ಯರಗಟ್ಟಿ

ಲೋಕಸಭೆ ಚುನಾವಣೆ ನಂತರ ಸಿದ್ದರಾಮಯ್ಯ ಸರ್ಕಾರ ಪತನ : ಜಗದೀಶ ಶೆಟ್ಟರ

ಲೋಕಸಭೆ ಚುನಾವಣೆ ನಂತರ ಸಿದ್ದರಾಮಯ್ಯ ಸರ್ಕಾರ ಪತನ : ಜಗದೀಶ ಶೆಟ್ಟರ

ಯರಗಟ್ಟಿ 30: ಬೆಳಗಾವಿ ಲೋಕಸಭಾ ಕ್ಷೇತ್ರ ಬಿಜೆಪಿ ಅಧಿಕೃತ ಅಭ್ಯರ್ಥಿಯಾದ ಜಗದೀಶ ಶೆಟ್ಟರ ಅವರು ಇಂದು ಮಹಾಂತ ದುರದುಂಡೇಶ್ವರ ಮಠಕ್ಕೆ ಭೇಟಿ ಕೊಟ್ಟು ವಿಶೇಷ ಪೂಜೆ ಸಲ್ಲಿಸಿದರು. ನಂತರ ಬಿಜೆಪಿ ಮುಖಂಡ ಅಜೀತಕುಮಾರ ದೇಸಾಯಿ ಅವರಿಗೆ ಮೆನೆಗೆ ಭೇಟೀನೀಡಿದ ವೇಳೆ ಕಾರ್ಯಕರ್ತರ ಸಭೆ ಹಮ್ಮಿಕೊಳ್ಳಲಾಗಿತ್ತು. ಸಭೆ ಉದ್ದೇಶಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ ದೇಶದ ಭದ್ರತೆಗೆ ಮತ್ತೋಮ್ಮೆ ಮೋದಿ ಸರ್ಕಾರ ಅಧಿಕಾರಕ್ಕೆ ಬರಬೇಕು ಮೋದಿಜಿಯವರ ನೇತೃತ್ವದ ಸರ್ಕಾರ ದೇಶದ ಅಭಿವೃದ್ಧಿಯಾಗಿ. ಸಿದ್ದರಾಮಯ್ಯನವರ ಸರ್ಕಾರ ಗ್ಯಾರಂಟಿ ಯೋಜನೆಗಳಿಂದ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಅಭಿವೃದ್ಧಿ ಮರಿಚಿಕೆಯಾಗಿದೆ ಹಾಗೂ ಲೋಕಸಭೆ ಚುನಾವಣೆ ನಂತರ ಸಿದ್ದರಾಮಯ್ಯ ಸರ್ಕಾರ ಪತನ ವಾಗಲಿದೆ ಎಂದು ಜಗದೀಶ ಶೆಟ್ಟರ ಹೇಳಿದರು. 

ಈ ವೇಳೆ ಅಜೀತಕುಮಾರ ದೇಸಾಯಿ, ವಿರೂಪಾಕ್ಷ ಮಾಮನಿ, ಸೌರಭ ಚೊಪ್ರಾ, ವಿನಯಕುಮಾರ ದೇಸಾಯಿ, ಈರಣ್ಣಾ ಚಂದರಗಿ, ಡಾ. ಕೆ. ವಿ. ಪಾಟೀಲ, ದಾವಲಸಾಬ ಚ್ಪಟಿ, ಮಹಾಂತೇಶ ಗೋಡಿ, ಶಿವಾನಂದ ಯರಗಣವಿ, ಪುಂಡಲೀಕ ಮೇಟಿ, ಪರ್ವತಗೌಡ ಪಾಟೀಲ, ಮಹಾಂತೇಶ ಜಕಾತಿ, ವಿಠ್ಠಲಗೌಡ ದೇವರಡ್ಡಿ, ಬಸನಗೌಡ ಪಾಟೀಲ, ಸದಾನಂದ ಹಣಬರ, ಚೇತನ ಜಕಾತಿ, ಬಿ. ಪಿ. ಗೋಡಿ, ಸದಾನಂದ ಪಾಟೀಲ, ಕೃಷ್ಣಮೂರ್ತಿ ತೊರಗಲ್, ರಾಜು ಸಾಲಿಮಠ, ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು. 


ಸುದ್ದಿ ಓದಿ