ಹೂವಿನ ಹಡಗಲಿ

ಶಟಲ್ ಬ್ಯಾಡ್ಮಿಂಟನ್ ವಿದ್ಯಾಂಜಲಿ ಶಾಲೆ ವಿಭಾಗ ಮಟ್ಟಕ್ಕೆ ಆಯ್ಕೆ

ಶಟಲ್ ಬ್ಯಾಡ್ಮಿಂಟನ್ ವಿದ್ಯಾಂಜಲಿ ಶಾಲೆ ವಿಭಾಗ ಮಟ್ಟಕ್ಕೆ ಆಯ್ಕೆ

ಹೂವಿನ ಹಡಗಲಿ  26:  ಪ್ರಸಕ್ತ ಸಾಲಿನ 17ನೇ ವರ್ಷದ  ಒಳಗಿನ ಮಕ್ಕಳ ಶಟಲ್ ಬ್ಯಾಡ್ಮಿಂಟನ್ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಪಟ್ಟಣದ ವಿದ್ಯಾಂಜಲಿ ಪ್ರೌಢಶಾಲೆ ಪ್ರಥಮ ಸ್ಥಾನ ಪಡೆದು ಕಲಬುರ್ಗಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಮುಖ್ಯ ಗುರು ಎಚ್ ಎಂ ರಾಘವೇಂದ್ರ ತಿಳಿಸಿದರು.

ವಿದ್ಯಾರ್ಥಿಗಳಾದ ಮನೋಜ್ ಕುಮಾರ್, ಉದಯನಾಯ್ಕ್‌,ಅಬ್ದುಲ್ ರೆಹಮಾನ್, ನಿಖಿಲ್,ಯಶವಂತ್ ಅಮೋಘ ಫೈನಲ್ ಪಂದ್ಯದಲ್ಲಿ ಅಮೋಘ ಆಟವಾಡಿದರು.ಆಡಳಿತ ಮಂಡಳಿ ಕಾರ್ಯದರ್ಶಿ ಎಚ್ ಎಂ ಸುನಂದಾ, ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ವಿ ಪೂಜಾರ ,ತಾಲೂಕು ದೈಹಿಕ ಪರೀವೀಕ್ಷಕ ರಫಿ ಅಹಮದ್ ಖವಾಸ್ ಹಾಗೂ ಶಿಕ್ಷಕ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ. 


ಸುದ್ದಿ ಓದಿ