ಬಲಿಷ್ಠ ಸಂಘಟನೆಯಿಂದ ಮಾತ್ರ ಸಮಾಜ ಜಾಗೃತವಾಗಲು ಸಾಧ್ಯವಿದೆ : ಸೋಮಣ್ಣ ಡಾ ನಗಲ್ಲ
ಲೋಕದರ್ಶನ ವರದಿ
ಶಿಗ್ಗಾವಿ 29: ಪಂಚಮಸಾಲಿ ಸಮಾಜದ ಅಭಿವೃದ್ಧಿಗಾಗಿ ಸಂಘದ ಸದಸ್ಯರ ಶ್ರಮ ಅಪಾರವಾಗಿದ್ದು, ಬಲಿಷ್ಠ ಸಂಘಟನೆಯಿಂದ ಮಾತ್ರ ಸಮಾಜ ಜಾಗೃತವಾಗಲು ಸಾಧ್ಯವಿದೆ. ಅಂತಹ ಚಿಂತನೆಗಳು ಸಮಾಜದ ಜನರಲ್ಲಿ ಮೂಡಲಿ ಎಂದು ಚುನಾವಣೆ ಉಸ್ತುವಾರಿ ಸೋಮಣ್ಣ ಡಾ ನಗಲ್ಲ ಹೇಳಿದರು.
ಪಟ್ಟಣದ ಮಾಮ್ಲೆ ದೇಸಾಯಿ ಕಾಲೇಜಿನ ಸಭಾಭವನದಲ್ಲಿ ಶನಿವಾರ ಕರ್ನಾಟಕ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದತಾಲ್ಲೂಕು, ಜಿಲ್ಲೆ ಹಾಗೂ ರಾಜ್ಯಕಾರ್ಯಕಾರಿ ಸಮಿತಿಗೆ ಸದಸ್ಯರ ಚುನಾವಣೆ ಡಿಸೆಂಬರ 1ರಂದು ನಡೆಯಲಿದ್ದು, ಅದರ ಅಂಗವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದಅವರುಹರಿಹರದಲ್ಲಿ ಪೀಠದಿಂದಯಾತ್ರಾ ನಿವಾಸ, ಪ್ರವಾಸಿ ಮಂದಿರ, ಸಭಾಭವನ ಸೇರಿದಂತೆ ಈಗಾಗಲೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದ್ದು, ಇನ್ನು ಹಲವು ಕಾರ್ಯಗಳು ಪ್ರಗತಿಯಲ್ಲಿವೆ. ಅದರಲ್ಲಿ ಸಂಘದ ಸದಸ್ಯರ ಹಾಗೂ ಸಮಾಜದಜನರ ಪರಿಶ್ರಮವೇ ಕಾರಣವಾಗಿದೆ. ಹೀಗಾಗಿ ಡಿಸೆಂಬರ್ 1ರಂದು ಸಂಘದ ಸದಸ್ಯರನ್ನು ಆಯ್ಕೆ ಮಾಡಬೇಕು. ಅದರಲ್ಲಿ ಗೌರವಾಧ್ಯಕ್ಷ, ಅಧ್ಯಕ್ಷ, ಉಪಾಧ್ಯಕ್ಷರು ಸೇರಿದಂತೆ 21ಜನ ಸದಸ್ಯರಾಗಬೇಕು. ನಂತರ ವಿವಿಧ ಘಟಕಗಳನ್ನು ಮಾಡಲಾಗುತ್ತದೆ ಎಂದರು.
ಸಮಾಜದ ಕಾರ್ಯದಲ್ಲಿ ಪ್ರತಿಯೊಬ್ಬರು ಫಕ್ಷಬೇದ ಬಿಟ್ಟು ಸಂಘದ ನಿಯಮ ಪಾಲಿಸಬೇಕು. ಸಮಾಜದ ಶ್ರೇಯೋಭಿವೃದ್ಧಿಗೆ ನಮ್ಮಕೊಡುಗೆ ನೀಡುವದು.ಸಮಾಜಕ್ಕಾಗಿ ಸೇವಾ ಭಾವನೆಅರ್ಿಸುವದು ಬಹುಮುಖ್ಯವಾಗಿದೆ. ಸಮಾಜದ ಹಿರಿಯ ಮುಖಂಡರನ್ನು ಒಮ್ಮತ ಮನಸ್ಸಿನಿಂದ ಅವಿರೋಧವಾಗಿ ಆಯ್ಕೆ ಮಾಡುವದು ಮುಖ್ಯವಾಗಿದೆ ಎಂದರು.
ಮುಖಂಡ ಸಣ್ಣಪ್ಪ ಬುಳ್ಳಕ್ಕನವರ ಅಧ್ಯಕ್ಷತೆ ವಹಿಸಿದ್ದರು. ತಿಪ್ಪಣ್ಣ ಸಾತಣ್ಣವರ, ಬಸವರಾಜ ವಿಜಾಪುರ, ಕೊಟ್ಟಪ್ಪ ಬೈಲಪ್ಪನವರ, ಸಿ.ಎಸ್.ಪಾಟೀಲ, ಶೇಖಣ್ಣಗಣಾಚಾರಿ, ಆರ್.ಎಸ್.ಪಾಟೀಲ, ಮಲ್ಲೇಶಣ್ಣ ವನಹಳ್ಳಿ, ಬಸಪ್ಪ ಭದ್ರಶೆಟ್ಟಿ, ಭರಮಗೌಡ ಪಾಟೀಲ, ವೀರೇಶಆಜೂರ, ಶಿವಾನಂದ ಮ್ಯಾಗೇರಿ, ಮೇಘರಾಜ ಕೂಲಿ, ಶ್ರೀಕಾಂತ ಬುಳ್ಳಕ್ಕನವರ, ಉಮೇಶ ಅಂಗಡಿ, ಬಿ.ಎಸ್.ನವಲಗುಂದ, ಬಸಣ್ಣಗೊಬ್ಬಿ ಸೇರಿದಂತೆ ಅನೇಕ ಮುಖಂಡರು ಇದ್ದರು.