ಸರಳ, ಸಾಂಕೇತಿಕವಾಗಿ ಡಾ .ಅಂಬೇಡ್ಕರ ಜಯಂತಿ ಆಚರಣೆ
ಶಿಗ್ಗಾವಿ 15: ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಸಂವಿಧಾನ ಶಿಲ್ಪಿ ಡಾ ಬಾಬಾ ಸಾಹೇಬ ಅಂಬೇಡ್ಕರ ಅವರ 130 ನೇ ಜಯಂತೋತ್ಸವವನ್ನು ಪ್ರಾಂಶುಪಾಲರಾದ ಸುಮಂಗಲಾ ದುರ್ಗದವರ ಅಧ್ಯಕ್ಷತೆಯಲ್ಲಿ ಸರಳ ಹಾಗೂ ಸಾಂಕೇತಿಕವಾಗಿ ಆಚರಿಸಲಾಯಿತು.
ಸಂವಿಧಾನ ಶಿಲ್ಪಿ ಡಾ ಬಾಬಾ ಸಾಹೇಬ ಅಂಬೇಡ್ಕರ ಅವರ ಭಾವಚಿತ್ರಕ್ಕೆ ಪುಪ್ಷ ಸಮರ್ಪಣೆ ಮಾಡಿ ಮಾತನಾಡಿ ಎಲ್ಲ ವರ್ಗದ ಜನತೆಗೆ ಸಾಮಾಜಿಕ ನ್ಯಾಯ ಮತ್ತು ಸಮಾನತೆ ತಂದ ಹಾಗೂ ವಿಶ್ವದಲ್ಲಿ ಭಾರತಕ್ಕೆ ಮಾದರಿ ಸಂವಿಧಾನ ನೀಡಿದ ದೀಮಂತ ಮಹಾನಾಯಕ ಎಂದು ಹೇಳಿದರು.
ಶಿಕ್ಷಕರಾದ ಪರುಶರಾಮ ಹಿರೂಲಾಲ, ವಿರೇಶ ಹಂಚಿನಮನಿ, ಮಲ್ಲನಗೌಡ ಪಾಟೀಲ, ಜ್ಯೋತಿ ಕಾಂಬಳೆ, ನಾಗರಾಜ ಎಂ.ವಿ, ಶುಶ್ರೂಷಕಿ ಕೆ.ಸಿ.ತಿಪ್ಪಾನಾಯ್ಕರ್, ನಿಲಯ ಪಾಲಕಿ ವ್ಹಿ.ಸಿ. ಅರಳಿಕಟ್ಟಿ, ಪ್ರಥಮ ದರ್ಜೆ ಸಹಾಯಕ ಸಂತೋಷ.ಬ. ತಿರಕಣ್ಣನವರ, ಜ್ಯೋತಿ ವಾಯ್.ಉಪಸ್ಥಿತರಿದ್ದರು.