ಶ್ರದ್ಧಾ ಭಕ್ತಿಯಿಂದ ವಿಶೇಷ ಪಡಿ ಪೂಜೆ: ವಿವಿಧ ಧಾರ್ಮಿಕ ಪೂಜಾ
ಯರಗಟ್ಟಿ 19: ಸಮೀಪದ ಮುರಕಟ್ನಾಳ ಗ್ರಾಮದಲ್ಲಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಂದ6ನೇ ವರ್ಷದ ಶಬರಿಮಲೆ ಯಾತ್ರೆ ಅಂಗವಾಗಿ ರಾತ್ರಿ ವಿಶೇಷ ಪಡಿ ಪೂಜೆ ಕಾರ್ಯಕ್ರಮವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಅಯ್ಯಪ್ಪ ಸ್ವಾಮಿ ಮೂರ್ತಿಗೆ ಸಂಜೆಯಿಂದ ನೂರಾರು ಭಕ್ತರ, ಮಾಲಾಧಾರಿಗಳ ಸಮ್ಮುಖದಲ್ಲಿ ಕರ್ೂರದಾರತಿ, ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗಿದವು.ಪಡಿ ಪೂಜೆಯಲ್ಲಿ ಕಟಕೋಳ ಈರಣ್ಣಾ ಗುರುಸ್ವಾಮಿ, ಸಾಲಹಳ್ಳಿ ರುದ್ರಗೌಡ ಗುರುಸ್ವಾಮಿ, ಕೆ. ಚಂದರಗಿ ಬಸವರಾಜ ಗುರುಸ್ವಾಮಿ ಯರಗಟ್ಟಿ ಈರಣ್ಣಾ ಗುರುಸ್ವಾಮಿ ನೇತೃತ್ವದಲ್ಲಿ ರಾತ್ರಿ ಅಯ್ಯಪ್ಪ ಸ್ವಾಮಿ ಭಜನೆ ಮಾಡುವ ಮೂಲಕ ಪಡಿ (18 ಮೆಟ್ಟಿಲುಗಳ) ಪೂಜೆ ಹಾಗೂ ಅನ್ನಸಂತರೆ್ಣ ಕಾರ್ಯಕ್ರಮ ನಡೆಸಲಾಯಿತು.ಸಾನಿಧ್ಯ ವಹಿಸಿದ್ದ ಭಾಗೋಜಿಕೊಪ್ಪದ ಡಾ. ಶಿವಲಿಂಗ ಮುರುಘೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ಶಬರಿಮಲೆ ಎಂದಾಕ್ಷಣ ನಮಗೆ ಮೊದಲು ನೆನಪಿಗೆ ಬರೋದು ಅಯ್ಯಪ್ಪ ಸ್ವಾಮಿ ಮತ್ತು ಮಾಲೆ ಧರಿಸುವ ಭಕ್ತರು.ಅಯ್ಯಪ್ಪ ಸ್ವಾಮಿಯ ಸಾನಿಧ್ಯವಾದ ಶಬರಿಮಲೆಯನ್ನು ಜಾತ್ಯಾತೀತೆಯ ನೆಲೆಬೀಡೆಂದರೆ ತಪ್ಪಾಗಲಾರದು. ಯಾಕೆಂದರೆ ಮಾಲೆ ಧರಿಸಿದ ಯಾವುದೇ ಜಾತಿಯ ಭಕ್ತನಾದರೂ ಕೂಡ ಶಬರಿಮಲೆಯಲ್ಲಿ ಒಂದಾಗುತ್ತಾರೆ.
ಇಲ್ಲಿ ಭಕ್ತರ ಭಕ್ತಿಯೇ ಪ್ರಧಾನವಾಗಿರುತ್ತದೆ. ಮಾಲೆ ಧರಿಸಿದ ಪ್ರತಿಯೊಂದು ಅಯ್ಯಪ್ಪನ ಭಕ್ತರು ಒಂದು ಕುಟುಂಬದಂತೆ ಮಕರ ಸಂಕ್ರಾಂತಿಯಂದು ಶಬರಿ ಮಲೆಯಲ್ಲಿ ಬಂದು ಸೇರುತ್ತಾರೆ.
ಭಕ್ತರು ತಮ್ಮ ಕಷ್ಟಗಳನ್ನು ದೂರಾಗಿಸುವಂತೆ ಅಯ್ಯಪ್ಪ ಸ್ವಾಮಿಯ ಬಳಿ ಬೇಡಿಕೆಯನ್ನಿಟ್ಟು ಮಾಲೆಯನ್ನು ಧರಿಸುತ್ತಾರೆ. ಮಾಲೆ ಧರಿಸಿದಾಗ ಭಕ್ತರು ಕಠಿಣ ವ್ರತವನ್ನು ಪಾಲಿಸಬೇಕಾಗುತ್ತದೆ. ಮಾಲೆ ಧರಿಸಿದ ವ್ರತ ಧಾರಿಗಳು ಕೊರೆಯುವ ಚಳಿಯ್ಲಲ್ಲಿ ಮುಂಜಾನೆ ಬೇಗ ಎದ್ದು, ತಣ್ಣೀರಿನಿಂದ ಸ್ನಾನ ಮಾಡುತ್ತಾರೆ. ಹಿಡಿದ ವ್ರತ ಮುಗಿಯದ ತನಕ ಕಾಲಿಗೆ ಚಪ್ಪಲಿಯನ್ನು ಧರಿಸುವುದಿಲ್ಲ. ಮಾಂಸಾಹಾರದೊಂದಿಗೆ ತಮ್ಮ ಐಷಾರಾಮಿ ಜೀವನ ಶೈಲಿಯನ್ನು ತ್ಯಜಿಸಿ, ದುಶ್ಚಟಗಳಿಂದ ದೂರಾಗಿ ಅಯ್ಯಪ್ಪನ ನಾಮ ಸ್ಮರಣೆಯಲ್ಲಿ ತಲ್ಲೀನರಾಗಿರುತ್ತಾರೆ ಎಂದು ಹೇಳಿದರು.ಈ ವೇಳೆ ಅಶೋಕ ಗುರುಸ್ವಾಮಿ, ಶಿಂಧೆ ಗುರುಸ್ವಾಮಿ ಮಲ್ಲಪ್ಪ ಗುರುಸ್ವಾಮಿ, ಪ್ರವೀಣ ಗುರುಸ್ವಾಮಿ, ಪ್ರಕಾಶ ಗುರುಸ್ವಾಮಿ ಹಾಗೂ ಸ್ಥಳೀಯರಾಜ ನೀಲಕಂಠಯ್ಯ ಹಿರೇಮಠ, ಶಂಕರೇಗೌಡ ಪಾಟೀಲ, ಈಶ್ವರಗೌಡ ಪಾಟೀಲ, ಶ್ರೀಶೈಲಪ್ಪ ದಳವಾಯಿ ನಿಂಗಪ್ಪ ಪರಕನಟ್ಟಿ ಸೇರಿದಂತೆ ಸುತ್ತ ಮುತ್ತಲಿನ ಗುರುಸ್ವಾಮಿಗಳು ಹಾಗೂ ಮಾಲಾಧಾರಿಗಳು ಮತ್ತಿತರರಿದ್ದರು.