ಗೋಕಾಕ್

ಪಿಎಚ್‌.ಡಿ. ಪದವಿ ಪ್ರದಾನ

ಪಿಎಚ್‌.ಡಿ. ಪದವಿ ಪ್ರದಾನ

ಗೋಕಾಕ 25: ಸ್ಥಳೀಯ ಜೆ. ಎಸ್‌. ಎಸ್‌. ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಶಿವಪ್ರಸಾದಗೌಡ ಪಾಟೀಲ ಅವರು  ಮಂಡಿಸಿದ“Spectroscopic Studies on Biologically Active Organic Molecules“ ಎಂಬ ಸಂಶೋಧನಾ ಮಹಾಪ್ರಬಂಧವನ್ನು ಮನ್ನಿಸಿ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಪಿಎಚ್‌.ಡಿ. ಪದವಿ ಪ್ರದಾನ ಮಾಡಿದೆ. ಡಾ. ಅಶೋಕ ಎಚ್‌. ಸಿದರಾಯಿ ಇವರು ಸಂಶೋಧನಾ ಮಾರ್ಗದರ್ಶಕರಾಗಿದ್ದರು.  

ಗೋಕಾಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಚೇರಮನ್ನ ವಿಶ್ವನಾಥ ಕಡಕೋಳ, ವಿಶ್ವಸ್ಥ ಮಂಡಳಿಯ ಚೇರಮನ್ನ ಉದಯ ಆಜರಿ, ಆಡಳಿತ ಹಾಗೂ ವಿಶ್ವಸ್ಥ ಮಂಡಳಿಯ ಸರ್ವ ನಿರ್ದೇಶಕರು, ಕಾರ್ಯದರ್ಶಿ ಆರ್‌. ಎಂ. ವಾಲಿ, ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಆಶಾಲತಾ ಎಸ್‌. ತೇರದಾಳ ಹಾಗೂ ಮಹಾವಿದ್ಯಾಲಯದ ಎಲ್ಲ ಸಿಬ್ಬಂದಿಯವರು ಶಿವಪ್ರಸಾದಗೌಡ ಪಾಟೀಲ ಅವರನ್ನು ಅಭಿನಂದಿಸಿದ್ದಾರೆ. 


ಸುದ್ದಿ ಓದಿ