ಗೋಕಾಕ್

ಶ್ರೀ ಜ್ಞಾನೇಶ್ವರಿ ಪಾರಾಯಣ ಸೋಹಳಾ- ಹರಿನಾಮ ಸಪ್ತಾಹ

ಶ್ರೀ ಜ್ಞಾನೇಶ್ವರಿ ಪಾರಾಯಣ ಸೋಹಳಾ- ಹರಿನಾಮ ಸಪ್ತಾಹ

ಘಟಪ್ರಭಾ 03: ಶ್ರೀ ಜ್ಞಾನೇಶ್ವರಿ ಪಾರಾಯಣ ಸೋಹಳಾ ಮತ್ತು ಅಖಂಡ ಹರಿನಾಮ ಸಪ್ತಾಹ ದಿ.5 ರಿಂದ ದಿ. 12 ರವರೆಗೆ ಶ್ರೀ ಕ್ಷೇತ್ರ ಪಂಡರಪುರದ ನಾಮದೇವ ವಾಸ್ಕರ ಮಹಾರಾಜ ಇವರ ಸಾನಿಧ್ಯದಲ್ಲಿ ಸ್ಥಳೀಯ ಮಲ್ಲಾಪೂರ ಪಿ.ಜಿಯ ವಿಠ್ಠಲ ಮಂದಿರದಲ್ಲಿ ಜರುಗಲಿದೆ. 

ದಿ. 5 ರಂದು ಪೋಥಿ ಸ್ಥಾಪನಾ ನಂತರ ಪ್ರತಿದಿನ  ಶ್ರೀ ಗ್ರಂಥರಾಜ ಜ್ಞಾನೇಶ್ವರಿ ವಾಚನ, ಮದ್ಯಾಹ್ನ ಗಾಥಾ ಭಜನೆ ಸಂಜೆ ಪ್ರವಚನ, ನಾಮಜಪ, ಹರಿಪಾಠ, ರಾತ್ರಿ ಕಿರ್ತನೆ, ಜಾಗರಣೆ, ಕಾಕಡಾರತಿ, ದಿ. 12ರಂದು ಸುಕ್ಷೇತ್ರ  ಬಂಡಿಗಣಿ ಮಠದ ದಾಸೋಹರತ್ನ ಚಕ್ರವರ್ತಿ ದಾನೇಶ್ವರ ಬಸವಗೋಪಾಲ ಶರಣರು ಆಗಮಿಸುವರು. ಮುಂಜಾನೆ ಶ್ರೀ ಜ್ಞಾನೇಶ್ವರಿ ಸಾಮೂಹಿಕ  ಪಾರಾಯಣ ಸಮಾಪ್ತಿ. ನಂತರ ದಿಂಡಿ ಸೋಹಳಾ ಗ್ರಾಮ ಪ್ರದಕ್ಷಣೆ ಮಹಾಪ್ರಸಾದ ನಂತರ ಬಿಳ್ಕೋಡುವ ಸಮಾರಂಭವು ನಡೆಯಲಿದೆ. 

ದಿ.5ರಿಂದ 8 ದಿನಗಳ ವರೆಗೆ ಪ್ರತಿದಿನ ಅನೇಕ ದಾನಿಗಳಿಂದ  ಮುಂಜಾನೆ ಉಪಹಾರ, ಮದ್ಯಾಹ್ನ, ಸಂಜೆಯ ಊಟದ ವ್ಯವಸ್ಥೆಯನ್ನು ಮಾಡಲಿದ್ದಾರೆ. ಸಾರ್ವಜನಿಕರು ಹಾಗೂ ಕಮೀಟಿಯವರಿಂದ ಮಹಾಪ್ರಸಾದ ಜರುಗಲಿದ್ದು ಎಂದು ವಿಠ್ಠಲ ಮಂದಿರದ ಸಂತ ಸದ್ಬಕ್ತ ಮಂಡಳಿಯವರು ಪ್ರಟಕನೆಯಲ್ಲಿ ತಿಳಿಸಿದ್ದಾರೆ. 


ಸುದ್ದಿ ಓದಿ