ಚಿಕ್ಕೋಡಿ

ನಾಳೆಯಿಂದ ಸಿದ್ದೇಶ್ವರ ಜಾತ್ರೆ

ನಾಳೆಯಿಂದ ಸಿದ್ದೇಶ್ವರ ಜಾತ್ರೆ

ಕಮತೇನಟ್ಟಿ: ಚಿಕ್ಕೋಡಿ ತಾಲೂಕಿನ ಕಮತೇನಟ್ಟಿ ಗ್ರಾಮದ ಸಿದ್ದೇಶ್ವರ ಜಾತ್ರೆಯು ಏಪ್ರಿಲ್ 15 ರಿಂದ ಪ್ರಾರಂಭವಾಗಿ ಏ. 17ರವರೆಗೆ ಜರುಗಲಿದೆ. ಏ. 15 ರಂದು ಹಂದರ ಹಾಗೂ ವಾಲಗ ಕೂಡೂವುದು, ಸಂಜೆ 4 ಗಂಟೆಗೆ ಕಬಡ್ಡಿ ಪಂದ್ಯಾವಳಿಗಳು ರಾತ್ರಿ 9 ಗಂಟೆಗೆ ಹರದೇಶಿ-ನಾಗೇಶಿ ಡೊಳ್ಳಿನ ಪದಗಳು ಜರಗುವುದು.ಏ.16ರಂದು ಮುಂಜಾನೆ ಪಲ್ಲಕ್ಕಿ ಉತ್ಸವ ಹಾಗೂ ಮಧ್ಯಾಹ್ನ ಮಹಾಪ್ರಸಾದ ಮತ್ತು ರಾತ್ರಿ 9.00 ಗಂಟೆಗೆ ಸಂಗೀತ ಮತ್ತು ಹಾಸ್ಯ ರಸಮಂಜರಿ ಕಾರ್ಯಕ್ರಮ ಜರುಗುವುದು. ಏ.17ರಂದು ಸಾಯಂಕಾಲ 4 ಗಂಟೆಗೆ ಜಂಗೀ ನಿಕಾಲಿ ಕುಸ್ತಿಗಳು ನಡೆಯಲಿವೆ ಹಾಗೂ ರಾತ್ರಿ 10ಗಂಟೆಗೆ ಗ್ರಾಮೀಣ ರಂಗಭೂಮಿ ಕಲಾವಿದರ ಬಳಗ ಕಮತೇನಟ್ಟಿ ಇವರಿಂದ ಭವ್ಯರಂಗ ಮಂಟಪದಲ್ಲಿ ಗರತಿಗೆ ಬಂದ ಅಗ್ನಿ ಪರೀಕ್ಷೆ ಎಂಬ ಸಾಮಾಜಿಕ ನಾಟಕ ಜರುಗಲಿದೆ ಎಂದು ದೇವಸ್ಥಾನದ ಟ್ರಸ್ಟ ಕಮಿಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ 

ಸುದ್ದಿ ಓದಿ