ಶ್ರಾವಣ ಮಾಸ ಬನಶಂಕರಿ ದೇವಸ್ಥಾನದಲ್ಲಿ ಉಡಿ ತುಂಬುವ ಕಾರ್ಯಕ್ರಮ
ರಾಣೆಬೆನ್ನೂರು 25: ಮನುಷ್ಯ ಸಂಘಜೀವಿಯಾಗಿದ್ದಾನೆ ಭಗವಂತ ಎಲ್ಲರಿಗೂ ಶ್ರೀಮಂತಿಕೆ ನೀಡುತ್ತಾನೆ, ಆತನು ನೀಡಿದ್ದರಲ್ಲಿ ಕೆಲವು ಭಾಗ ದೇವರು ಧರ್ಮ ಆಧ್ಯಾತ್ಮ ಆರಾಧನೆ ಮತ್ತು ಸಾಮೂಹಿಕ ಕಾರ್ಯಗಳಿಗೆ ವಿನಿಯೋಗಿಸುವದರ ಮೂಲಕ, ಮಾನಸಿಕ ತೃಪ್ತಿಯನ್ನು ಹೊಂದಬೇಕು ಎಂದು ನಗರಸಭಾ ಮಾಜಿ ಸದಸ್ಯ, ಯುವನಾಯಕ ಮಂಜುನಾಥ ಗೌಡ ಶಿವಣ್ಣನವರ ಹೇಳಿದರು. ಅವರು ಇಲ್ಲಿನ ಕುರುಬಗೇರಿ ಬನಶಂಕರಿ ದೇವಸ್ಥಾನದಲ್ಲಿ ಅವರ ಅಭಿಮಾನಿ ಬಳಗವು ಆಯೋಜಿಸಿದ್ದ ಶ್ರಾವಣ ಮಾಸದ ನಿಮಿತ್ತ, ಮಹಿಳೆಯರಿಗೆ ಸಾಮೂಹಿಕ ಉಡಿತುಂಬುವ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ತಂದೆ-ತಾಯಿ ಮತ್ತು ಕುಟುಂಬದವರು ಕೊಟ್ಟ ಸಂಸ್ಕಾರದ ಫಲವಾಗಿ, ತಾವು ಸಾಮಾಜಿಕ, ಶೈಕ್ಷಣಿಕ ಪ್ರೋತ್ಸಾಹ, ಸಾಮೂಹಿಕ ವಿವಾಹಗಳು ಮತ್ತು ಧರ್ಮಜಾಗೃತಿಯ ಕಾರ್ಯಗಳು ಮಾಡುತ್ತಾ ಬಂದಿದ್ದೇನೆ. ಇದರಿಂದ ನಮಗೆ ಮತ್ತು ನಮ್ಮ ಕುಟುಂಬದವರಿಗೆ ಆತ್ಮತೃಪ್ತಿ ಇದೆ ಎಂದರು. ಅಭಿಮಾನಿ ಬಳಗದವರು ತೋರಿಸುವ ಪ್ರೀತಿ ವಿಶ್ವಾಸ ತಾವು ತಮ್ಮ ಜೀವನದಲ್ಲಿ ಎಂದಿಗೂ ಮರೆಯುವಂತಿಲ್ಲ, ಅವರ ಅಪೇಕ್ಷೆ, ಇಚ್ಛೆ ಮತ್ತು ಸಲಹೆ ಸೂಚನೆ ನನಗೆ ಅತ್ಯಂತ ಮಾರ್ಗದರ್ಶಕವಾಗಿವೆ.
