ತಾಳಿಕೋಟಿ

ಸಿದ್ಧರಾಮೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ: ಆನಂದ ದೊಡಮನಿ

ಸಿದ್ಧರಾಮೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ: ಆನಂದ ದೊಡಮನಿ

ಲೋಕದರ್ಶನ ವರದಿ 

ತಾಳಿಕೋಟಿ 31: ಆ. 3ರಂದು ದಾವಣಗೆರೆಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯನವರ ಜನ್ಮದಿನದ ಅಂಗವಾಗಿ ನಡೆಯಲಿರುವ 75ನೇ ಅಮೃತ ಮಹೋತ್ಸವ ಸಮಾವೇಶಕ್ಕೆ ದೇ. ಹಿಪ್ಪರಗಿ ಮತಕ್ಷೇತ್ರದಿಂದ ಅತ್ಯಧಿಕ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕಾಂಗ್ರೇಸ್ ಮುಖಂಡ ಆನಂದಗೌಡ ದೊಡಮನಿ ಮನವಿ ಮಾಡಿಕೊಂಡರು. 

ಸಮಾವೇಶ ಪ್ರಚಾರಾರ್ಥವಾಗಿ ಮತಕ್ಷೇತ್ರದ ಹಲವಾರು ಗ್ರಾಮಗಳಿಗೆ ಭೇಟಿ ನೀಡಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು ಈ ಭಾಗದಿಂದ ಸುಮಾರು 10 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸಿದ್ಧರಾಮಯ್ಯನವರ ಅಭಿಮಾನಿಗಳು ಸ್ವಯಂ ಪ್ರೇರಿತರಾಗಿ ಸಮಾವೇಶದಲ್ಲಿ ಭಾಗವಹಿಸುವದನ್ನು ನೋಡಿದರೆ, ಇದು ಅವರು ಸಿದ್ಧರಾಮಯ್ಯನವರ ಮೇಲಿಟ್ಟಿರುವ ಪ್ರೀತಿ, ವಿಶ್ವಾಸ ಹಾಗೂ ಅಭಿಮಾನವನ್ನು ಎತ್ತಿ ತೋರಿಸುತ್ತದೆ. ನಾನು ಸಹ ನನ್ನ ವತಿಯಿಂದ ವಾಹನಗಳ ವ್ಯವಸ್ಥೆಯನ್ನು ಮಾಡುತ್ತೀದ್ದೇನೆ ಈ ಸಮಾವೇಶ ನಮ್ಮ ಪಕ್ಷದ ಒಂದು ಐತಿಹಾಸಿಕ ಸಮಾವೇಶ ಆಗಲಿದೆ ಎಂದು ಹೇಳಿದರು. 

ಗಣ್ಯರಾದ ಮಡಿವಾಳಪ್ಪ ಬ್ಯಲ್ಯಾಳ, ಶರಣಗೌಡ ಬಿರಾದಾರ, ಹಯ್ಯಳಪ್ಪ ವಾಲಿಕಾರ, ರವಿಕುಮಾರ ಹಯ್ಯಾಳ, ಶರಣು ದೇಸಾಯಿ, ಆನಂದ ಮದರಕಲ್ಲ ವಕೀಲರು, ವಿಶ್ವನಾಥ ನಾಡಗೌಡ, ಸೋಮನಗೌಡ ಆನೆಸೂರ, ಸಿದ್ದು ಪೂಜಾರಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. 


ಸುದ್ದಿ ಓದಿ