ಬ್ಯಾಡ್ಗಿ

ಸಾಮಾಜಿಕ ಲೆಕ್ಕ ಪರಿಶೋಧನೆಯ ಸಭೆ

ಸಾಮಾಜಿಕ ಲೆಕ್ಕ ಪರಿಶೋಧನೆಯ ಸಭೆ

ಬ್ಯಾಡಗಿ 03: ತಾಲೂಕಿನ ತಡಸ ಗ್ರಾಮದಲ್ಲಿ ಕಳೆದ 2019/20 ಹಾಗೂ 2020/21 ಸಾಲಿನ ನರೇಗಾ ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋಧನೆಯ ಸಭೆಯು ಜರುಗಿತು.

ಸಭೆಯಲ್ಲಿ ತಾಲೂಕಾ ಸಂಯೋಜಕ ಬಸವರಾಜ ಅಮಾತಿ ಮಾತನಾಡಿ, ಕಳೆದ ಎರಡು ಹಂತದ ಲೆಕ್ಕ ಪರಿಶೋಧನೆಯಲ್ಲಿ ಗ್ರಾ.ಪಂ. ವತಿಯಿಂದ 83 ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಇದಕ್ಕಾಗಿ 30.33 ಲಕ್ಷ ರೂಗಳನ್ನು ವೆಚ್ಚ ಮಾಡಲಾಗಿದೆ. ಕೂಲಿಗಾಗಿ 27.23 ಲಕ್ಷ ರೂ, ಸಾಮಗ್ರಿಗಾಗಿ 1.06  ಲಕ್ಷ ರೂಗಳನ್ನು ಖರ್ಚು ಮಾಡಲಾಗಿದೆ. 14ನೇ ಹಣಕಾಸು ಯೋಜನೆಯಡಿ 2018/19 ಹಾಗೂ 2019/20 ನೇ ಸಾಲಿನಲ್ಲಿ 13ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಇದಕ್ಕಾಗಿ 32.64ಲಕ್ಷ ರೂಗಳನ್ನು ಖರ್ಚು ಮಾಡಿರುವ ಬಗ್ಗೆ ಮಾಹಿತಿ ನೀಡಿದರು.17ಸಾವಿರ ರೂ..ವಸೂಲಾತಿಗೆ..!!ಗ್ರಾಮ ಪಂಚಾಯ್ತಿಯ 2019/20ನೇ ಸಾಲಿನ 14ನೇ ಹಣಕಾಸು ಯೋಜನೆಯಡಿ ಪಂಚಾಯತ್ ರಾಜ್ ಇಲಾಖೆ ವತಿಯಿಂದ  ಅನುಷ್ಠಾನಗೊಂಡಿರುವ ಎರಡು ಕಾಮಗಾರಿಗಳಲ್ಲಿ ಅಳತೆ ವ್ಯತ್ಯಾಸವಿದ್ದು, ಹೆಚ್ಚುವರಿಯಾಗಿ ಅನುದಾನವನ್ನು ಬಳಸಿಕೊಳ್ಳಲಾಗಿದೆ. ಇದರಲ್ಲಿ 17263ರೂಗಳನ್ನು ವಸೂಲಾತಿಗೆ ಸೂಚಿಸಲಾಗಿದೆ. ಅಲ್ಲದೆ ತೋಟಗಾರಿಕೆ ಹಾಗೂ ಜಲಾನಯನ ಕೃಷಿ (ಅರಣ್ಯ) ಇಲಾಖೆಯ ವತಿಯಿಂದ ಅನುಷ್ಠಾನಗೊಂಡಿರುವ 26 ಕಾಮಗಾರಿಗಳ ಕಡತಗಳನ್ನು ನೀಡದೆ ಇರುವ ಕಾರಣ 4.33 ಲಕ್ಷ ರೂಗಳನ್ನು ಆಕ್ಷೇಪಣೆಯಲ್ಲಿ ಇಡಲಾಗಿದೆ ಎಂದು ಸಭೆಯಲ್ಲಿ ತಿಳಿಸಿದರು.

ಗ್ರಾಪಂ ಅಭಿವೃದ್ಧಿ ಅಧಿಕಾರಿ ಬಸವರಾಜ ಬಣಕಾರ ಮಾತನಾಡಿ, ನರೇಗಾ ಯೋಜನೆಯಡಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು ಕ್ರಿಯಾ ಯೋಜನೆ ತಯಾರಿಸುತ್ತಿದ್ದು, ರೈತರು ಹಾಗೂ ಗ್ರಾಮಸ್ಥರು ಕಾಮಗಾರಿಗಳ ಬಗ್ಗೆ ಅರ್ಜಿ ಸಲ್ಲಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಸಭೆಯ ಅಧ್ಯಕ್ಷತೆಯನ್ನ ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಎನ್.ಎಸ್. ಚೌಡಾಳ ವಹಿಸಿದ್ದರು. ಗ್ರಾ.ಪಂ. ಅಧ್ಯಕ್ಷ ಭರಮಪ್ಪ ಹೊನ್ನತ್ತಿ, ಉಪಾಧ್ಯಕ್ಷೆ ಕವಿತಾ ಓಲೇಕಾರ, ಕೇಶವಗೌಡ ಕಿತ್ತೂರ, ರಮೇಶ ಜಾಡರ, ಚಂದ್ರಪ್ಪ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಸುದ್ದಿ ಓದಿ