ಜಲ, ಜೀವಿಗಳು ಮತ್ತು ಶಿಲೆಗಳಂತೆ ಮಣ್ಣು ಒಂದು ಅವಿ ಭಾಜ್ಯ ಅಂಗ. ಮತ್ತು ಪರಿಸರದ ವಿವಿಧ ಕಾರ್ಯದಲ್ಲಿ ಅದರ ಪಾತ್ರ ಅತಿ ಮುಖ್ಯವಾದದ್ದು. ಆಹಾರ ಧಾನ್ಯ ಗಳನ್ನು ಬೆಳೆಯಲು ಫಲವತ್ತಾದ ಮಣ್ಣು ಅವಶ್ಯಕತೆ ಮತ್ತು ಕೃಷಿ ಸುಸ್ಥಿರ ಹಾಗೂ ಲಾಭ ದಾಯಕ ವಾಗಲು ಮಣ್ಣಿನ ಪಾತ್ರ ಹಿರಿದಾಗಿದೆ ಎಂದರು. 

ನೀರನ್ನು ಶುದ್ಧಗೊಳಿಸುವಿಕೆ, ಸತ್ತ ಪ್ರಾಣಿಗಳ ಕೊಳೆಯುವಿಕೆ, ಸಾವಯವ ತ್ಯಾಜ್ಯ ವಸ್ತುಗಳ ವಿಭಜನೆ ಮತ್ತು ವಿಷಕಾರಿ ವಸ್ತುಗಳನ್ನು ವಿಷರಹಿತ ಮಾಡುವುದು ಮಣ್ಣಿನಿಂದ ಮಾತ್ರ ಸಾಧ್ಯ. ಪೋಶಕಾಂಶ ಮೂಲ ವಸ್ತುಗಳು ರೂಪಾಂತರಗೊಳ್ಳುವ ರಾಸಾಯನಿಕ ಕ್ರಿಯೆಗಳು ಮಣ್ಣಿನಲ್ಲಿ ನಡೆಯುತ್ತವೆ ಎಂದು ವಿವರಿಸಿದ ಕನ್ನಮ್ಮನವರ ಮಣ್ಣು ಇಲ್ಲದೆ ಪರಿಸರ, ಪ್ರಾಣಿ, ಸಸ್ಯ ಮತ್ತು ಮಾನವನ ಬದುಕು ಊಹಿಸಲು ಅಸಾಧ್ಯ. ಆದುದರಿಂದ ಪ್ರಚಲಿತದಲ್ಲಿರುವ ನಾನ್ನುಡಿ “ಮಣ್ಣಿನಿಂದ ಮಾನವ” ತುಂಬಾ ಸೂಕ್ತವೆನಿಸುತ್ತದೆ ಎಂದರು.

ಮಣ್ಣು ಸಾವಯವ ವಸ್ತು, ನಿರ್ದಿಷ್ಟವಾಗಿ ಬೆಳೆ ಉತ್ಪನ್ನ ದೃಷ್ಟಿಯಿಂದ ಅನೇಕ ಮುಖ್ಯ ಕಾರ್ಯಗಳನ್ನು ನೆರವೇರಿಸುತ್ತದೆ. ಅದು ಯಶಸ್ವಿ ಬೆಳೆ ಉತ್ಪನ್ನಕ್ಕೆ ಅಗತ್ಯವಾದ ಎಲ್ಲ ಭೌತಿಕ ಸ್ಥಿತಿಗತಿಗಳ ಪಾಲನೆಗೆ ಹೊಣೆಯಾಗಿರುತ್ತದೆ. ಪ್ರತಿಯೊಬ್ಬ ರೈತರು ಮಣ್ಣು ಪರೀಕ್ಷೆ ಮಾಡಿಸಿ, ಮಣ್ಣು ಆರೋಗ್ಯ ಚೀಟಿಯ ಪ್ರಕಾರ ಬೆಳೆಗಳಿಗೆ ಅನುಗುಣವಾಗಿ ರಸಗೊಬ್ಬರಗಳನ್ನು ನೀಡಬೇಕು. ಕೃಷಿ ಇಲಾಖೆಯಿಂದ ದೊರೆ ಯುವ ಸೌಲಭ್ಯಗಳನ್ನು ಸದುಪ ಯೋಗಪಡಿಸಿಕೊಳ್ಳಲು ಮುಂದಾಗಬೇಕು ಎಂದರು. ಪ್ರಾಸ್ಥಾವಿಕವಾಗಿನೀಡ್ಸ್ ಸಂಸ್ಥೆಯ ಉಳಿವಪ್ಪ ಅಮಾತ್ಯಣ್ಣನವರ ಮಾತನಾಡಿದರು.

ಆಲದಕಟ್ಟಿ ಗ್ರಾ.ಪಂ.ಸದಸ್ಯ ಮಹೇಶಪ್ಪ ಬಣಕಾರ ಅವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಪನ್ನೂಲ ವ್ಯಕ್ತಿಗಳಾದ, ಪ್ರಶಾಂತ ಡಿ. ಬಿ.ಪರಶುರಾಮ ಕೆ. ಸೇರಿದಂತೆ ಗ್ರಾಮ ಪಂಚಾಯತ್ ಸದಸ್ಯರು, ಸಿಬ್ಬಂದಿಗಳು, ಗ್ರಾಮದ ರೈತರು, ಮುಖಂಡರು ಉಪಸ್ಥಿತರಿದ್ದರು.

ಸುದ್ದಿ ಓದಿ