ಗೋಕಾಕ್

ಸಂಭ್ರಮದಿಂದ ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಣೆ

ಸಂಭ್ರಮದಿಂದ ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಣೆ

ಗೋಕಾಕ 06: ಸ್ಥಳೀಯ ಪ್ರತಿಷ್ಠಿತ ಆದರ್ಶ ಶಿಕ್ಷಣ ಸಂಸ್ಥೆಯ ಶ್ರೀ ಬಿ. ಎನ್‌. ಮಟ್ಟಿಕಲ್ಲಿ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಅತ್ಯಂತ ಸಂಭ್ರಮ ಸಡಗರಗಳಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ  ಬಿ. ಎಮ್‌. ಹಿಂಡಿಹೊಳಿ ಮಾತನಾಡಿ ಮಹಾತ್ಮರ ಆಚರಣೆ, ಹಬ್ಬ ಹರಿ ದಿನ ರಾಷ್ಟ್ರೀಯ ಉತ್ಸವಗಳನ್ನು ಆಚರಿಸುವ ಮೂಲಕ ಮಕ್ಕಳಲ್ಲಿ ಸಂಸ್ಕೃತಿ ಮತ್ತು ದೇಶಭಕ್ತಿಯನ್ನು ಜಾಗೃತಗೊಳಿಸುವುದೇ ಆಚರಣೆಗಳ ಉದ್ದೇಶ ಎಂದು ಹೇಳಿದರು. 

ಇದೇ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯ ಆರ್‌. ಎಸ್‌. ಹೆಬ್ಬಾಳೆ ಹಾಗೂ ಸಾಂಸ್ಕೃತಿಕ ಸಮಿತಿಯ ಮುಖ್ಯಸ್ಥ ಆರ್‌. ಎಸ್‌. ಕಾಕಡೆ ಮಾತನಾಡಿ ಶ್ರೀ ಕೃಷ್ಣನ ಬಾಲ್ಯ ಜೀವನದ ಬಗ್ಗೆ ಹಾಗೂ ಆತನ ಲೀಲೆಗಳ ಬಗ್ಗೆ ವಿವರಿಸಿದರಲ್ಲದೇ ಕೃಷ್ಣನ ಆದರ್ಶಗಳನ್ನು ಮಕ್ಕಳಲ್ಲಿ ಬಿತ್ತುವ ಮೂಲಕ ಮಕ್ಕಳಿಗೆ ಒಳ್ಳೆಯ ಸಂಸ್ಕಾರವನ್ನು ನೀಡಲು ಕರೆ ನೀಡಿದರು.. ಕೃಷ್ಣ ರಾಧೆಯರ ವೇಷದಲ್ಲಿ 60ಕ್ಕೂ ಅಧಿಕ ಪುಟಾಣಿಗಳು ತಮ್ಮ ವೇಷಭೂಷಣಗಳಿಂದ ಮನಸೂರೆಗೊಂಡರು. ಎಲ್ಲ ಮಕ್ಕಳಿಗೂ ಬಹುಮಾನ ವಿತರಿಸಿದರು.  

ಕಾರ್ಯಕ್ರಮದಲ್ಲಿ ಪ್ರಾಥಮಿಕ ವಿಭಾಗದ ಗುರುಮಾತೆ  ಜಿ. ಕೆ .ಪಾಟೀಲ ಮತ್ತು ರೂಪಾ ಮೂರ್ತೆಲಿ, ಸವಿತಾ ಪಾಟೀಲ, ಗುರುಮಾತೆಯರಾದ ಜೆ.ಸಿ.ಬಡಿಗನ್ನವರ, ಜಿ.ಎಸ್‌.ಬೂದಿಹಾಳಮಠ, ಎ.ಡಿ.ಹೋಳಿಮಠ, ಎಸ್‌.ಎಸ್‌.ಮಿಲಾಣಿ, ಎಚ್‌.ವ್ಹಿ.ಹಟ್ಟಿ ಮತ್ತು ಎ.ಡಿ.ಸಾವಂತ ಉಪಸ್ಥಿತರಿದ್ದರು. ಗುರುಸ್ವೀಟ್ಸ್‌ನ ಮೂರ್ತೇಲಿಯವರಿಂದ ಎಲ್ಲರಿಗೂ ಸಿಹಿ ತಿನಿಸುವಿತರಿಸಲಾಯಿತು. 


ಸುದ್ದಿ ಓದಿ