ಭವಿಷ್ಯದಲ್ಲಿ ನಡೆಯುವ ಸಾಮೂಹಿಕ ವಿವಾಹಗಳು ಎರಡು ವರ್ಷಗಳಿಗೊಮ್ಮೆ ಮತ್ತು ಉಡಿತುಂಬುವ ಕಾರ್ಯವು ಪ್ರತಿವರ್ಷ ಅದ್ದೂರಿಯಾಗಿ ನಡೆಸಲು ಸಂಕಲ್ಪ ಮಾಡಿದ್ದೇನೆ ಎಂದರು. ಬಡವರು ಜನಸಾಮಾನ್ಯರು ಇಂದಿನ ದುಬಾರಿ ಕಾಲದಲ್ಲಿ ವಿವಾಹಗಳು ನಡೆಸುವುದು ಬಹಳ ಕಷ್ಟದಾಯಕ ಸಂಗತಿ, ಅದಕ್ಕಾಗಿಯೇ ಎಲ್ಲರಿಗೂ ಅನುಕೂಲವಾಗಲೆಂದು ಸಾಮೂಹಿಕ ವಿವಾಹಗಳು ನಡೆಸಲಾಗುತ್ತಿದೆ ಎಂದ ಗೌಡ ಶಿವಣ್ಣನವರ, ಅವರು ಸಮಾಜ ಸೇವೆಯೇ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬಂದಿದ್ದೇನೆ ಎಂದರು. ತಾಲೂಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಯಶ್ರೀ ಪಾಟೀಲ್ ಕಾರ್ಯಕ್ರಮ ಉದ್ಘಾಟಿಸಿ ಚಾಲನೆ ನೀಡಿದ, ಅವರು, ತಾವು ಕಂಡಂತೆ ಗೌಡ ಶಿವಣ್ಣನವರ ಕುಟುಂಬವರ್ಗದವರು ಸದಾಕಾಲ ಒಂದಿಲ್ಲ ಒಂದು ರೀತಿಯಲ್ಲಿ ಧರ್ಮ ಕಾರ್ಯದಲ್ಲಿ ತೊಡಗಿಸಿಕೊಂಡಿರುತ್ತಾರೆ. ಭೂಮಿ ತೂಕದ ಮಹಿಳೆಯರಿಗೆ ಉಡಿ ತುಂಬಿಸುವ ಭಾಗ್ಯ ಎಲ್ಲರಿಗೂ ಬರುವುದಿಲ್ಲ. ಸಹೋದರರ ಸ್ಥಾನದಲ್ಲಿ ನಿಂತು ಈ ಪವಿತ್ರ ಕಾರ್ಯವನ್ನು ಮಾಡುತ್ತಿರುವುದು ಅವರ ಪೂರ್ವಜನ್ಮದ ಪುಣ್ಯದ ಫಲವೆಂದು ಭಾವಿಸಬೇಕಾಗಿದೆ ಎಂದು, ಕುಟುಂಬಕ್ಕೆ ಪಾಟೀಲ್ ಅವರು ಕೃತಜ್ಞತೆ ಸಲ್ಲಿಸಿದರು. ಅಭಿಮಾನಿ ಬಳಗದ ಅಧ್ಯಕ್ಷ ಕರಿಯಪ್ಪ ಶಿಡಗನಾಳ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಶಿಕಲಾ ಗೌಡ ಶಿವಣ್ಣನವರ, ಶ್ರೀಮತಿ ಲಕ್ಷ್ಮಿ ಕಾಕಿ, ಪ್ರಕಾಶ ಗಚ್ಚಿನಮಠ, ಮಹೇಶಪ್ಪ ಕೊಪ್ಪದ, ವೆಂಕಟೇಶ ಕಾಕಿ, ಮಹೇಶ್ ಹೊನ್ನಜ್ಜೇರ್, ಶ್ರೀನಿವಾಸ ಪೂಜಾರ, ರಾಜು ಗಡ್ಡದಗೂಳಿ, ಮಂಜುನಾಥ ಬುರಡಿಕಟ್ಟಿ, ಮಂಜುನಾಥ ಗಡ್ಡದ ಗೂಳಿ, ಪುಟ್ಟಪ್ಪ ಸಿರಿಗೇರಿ, ಶಿವು ಕಡೂರು ಸೇರಿದಂತೆ ಮತ್ತಿತರ ಗಣ್ಯರು, ಕುಟುಂಬದ ಹಿರಿಯರು ಅಭಿಮಾನಿ ಬಳಗದ ಪದಾಧಿಕಾರಿಗಳು, ವರ್ತಕರು ಮತ್ತು ಎರಡುನೂರಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಂಡಿದ್ದರು