ಶಿಗ್ಗಾವ್

ಶ್ರೀ ಕಾಶಿ ಡಾ.ಚಂದ್ರಶೇಖರ ಶ್ರೀಗಳು ಮಠದ ಅರ್ಥಕ್ಕೆ ಸ್ಫೂರ್ತಿ ನೀಡಿದ್ದಾರೆ

ಶ್ರೀ ಕಾಶಿ ಡಾ.ಚಂದ್ರಶೇಖರ ಶ್ರೀಗಳು ಮಠದ ಅರ್ಥಕ್ಕೆ ಸ್ಫೂರ್ತಿ ನೀಡಿದ್ದಾರೆ

ಶಿಗ್ಗಾವಿ 23 : ಶ್ರೀ ಕಾಶಿ ಡಾ.ಚಂದ್ರಶೇಖರ ಶಿವಾಚಾರ್ಯರು, ತಮ್ಮ ವಾಸಕ್ಕಾಗಿ ಮಠ ನಿರ್ಮಾಣ ಮಾಡದೇ, ಆಧ್ಯಾತ್ಮಿಕ, ಶೈಕ್ಷಣಿಕ, ಸಾಮಾಜಿಕವಾಗಿ ಭಕ್ತಸಮೂಹಕ್ಕೆ ವಿಕಾಶ ನೀಡುವ ಪಾಠ ಶಾಲೆಯನ್ನು ತೆರೆದು ಮಠದ ಅರ್ಥಕ್ಕೆ ಸ್ಫೂರ್ತಿಯನ್ನು ನೀಡಿದವರಾಗಿದ್ದಾರೆ ಎಂದು ಉಜ್ಜಯನಿ ಪೀಠದಶ್ರೀ ಸಿದ್ಧಲಿಂಗ ರಾಜ ದೇಶಿ ಕೇಂದ್ರ ಶಿವಾಚಾರ್ಯರು ಆಶೀರ್ವಚನವನ್ನು ನೀಡಿದರು. 

ತಾಲೂಕಿನ ಬಿಸನಳ್ಳಿ ಗ್ರಾಮದ ಶ್ರೀ ಜ.ಪಂ.ವೇ.ಆ.ಸಂ.ಸಂ.ಯೋಗ ಪಾಠ ಶಾಲೆಯ ಆವರಣದಲ್ಲಿ ಲೋಕ ಕಲ್ಯಾಣಾರ್ಥವಾಗಿ ನಡೆದ ಸಾಮೂಹಿಕ ಇಷ್ಠಲಿಂಗ ಮಹಾಪೂಜೆ, ಧರ್ಮ ಸಮಾರಂಭದ ಉದ್ಘಾಟಿಸಿ ಆಶೀರ್ವಚನ ನೀಡಿದಅವರು ಬ್ರಿಟಿಷ್ ಸಾಮ್ರಾಜ್ಯದ ದೊರೆ ಲಾರ್ಡ ಮೇಕಾಲಿ ಜಾರಿಗೆ ತಂದಿರುವ ಶಿಕ್ಷಣದ ವ್ಯವಸ್ಥೆಯನ್ನು ಭಾರತೀಯರು ಮುಂದುವರೆಸಿಕೊಂಡು ಹೋಗುತ್ತಿರುವುದು ದುರಂತದ ಸಂಗತಿ. ಪ್ರಾಚೀನ ಸನಾತನ ಗುರುಕುಲದ ಶಿಕ್ಷಣ ಪದ್ದತಿ ಇಂದಿನ ಮಕ್ಕಳಿಗೆ ಅತ್ಯಅವಸ್ಯವಾಗಿದೆ. ಆ ನಿಟ್ಟಿನಲ್ಲಿ ಕಾಶಿ ಜಗದ್ಗುರುಗಳವರ ಕಾಶ್ಮೀರ ದಿಂದರಾಮೇಶ್ವರದ ವರೆಗೆ ಶಾಖಾಮಠಗಳನ್ನು ತೆರೆದು ತಮ್ಮ ವ್ಯಾಪ್ತಿಯನ್ನು ದೇಶದಾದ್ಯಂತ ಪಸರಿಸಿದ್ದಿರಿ. ಅದೇತೆರನಾಗಿ ಮಕ್ಕಳ ಅಭಿರುಚಿಗೆ ತಕ್ಕಹಾಗೆ ಹಿಂದಿನ ಗುರುಕುಲ ಪದ್ದತಿಯಂತೆ 64 ಮಾದರಿ ಶಿಕ್ಷಣ ನೀಡುವ ಸನಾತನ ಗುರುಕುಲ ಪಾಠಶಾಲೆಗಳನ್ನು ತೆರೆಯುವಂತೆ ಕಾಶೀ ಜಗದ್ಗುರುಗಳಲ್ಲಿ ಮನವಿ ಮಾಡಿದರು. 

