ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರಕ : ದಾಧಾಪೀರ
ಶಿಗ್ಗಾವಿ 03 : ಇಂದಿನ ಪೀಳಿಗೆಯ ಯುವಕರು ಮಾದಕ ವ್ಯಸನಿಗಳಾಗಿ ಅಲ್ಪ ವಯಸ್ಸಿನಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ತಂಬಾಕಿನಲ್ಲಿ ವಿಷಯುಕ್ತ ರಾಸಾಯನಿಕವು ಯುವಕರಿಗೆ ಅಲ್ಪ ಸುಖ ಕೊಟ್ಟು ಭವಿಷ್ಯದ ಜೀವನ ಹಾಳು ಮಾಡುತ್ತಿದೆ ಎಂದು ಜಿಲ್ಲಾ ತಂಬಾಕು ಘಟಕದ ಸಮಾಜ ಕಾರ್ಯಕರ್ತ ದಾದಾಫೀರ ಹುಲಿಕಟ್ಟಿ ಹೇಳಿದರು.
ಪಟ್ಟಣದ ಶ್ರೀ ರಂಭಾಪುರೀ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕ,ಭಾರತ ಸೇವಾದಳ ಹಾಗೂ ರೋವರ್ ಮತ್ತು ರೇಂಜರ್ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಇಂದು"ವಿಶ್ವ ತಂಬಾಕು ನಿಯಂತ್ರಣ" ದಿನಾಚರಣೆಯನ್ನು ಆಚರಿಸಲಾಯಿತು, ಕಾರ್ಯಕ್ರಮದಲ್ಲಿ ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸ ಮಾತನಾಡಿದ ಪ್ರತಿದಿನ 17 ಕೋಟಿ 66ಲಕ್ಷ್ ಜನ ಇಂದು ತಂಬಾಕು ಜಗಿಯುತ್ತಿದ್ದಾರೆ, ಸಿಗರೇಟು ಸೇದುವ ವ್ಯಕ್ತಿ ತಾನು ಸೇದಿ ಆ ಹೊಗೆಯನ್ನು ಇನ್ನೊಬ್ಬರಿಗೆ ಬಿಡುವುದು ಹಾನಿಕಾರಕ, ಅಲ್ಲದೇ ಟಿಬಿ, ಕ್ಷಯರೋಗ ಇದು ಅಂಟು ರೋಗವಾಗಿದ್ದು ಅಂಟು ರೋಗದಿಂದ ದೂರವಿರಿ ಅಲ್ಲದೇ ಸಾವು ಎಂದರೆ ನರಳಿ ನರಳಿ ಸಾಯುವುದಲ್ಲಾ ಸುಖವಾಗಿ ಸಾಯುವುದು ಸ್ವರ್ಗಕ್ಕೆ ಸಮಾನ ಎಂದರು. ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಶಿಗ್ಗಾವಿ ಸರ್ಕಾರಿ ಆಸ್ಪತ್ರೆ ಆಪ್ತ ಸಮಾಲೋಚಕಿ ಕುಮಾರಿ ರೇಣುಕಾ ಹೊಸಮನಿ ಮಾತನಾಡಿ ಮಹಿಳೆಯರು ಇಂದು ಮದ್ಯ ವ್ಯಸನಿಗಳಾಗಿ ಸಂತಾನ ಭಾಗ್ಯ ಕಳೆದುಕೊಳ್ಳುತ್ತಿದ್ದಾರೆ ಅಲ್ಲದೇ ಮಾದಕವಸ್ತುಗಳ ಸೇವನೆಯಿಂದ ಗ್ಯಾಂಗ್ರೀನ್ನಂತ ಭಯಾನಕ ರೋಗಕ್ಕೆ ತುತ್ತಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದರು.
ಅಧ್ಯಕ್ಷತೆವಹಿಸಿ ಮಾತನಾಡಿದ ಪ್ರಾಚಾರ್ಯ ಪ್ರೊ ಶಿವಣ್ಣನವರ ಮಾತನಾಡಿ ತಂಬಾಕು ನಿಷೇಧ ಮೊದಲು ಮನೆಯಿಂದಲೇ ಆರಂಭವಾಗಬೇಕು ಎಂದರಲ್ಲದೆ ಭವಿಷ್ಯದ ಬದುಕು ಸುಂದರವಾಗಿ ಇರಬೇಕಾದರೆ ನೀವು ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ವ್ಯಕ್ತಿಗಳಾಗಬೇಕೆಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿ ಪ್ರೊ ಶಿವಯ್ಯ ಪೂಜಾರ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು, ಕಾರ್ಯಕ್ರಮದಲ್ಲಿ ಎಸ್ ವಿ ಬಳಿಗಾರ್, ಎಸ್ ವಿ ಕುಲಕರ್ಣಿ, ಎನ್ ಸಿ ನಾಯಕ, ಎಸ್ ಎಸ್ ಚಿಕ್ಕಮಠ ಹಾಗೂ ಸರ್ವ ಸಿಬಂದಿ ವಿದ್ಯಾರ್ಥಿಗಳು ಹಾಜರಿದ್ದರು. ಪ್ರೊ ಸಿದ್ದಪನವರ ಸ್ವಾಗತಿಸಿದರು, ಹೊನ್ನಣ್ಣವರ ವಂದಿಸಿದರು.