ಬೈಲಹೊಂಗಲ

ಅದ್ದೂರಿಯಿಂದ ಶಿವಯೋಗಿಶ್ವರರ ಮಹಾರಥೋತ್ಸವ

ಅದ್ದೂರಿಯಿಂದ ಶಿವಯೋಗಿಶ್ವರರ ಮಹಾರಥೋತ್ಸವ

ಲೋಕದರ್ಶನ ವರದಿ 


ಬೈಲಹೊಂಗಲ 02:  ಸುಕ್ಷೇತ್ರ ಇಂಚಲದ ಶಿವಯೋಗೀಶ್ವರ ಸಾಧು ಸಂಸ್ಥಾನ ಮಠದ ಶಿವಾನಂದ ಭಾರತಿ ಸ್ವಾಮೀಜಿಯವರ 82 ನೇ ಜಯಂತ್ಯೋತ್ಸವ, ವಿಶ್ವಶಾಂತಿಗಾಗಿ 52 ನೇ ಅಖೀಲ ಭಾರತ ವೇದಾಂತ ಪರಿಷತ ಜಾತ್ರಾ ಮಹೋತ್ಸವ ಅಂಗವಾಗಿ ರಜತ, ಶಿವಯೋಗಿಶ್ವರರ ಮಹಾರಥೋತ್ಸವ ಭಾನುವಾರ ಸಂಜೆ ಅದ್ದೂರಿಯಿಂದ ಜರುಗಿತು. 

       ಸಾವಿರಾರು ಭಕ್ತಾದಿಗಳೆಲ್ಲ ಕೂಡಿ ಭಾನುವಾರ  ಸಮಾರೋಪಗೊಂಡ ಜಾತ್ರಾ ಮಹೋತ್ಸವದಲ್ಲಿ ರಜತ ರಥ ಮತ್ತು ಮಹಾರಥೋತ್ಸವವನ್ನು ಹರ ಹರ ಮಹಾದೇವ,ಶ್ರೀ ಶಿವಾನಂದ ಭಾರತಿ ಮಹಾರಾಜಕೀ ಜೈ ಘೋಷ ಮುಗಿಲು ಮುಟ್ಟುವಂತೆ ಜೈಕಾರ ಕೇಳಿ ಬಂದಿತು. ರಥೋತ್ಸವಕ್ಕೆ ಮಲ್ಲಾಪೂರದ ಚಿದಾನಂದ ಸ್ವಾಮೀಜಿ ಚಾಲನೆ ನೀಡಿದರು. ರಥದಲ್ಲಿ ಡಾ.ಶಿವಾನಂದ ಭಾರತಿ ಸ್ವಾಮಿಜಿ ವೀರಾಜಮಾನರಾಗಿ ಆಸೀನರಾಗಿದ್ದರು. 

   ಭಕ್ತರು ಉತ್ತತ್ತಿ, ಬಾಳೇಹಣ್ಣು ಎಸೆದು ಭಕ್ತಿಯ ಪರಾಕಾಷ್ಠೆ ಮೆರೆದರು.                 

ಈ ಸಂದರ್ಬದಲ್ಲಿ   ಶಿವಯೋಗಿಶ್ವರ ಸಾಧು ಸಂಸ್ಥಾನಮಠದ ಎಲ್ಲ ಸದಸ್ಯರು ಭಕ್ತಾಧಿಗಳು ಇದ್ದರು. 


ಸುದ್ದಿ ಓದಿ