ಗುಳೇದಗುಡ್ಡದ ಶ್ರೀ ಡಾ.ನೀಲಕಂಠ ಶಿವಾಚಾರ್ಯರು ಪ್ರಾಸ್ತಾವಿಕ ನುಡಿನಮನ ಸಲ್ಲಿಸಿದ ಅವರು, ಬೆರಳೆಣಿಕೆ ವಟುಗಳೀಂದ, ತಗಡಿನ ಶೆಡ್ಡಿನಲ್ಲಿ ಪ್ರಾರಂಭವಾದ ಈ ಪಾಠಶಾಲೆ, ವಿಶಾಲವಾದ ಆರ್‌.ಸಿ.ಸಿ.ಕಟ್ಟಡಹೋಂದಿ 2 ನೂರಕ್ಕೂ ಹೆಚ್ಚುಸಂಖ್ಯೆಯ ವಟುಗಳನ್ನು ಹೊಂದಿ ಪಾಠಶಾಲೆಯ ಶಮಾನೋತ್ಸವ ಆಚರಿಸುತ್ತಿರುವುದು ಭಕ್ತರು ನೀಡಿದ ದೇಣಿಗೆ, ಶ್ರಮದ ಪ್ರತಿಫಲವಾಗಿ. ಮಕ್ಕಳನ್ನು ಹೇರುವುದು ದೊಡ್ಡದಲ್ಲ. ಅವರಿಗೆ ಸಂಸ್ಕಾರ ಷಯುತ ಜೀವನ ನೀಡುವುದು ಮುಖ್ಯವಾಗಿದೆ. ಆ ಕಾರ್ಯವನ್ನು ಶ್ರೀ ಕಾಶಿ ಜಗದ್ಗುರುಗಳವರು, ವೇದ, ಸಂಸ್ಕೃತ ಪಾಠ ಶಾಲೆಯನ್ನು ತೆರೆಯುವ ಮೂಲಕ ಮಕ್ಕಳಿಗೆ ಸಂಸ್ಕಾರಯುತ ಜೀವನವನ್ನು ನೀಡುತ್ತಿರುವುದು ಅವರ ಸೇವಾ ಮನೋಭಾವನೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಹೇಳಿದರು. 

ಹಾವೇರಿ ಜಿ.ಹೆಚ್‌. ಕಾಲೇಜಿನಉಪನ್ಯಾಸಕ ಸಿದ್ದೇಶ್ವರ ಹುಣಸೀಕಟ್ಟಿಮಠ ಪ್ರಾಸ್ಥಾವಿಕವಾಗಿ ಮಾತನಾಡಿ ಸಂಸ್ಕಾರಎಂದರೆ, ದೇಹ ಮತ್ತು ಮನಸ್ಸುಗಳನ್ನು ಸುಂದರಗೊಳಿಸುವ ಮಹತ್ತರವಾದ ಕ್ರೀಯೆಯಾಗಿದೆ. ಗುರು ಉಪದೇಶಾಮೃತದಿಂದ ಸಿಗುವ ಸಂಸ್ಕಾರಗಳು ವ್ಯಕ್ತಿಯ ವ್ಯಕ್ತಿತ್ವದೇಹ, ಮನಸುಗಳನ್ನು ಸಂಸ್ಕರಿಸುತ್ತವೆ. ಮನುಷ್ಯನ ಅಂತರಂಗವನ್ನು ಪರಿಶುದ್ಧಗೊಳಿಸುವುದೇ ಸಂಸ್ಕಾರವಾಗಿದೆ ಎಂದು ಹೇಳಿದರು. 

