ಸಮಾಜ ಸೇವಕ ಶಶೀಧರ ಯಲಿಗಾರಗೆ ಸನ್ಮಾನ
ಲೋಕದರ್ಶನ ವರದಿ
ಶಿಗ್ಗಾವಿ 04: ಪಟ್ಟಣದ ಚನ್ನಮ್ಮ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕರವೇ ತಾಲೂಕಾ ಅಧ್ಯಕ್ಷ ಸಂತೋಷಗೌಡ ಪಾಟೀಲ ನೇತೃತ್ವದಲ್ಲಿ ದ್ವಜಾರೋಣವನ್ನು ಸಮಾಜ ಸೇವಕ ಹಾಗೂ ಸಿ.ಬಿ ಯಲಿಗಾರ ಸೇವಾ ಸಂಸ್ಥೆಯ ಅಧ್ಯಕ್ಷ ಶಶಿಧರ ಯಲಿಗಾರ ನೇರವೇರಿಸಿದರು.
ಈ ಸಂದರ್ಭದಲ್ಲಿ ನಾಡೋಜ ಮಹೇಶ ಜೋಶಿ, ಜಾನಪದ ವಿ.ವಿಯ ಕುಲಪತಿ ಪ್ರೋ. ಡಿ. ಬಿ ನಾಯಕ, ಸಮಾಜ ಸೇವಕ ಶಶೀಧರ ಯಲಿಗಾರ ಅವರನ್ನು ಸನ್ಮಾನಿಸಲಾಯಿತು. ಡಾ. ಅಶೋಕ ಹಂಜಗಿ, ಪುರಸಭೆ ಅಧ್ಯಕ್ಷ ಶ್ರೀಕಾಂತ ಬುಳ್ಳಕ್ಕನವರ, ಪ್ರೋ ಸಿ.ಎಚ್. ತಾವರಗೊಂದಿ, ಬಸವರಾಜ ಕುರಗೋಡಿ, ಪವನ ಬಾರಕೇರ, ಈರಣ್ಣ ಸಮಗೊಂಡ ಸೇರಿದಂತೆ ಕರವೇ ಪಧಾದಿಕಾರಿಗಳು ಇದ್ದರು.