ವೀರ ಮರಣ ಹೊಂದಿದ ಯೋಧರಗೆ ಶ್ರದ್ಧಾಂಜಲಿ
ಮುಂಡಗೋಡ 06: ಛತ್ತೀಸ್ಗಡನಲ್ಲಿ ನಕ್ಸಲರ ದಾಳಿಗೆ ಬಲಿಯಾಗಿ ವೀರ ಮರಣ ಹೊಂದಿದ ಭಾರತೀಯ ಯೋಧರಿಗಾಗಿ ಸೋಮವಾರ ಸಂಜೆ ಪಟ್ಟಣದ ಶಿವಾಜಿ ಸರ್ಕಲ್ ನಲ್ಲಿ ಬಿಜೆಪಿ ವತಿಯಿಂದ ದೀಪ ಬೆಳಗಿಸುವ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.
ತಾಲೂಕಾ ಬಿಜೆಪಿ ಯುವ ಘಟಕ ಅಧ್ಯಕ್ಷ ಗಣೇಶ ಶಿರಾಲಿ, ಮಂಡಳ ಅಧ್ಯಕ್ಷ ನಾಗಭೂಷಣ ಹಾವಣಗಿ, ಗುರು ಕಾಮತ, ಭರತರಾಜ ಹದಳಗಿ, ವಿನಾಯಕ ರಾಯ್ಕರ, ಬಸವರಾಜ ಓಶಿಮಠ, ಪ್ರಕಾಶ ಬಡಿಗೇರ, ಶ್ರೀಕಾತ ಸಾನು, ಗುಡ್ಡಪ್ಪ ಕಾತೂರ, ವಿಶ್ವನಾಥ ಪವಾಡಶೆಟ್ಟರ, ಮಂಜುನಾಥ ರೇವಣಕರ, ಕಿರಣ ಕುಸ್ನೂರ, ವಿಠ್ಠಲ ಬಾಳಂಬೀಡ ಮುಂತಾದವರು ಉಪಸ್ಥಿತರಿದ್ದರು.