ಜೋಳ ಪ್ರಕೃತಿಯಾದರೆ ಹಿಟ್ಟು ಸಂಸ್ಕೃತಿಯಾಗಲಿದೆ. ಹಿಟ್ಟಿಗೆ ಸಂಸ್ಕಾರ ಸಿಕ್ಕಾಗ ರೊಟ್ಟಿಯಾಗಲಿದೆ. ಭತ್ತ ಪ್ರಕೃತಿಯಾದರೆ, ಅಕ್ಕಿ ಸಂಸ್ಕೃತಿಯಾಗಲಿದೆ. ಅಕ್ಕಿಗೆ ಸಂಸ್ಕಾರ ಸಿಕ್ಕಾಗ ಅನ್ನವಾಗಿ ಪ್ರಸಾದವಾಗಲಿದೆ. ಕಲ್ಲು ಪ್ರಕೃತಿಯಾದರೆ, ವಿಗ್ರಹ ಸಂಸ್ಕೃತಿಯಾಗಲಿದೆ, ಆ ವಿಗ್ರಹಕ್ಕೆ ಕಾಶೀ ಜಗದ್ಗುರುಗಳಿಂದ ಸಂಸ್ಕಾರ ಸಿಕ್ಕಾಗ ದೇವರ ಮೂರ್ತಿಯಾಗಿ ಹೋರಹೊಮ್ಮಲಿದೆ ಹಾಗೆಯೇ ಮನುಷ್ಯ ಕೂಡಾ ಗುರುವಿನ ಮಾರ್ಗದರ್ಶನಲ್ಲಿ ನಡೆದಾಗ ಮಾನವನಾಗಬಲ್ಲ. ಅವರು ನೀಡಿದ ಉಪದೇಶಾಮೃತವನ್ನು ಮೈಗೂಡಿಸಿಕೊಂಡು ನಡೆದಾಗ ಮಹದೇವನಾಗಿ ಅವನೇ ಪರಶಿವನಾಗಬಲ್ಲ ಎಂದು ಹೇಳಿದರು. 

ಸಭೆಯಲ್ಲಿ ಶ್ರೀ ಮಠದಿಂದ ಶಿಗ್ಗಾವಿ ಸಿ.ವಿ.ಮತ್ತಿಗಟ್ಟಿ ಯವರಿಗೆ ಧರ್ಮ ಸೇವಾ ಪ್ರಭಾಕರ ಹಾಗು ಕುರಬರ ಮಲ್ಲೂರಿನ ಶಿವಪ್ರಕಾಶ ಹಿರೇಮಠರವರಿಗೆ ನ್ಯಾಯ ಸೇವಾ ರತ್ನ ಪ್ರಶಸ್ತಿ ಪ್ರದಾ ನಮಾಡಲಾಯಿತು. ಕೇರೂರಿನ ಶ್ರೀ ಡಾ.ಶಿವಕುಮಾರ ಶಿವಾಚಾರ್ಯರು ಧಾರವಾಡದ ಎಸ್‌.ಬಿ.ಗಿರಿಮಠ ಮಾತನಾಡಿದರು. 

ಶ್ರೀ ಕಾಶೀಪೀಠದ ಜಗದ್ಗುರುಡಾ.ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಸಭೆಯ ಧಿವ್ಯ ಸಾನಿಧ್ಯ ವಹಿಸಿದ್ದರು. ಅರಳೆಲೆ ಮಠದ ಶ್ರೀ ರೇವಣಸಿದ್ದೇಶ್ವರ ಶ್ರೀಗಳು ಸಭೆಯ ಅಧ್ಯಕ್ಷತೆ ವಹಿಸಿದ್ದರು. ನಾಡಿನ ಹರಗುರು ಚರಮೂರ್ತಿಗಳು, ಗಣ್ಯ ಮಾನ್ಯ ಪ್ರತಿಷ್ಠಿತರು ಉಪಸ್ಥಿತರಿದ್ದರು. ಮುರಗೇ ಶಆಜೂರ ಸ್ವಾಗತಿಸಿದರು. ಗಂಗುಬಾಯಿ ದೇಸಾಯಿ ನಿರೂಪಿಸಿದರು. 

ಸುದ್ದಿ ಓದಿ