ಅಥಣಿ

ಶ್ರೀಮಂತ ಪಾಟೀಲರು ಅಧಿಕಾರದ ಹಿಂದೆ ಬಿದ್ದಿಲ್ಲ: ಅವತಾಡೆ

ಶ್ರೀಮಂತ ಪಾಟೀಲರು ಅಧಿಕಾರದ ಹಿಂದೆ ಬಿದ್ದಿಲ್ಲ: ಅವತಾಡೆ

ಅಥಣಿ 31: ಮಾಜಿ ಸಚಿವ ಶ್ರೀಮಂತ ಪಾಟೀಲರ 69 ನೇ ಜನ್ಮ ದಿನದ ಅಂಗವಾಗಿ ಅಥಣಿ ಶುಗರ್ಸ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣೆ, ಶಸ್ತ್ರ ಚಿಕಿತ್ಸೆ ಮತ್ತು ರಕ್ತದಾನ ಶಿಬಿರ ಆಯೋಜಿಸುವ ಮೂಲಕ ಸಾಮಾಜಿಕ ಮತ್ತು ರಚನಾತ್ಮಕವಾಗಿ ಆಚರಿಸಲಾಯಿತು.   

ಕೆ.ಎಮ್‌.ಎಫ್ ನಿರ್ದೇಶಕ ಅಪ್ಪಾಸಾಹೇಬ ಅವತಾಡೆ ಮಾತನಾಡಿ ಮಾಜಿ ಸಚಿವ ಶ್ರೀಮಂತ ಪಾಟೀಲರು ಅಧಿಕಾರದ ಹಿಂದೆ ಬಿದ್ದಿಲ್ಲ. ಅಧಿಕಾರ ಇಲ್ಲದಾಗಲೂ ಕೂಡ ರೈತರಿಗೆ ಸ್ವಂತ ವೆಚ್ಚದಲ್ಲಿ ನೀರಾವರಿ ಜೊತೆಗೆ ಬಡ ಮತ್ತು ನಿರ್ಗತಿಕರಿಗೂ ವೈದ್ಯಕೀಯ ವೆಚ್ಚ ಸೇರಿದಂತೆ ನೈಸರ್ಗಿಕ ವಿಕೋಪಗಳ ಸಂಕಷ್ಟದ ಸಮಯದಲ್ಲಿಯೂ ನೆರವಿಗಾಗಿ ಧಾವಿಸುವ ಶ್ರೀಮಂತ ಪಾಟೀಲರ ಜನಪ್ರಿಯತೆ ಅಧಿಕಾರ ಇಲ್ಲದ ಸಮಯದಲ್ಲಿಯೂ ದ್ವಿಗುಣವಾಗಿದೆ ಎಂದರು.  

69ನೇ ಜನ್ಮದಿನದ ಅಂಗವಾಗಿ ಶ್ರೀಮಂತ ಪಾಟೀಲರ ಅಭಿಮಾನಿಗಳು ಬಡ, ನಿರ್ಗತಿಕರಿಗೆ ಉಚಿತ ಆರೋಗ್ಯ, ಶಸ್ರ್ರ ಚಿಕಿತ್ಸೆ ಮತ್ತು ರಕ್ತ ದಾನದಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಸಾಮಾಜಿಕ ಬದ್ಧತೆ ಮೆರೆದಿದ್ದಾರೆ ಎಂದರು.  

ಅಥಣಿ ಶುಗರ್ಸನ ಕಾರ್ಯನಿರ್ವಹಣಾ ನಿರ್ದೇಶಕ ಯೋಗೇಶ ಪಾಟೀಲ ಮಾತನಾಡಿ, ಮಾಜಿ ಸಚಿವ ಶ್ರೀಮಂತ ಪಾಟೀಲರ ಹುಟ್ಟು ಹಬ್ಬದ ಅಂಗವಾಗಿ ನೇತ್ರ, ರಕ್ತ ದೊತ್ತಡ, ಸಕ್ಕರೆ, ಹೃದಯ ತಪಾಸಣೆ ಸೇರಿದಂತೆ ಅನೇಕ ರೋಗಗಳಿಗೆ ಶಸ್ತ್ರ ಚಿಕಿತ್ಸೆಯ ಸೌಲಭ್ಯ ಕೂಡ ಕಲ್ಪಿಸಲಾಗಿದ್ದು, ಮುಂದೆಯೂ ಸಹ ಶ್ರೀಮಂತ ಪಾಟೀಲರ ಮಾರ್ಗದರ್ಶನದಲ್ಲಿ ಸಾಮಾಜಿಕ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗುತ್ತೇವೆ ಎಂದರು.  

 ಮದಭಾವಿ ಗ್ರಾಮ ಪಂಚಾಯತ ಅಧ್ಯಕ್ಷ ಮಹಾದೇವ ಕೋರೆ ಮಾತನಾಡಿ, ನಮ್ಮ ರಾಜ್ಯದಲ್ಲಿ ಅಷ್ಟೇ ಅಲ್ಲ ಇಡೀ ದೇಶದಲ್ಲಿಯೇ ಮಾಜಿ ಸಚಿವ ಶ್ರೀಮಂತ ಪಾಟೀಲರಂತಹ ಅಪರೂಪದ ಮತ್ತು ಸೇವಾ ಮನೋಭಾವದ ರಾಜಕಾರಣಿ ಎಂದ ಅವರು ಅಧಿಕಾರ ಇದ್ದಾಗಲೂ ಇಲ್ಲದಾಗಲೂ ಜನರ ಸೇವೆಗೆ ಶ್ರೀಮಂತ ಪಾಟೀಲರು ಬದ್ಧರಾಗಿದ್ದಾರೆ ಎಂದರು.   

ಬಿಜೆಪಿ ಧುರೀಣ ಭಾವುಸಾಹೇಬ ಜಾಧವ ಮಾತನಾಡಿ, ಮಾಜಿ ಸಚಿವ ಶ್ರೀಮಂತ ಪಾಟೀಲರ ಸಾಮಾಜಿಕ ಕಾರ್ಯಗಳು ಇಂದಿನ ರಾಜಕಾರಣಿಗೆ ಅನುಕರಣೀಯ ಎಂದರು.  

450ಕ್ಕೂ ಹೆಚ್ಚು ಜನ ರಕ್ತ ದಾನ ಮಾಡಿದರು. 1000 ಕ್ಕೂ ಹೆಚ್ಚು ಜನರು ತಮ್ಮ ಆರೋಗ್ಯ ತಪಾಸಣೆ ಮಾಡಿಕೊಂಡರು. ಈ ಸಂದರ್ಭದಲ್ಲಿ ಧುರೀಣರಾದ ಅಬ್ದುಲ ಬಾರಿ ಮುಲ್ಲಾ,  ದಾದಾ ಪಾಟೀಲ, ರಾಮಗೌಡ ಪಾಟೀಲ, ನಾನಾಸಾಹೇಬ ಅವತಾಡೆ, ಅಪ್ಪಾಸಾಹೇಬ ಮಳಮಳಸಿ, ನಂದಿನಿ ಫರಾಕಟ್ಟೆ, ಅರುಣ ಜೋಶಿ, ಬಾಳು ಕಾಂಬಳೆ, ಅಮಿತ ಪಾಟೀಲ, ಅರುಣ ಗಣೇಶವಾಡಿ ಸೇರಿದಂತೆ ಶ್ರೀಮಂತ ಪಾಟೀಲರ ಸಾವಿರಾರು ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು. 


ಸುದ್ದಿ ಓದಿ