19 ಭಾಷೆಗಳಿಗೆ ಅನುವಾದಿಸಿದ ಏಕೈಕ ಗ್ರಂಥ ಸಿದ್ಧಾಂತ ಶಿಖಾಮಣಿ
ಶಿಗ್ಗಾವಿ 27: ಮೂಲ ಸಂಸ್ಕೃತ ಭಾಷೆಯಲ್ಲಿರುವ ಗ್ರಂಥವನ್ನು 19 ಭಾಷೆಗಳಿಗೆ ಅನುವಾದಿಸಿ ಪ್ರಧಾನಿ ನರೇಂದ್ರ ಮೋದಿಜಿಯವರಿಂದ ಬಿಡುಗಡೆಗೊಳಿಸಿದ ಗ್ರಂಥ ಯಾವುದಾದರೂ ಇದ್ದರೆ ಅದು ಸಿದ್ಧಾಂತ ಶಿಖಾಮಣಿ ಗ್ರಂಥವಾಗಿದೆ ಎಂದು ಕೇಂದ್ರ ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಬಿಸನಳ್ಳಿ ಕಾಶೀ ಶಾಖಾಮಠದ ಆವರಣದಲ್ಲಿ ಧರ್ಮ ಸಭೆಯ ಸಮಾರೋಪ ಸಮಾರಂಭವನ್ನುದ್ದೇಸಿಸಿ ಮಾತನಾಡಿದ ಅವರು, ಮನುಷ್ಯ ಬರಿ ದೈಹಿಕ ಸುಖಕ್ಕೆ ಆಸೆ ಪಡುವುದನ್ನು ಬಿಟ್ಟು ಆಧ್ಯಾತ್ಮದತ್ತ ಒಲವು ಮೂಡಿಸಿಕೋಳ್ಳಬೇಕು. ಮನುಷ್ಯನಿಗೆ ದೈಹಿಕ ಸುಖ ಕ್ಷಣಿಕವಾದರೆ, ಆಧ್ಯಾತ್ಮಿಕ ಸುಖ ಶಾಸ್ವತ ಸುಖವಾಗಿದೆ. ಭಾರತೀಯರ ಏಕವಿವಾಹ ಕುಟುಂಬ ಪದ್ದತಿಗೆ ಇಡೀ ವಿಶ್ವವೇ ತಲೆ ಬಾಗುತ್ತಲಿವೆ. ಪಾಶ್ಚಿಮಾತ್ಯರ ದಾಂಪತ್ಯ ಬದುಕು ಅರ್ತಹೀನ ಬದುಕಾದರೆ, ಭಾರತೀಯರ ವಿವಾಹ ಬದುಕು ಅರ್ಥ ಪೂರ್ಣ ಬದುಕಾಗಿದೆ ಎಂದು ಹೇಳಿದರು.
ಕಾಶೀ ಪೀಠದ ಉತ್ತರಾಧಿಕಾರಿಗಳಾದ ಹೊಟಗಿ ಡಾ.ಮಲ್ಲಿಕಾರ್ಜುನ ಶಿವಾಚಾರ್ಯರು ಆರ್ಶೀವಚನ ನೀಡಿ, ಹೊಟಗಿಯ ಶ್ರೀ ಮಠದ ವ್ಯಾಪ್ತಿ ಸಿಮಿತ ಪ್ರದೇಶವಾದರೆ, ಶ್ರೀ ಕಾಶೀ ಪೀಠದ ವ್ಯಾಪ್ತಿ ದೇಶ ವಿದೇಶ ವ್ಯಾಪ್ತಿಯನ್ನು ಹೋಂದಿದೆ. ಶ್ರೀ ಕಾಶೀ ಪೀಠದ ಉತ್ತರಾಧಿಕಾರಿಯಾಗುವ ಭಾಗ್ಯ ನನಗೆ ಬಯಸದೇ ಬಂದ ಭಾಗ್ಯವಾಗಿದ್ದು, ಡಾ.ಚಂದ್ರಶೇಖರ ಶಿವಾಚಾರ್ಯರ ಆಶಯದಂತೆ ಅಯೋಧ್ಯ, ರಾಮೇಶ್ವರ ಸೇರಿದಂತೆ ಇತರ ಬಾಗಗಳಲ್ಲಿ ಶ್ರೀ ಕಾಶೀ ಶಾಖಾ ಮಠವನ್ನು ಸ್ಥಾಪಿಸಿ ಅಭಿವೃದ್ಧಿ ಪಡೆಸುವ ಗುರಿ ಹೋಂದಿರುವುದಾಗಿ ಹೇಳಿದರು.
ಅರಳೆಲೆಮಠದ ಶ್ರೀ ರೇವಣಸಿದ್ದೇಶ್ವರ ಸ್ವಾಮಿಜಿ ಸಭೆಯ ಅಧ್ಯಕ್ಷತೆವಹಿಸಿ ಆರ್ಶೀವಚನ ನೀಡಿದರು. ಭರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ, ಬಿಜೆಪಿ ತಾಲೂಕಾ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಮಾತನಾಡಿದರು.
ಧರ್ಮ ಸಭೆಯ ಸಮಾರೋಪ ಸಮಾರಂಭದ ಅಂಗವಾಗಿ ಹೈದರಾಬಾದ ಬಲಕಂಪೇಟೆಯ ಸದ್ಭಕ್ತರಿಂದ ಸಾಮೂಹಿಕ ವಿವಾಹ, ಶಿವದೀಕ್ಷೆ, ವೃದ್ಧ ಜಂಗಮ ದಂಪತಿಗಳ ಪಾದಪೂಜೆ ನೆರವೇರಿತು.
ಶ್ರೀ ನೀಲಕಂಠ ಶಿವಾಚಾರ್ಯರು, ಶ್ರೀ ವಿಶ್ವಾರಾಧ್ಯ ಶಿವಾಚಾರ್ಯರು, ಶಂಭಣ್ಣ ಮಾ.ಪ.ಶೆಟ್ಟರ, ದೇವಣ್ಣ ಚಾಕಲಬ್ಬಿ, ಉಮೇಶ ಅಂಗಡಿ, ರೇಣುಕನಗೌಡ ಪಾಟೀಲ, ಸಂಜನಾ ರಾಯ್ಕರ, ಶಿವರಾಜ ರಾಯಣ್ಣವರ, ಗದಿಗಯ್ಯ ಹಿರೇಮಠ, ಶಂಭುಲಿಂಗಪ್ಪ ಆಜೂರ, ಗುರುಶಾಂತಪ್ಪ ನರೇಗಲ್, ಗದಿಗೇಪ್ಪ ಮಾ.ಪ.ಶೆಟ್ಟರ, ಗಂಗಾಧರ ಬಡ್ಡಿ, ನೀಲಕಂಠಪ್ಪ ನರೇಗಲ್ ಸೇರಿದಂತೆ ಇತರರು ಇದ್ದರು. ಜಿ.ಎಸ್.ದೇಸಾಯಿ ಕಾರ್ಯಕ್ರಮ ನಿರ್ವಹಿಸಿದರು.