ಗೋಕಾಕ್

ಪೂಜ್ಯ ನಾರಾಯಣ ಶರಣರು ಅವರಿಗೆ ಶ್ರೀ ಕೃಷ್ಣದೇವರಾಯ ರಾಷ್ಟ್ರೀಯ ಪ್ರಶಸ್ತಿ

ಪೂಜ್ಯ ನಾರಾಯಣ ಶರಣರು ಅವರಿಗೆ  ಶ್ರೀ ಕೃಷ್ಣದೇವರಾಯ ರಾಷ್ಟ್ರೀಯ ಪ್ರಶಸ್ತಿ

ಗೋಕಾಕ, ಅ.14-ಇತ್ತೀಚೆಗೆ ಹಂಪಿಯಲ್ಲಿ ಜರುಗಿದ ಕಾರ‌್ಯಕ್ರಮದಲ್ಲಿ ಮೂಡಲಗಿ ತಾಲೂಕಿನ ವಡೇರಹಟ್ಟಿ ಗ್ರಾಮದ ಪ್ರವಚನಕಾರರಾದ ಪೂಜ್ಯ ಶ್ರೀ ನಾರಾಯಣ ಶರಣರು ಅವರಿಗೆ ಪ್ರತಿಷ್ಠಿತ ಶ್ರೀ ಕೃಷ್ಣದೇವರಾಯ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. 

ಹೇಮಕೂಟ ಶೂನ್ಯ ಸಿಂಹಾಸನ ಶ್ರೀ ಜಗದ್ಗುರು ಕೊಟ್ಟೂರು ಸ್ವಾಮಿ ಸಂಸ್ಥಾನ ಮಠ ಹಂಪಿಯಲ್ಲಿ ಶ್ರೀ ಸುಜ್ಞಾನ ವಿದ್ಯಾಪೀಠ ಮತ್ತು ಸಾಂಸ್ಕೃತಿಕ ರಂಗಕಲಾವಿದರ ಸಾಧಕರ ಶ್ರೀ ಮಾತಾ ಪ್ರಕಾಶನ ಕರ್ನಾಟಕ ಹಾಗೂ ದಿ. ಜರ್ನಿ ಆಫ್ ಸೊಸೈಟಿ ದೆಹಲಿ ಅವರ ಸಂಯುಕ್ತಾಶ್ರಯದಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಿದರು. ಆಧ್ಯಾತ್ಮಿಕ ಸೇವೆಯಲ್ಲಿನ ಸಾಧನೆಯನ್ನು ಗಮನಿಸಿ ಪೀಠ್ಯಾಧ್ಯಕ್ಷರು ಅಂಬಾ ದರ್ಶನ ಪೀಠ ವಡೇರಹಟ್ಟಿಯ ಪೂಜ್ಯ ಶ್ರೀ ನಾರಾಯಣ ಶರಣರು ಅವರಿಗೆ ಈ ಪ್ರಶಸ್ತಿ ಲಭಿಸಿದೆ. 

ಈ ಕಾರ‌್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಮನಿಪ್ರಸ್ವ ಜಗದ್ಗುರು ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ವಹಿಸಿದ್ದರು. ಉದ್ಘಾಟನೆಯನ್ನು ಚನ್ನಮಲ್ಲಪ್ಪ ಮೆಣಸಿನಕಾಯಿ ಇವರು ನೆರವೇರಿಸಿದರು.  

ವೆಂಕಟೇಶ ಬಡಿಗೇರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪವಾಡೆಪ್ಪ ವಮುನ್ಯಾಳ, ಶಿವಶಂಕರ​‍್ಪ ಹಂಚಿನಾಳ, ಡಾ. ಮಂಜೇಗೌಡ, ಡಾ. ಧರ್ಮನಗೌಡ, ಡಾ. ಶಿವರಾಜಗೌಡ, ಸೋಮಶೇಖರ್ ಟಿ ವಹಿಸಿದ್ದರು. ಮಂಜುಳಾ ಪಾವಗಡ ಸ್ವಾಗತ ಕೋರಿದರು. ಮಧು ಪಿ. ವಂದನಾರೆ​‍್ಣ ಮಾಡಿದರು. ಸಂಸ್ಥೆಯ ಅಧ್ಯಕ್ಷ ಡಾ. ನಾಗರಾಜ ತಂಬ್ರಹಳ್ಳಿ ಉಪಸ್ಥಿತರಿದ್ದರು. 

ಪ್ರಶಸ್ತಿ ಪಡೆದ ಡಾ. ಉದ್ದಣ್ಣಾ ಗೋಡೇರ್ ಅವರಿಗೆ ಗೋಕಾವಿ ಗೆಳೆಯರ ಬಳಗ, ಕನ್ನಡ ಜಾನಪದ ಪರಿಷತ್ತು, ಬಿಂದು ಸಂಸ್ಥೆ, ಸರ್ವೇಶ್ವರ ಜಾನಪದ ಕಲಾ ಬಳಗ, ಹಿರಿಯ ರಂಗಕರ್ಮಿ ಈಶ್ವರಚಂದ್ರ ಬೆಟಗೇರಿ, ಮಕ್ಕಳ ಸಾಹಿತಿ ಡಾ. ಲಕ್ಷ್ಮಣ ಚೌರಿ, ಸಾಹಿತಿ ಕಲಾವಿದ ಪ್ರಾಧ್ಯಾಪಕ ಜಯಾನಂದ ಮಾದರ, ಡಾ. ಅರುಣ ಸವತಿಕಾಯಿ, ಹಿರಿಯ ನ್ಯಾಯವಾದಿ ಎಮ್, ಎನ್‌. ಚೋಟೆಪ್ಪಗೋಳ ಅಭಿನಂದಿಸಿದ್ದಾರೆ. 


ಸುದ್ದಿ ಓದಿ