ಮುರಗುಂಡಿ ಮೊರಾರ್ಜಿ ವಸತಿ ಶಾಲೆಯಲ್ಲಿ ಶಿವರಾತ್ರಿ ಆಚರಣೆ
ಲೋಕದರ್ಶನ ವರದಿ
ಅಥಣಿ 02ತಾಲೂಕಿನ ಮುರಗುಂಡಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶಿವರಾತ್ರಿಯ ನಿಮಿತ್ತ ವಸತಿ ಶಾಲೆಯ ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ಪ್ರತಿಯೊಬ್ಬರೂ ಒಂದೊಂದು ಸಾವಿರ ಪಂಚಾಕ್ಷರಿ ಮಂತ್ರ ಓಂ ನಮಃ ಶಿವಾಯ ಉಕ್ತಿಯನ್ನು ಬರೆದು ಕೊಟ್ಟಿದ್ದಾರೆ.
ಶಿವರಾತ್ರಿಯ ಅಂಗವಾಗಿ ದಿನವಿಡಿ ಭಕ್ತಿ ಶೃದ್ಧೆಯಿಂದ ಭಜನೆಗಳನ್ನು ಹೇಳುವುದು ಹಾಗೂ ಮಂತ್ರ ಪಠಣ ಹಾಗೂ ಶಿವಧ್ಯಾನಗಳನ್ನು ಮಾಡಲಾಯಿತು. ದಿನ ವಿಡಿ ಉಪವಾಸ ಆಚರಿಸಿದ ವಿದ್ಯಾರ್ಥಿಗಳಿಗೆ ಸಾಬೂದಾಣಿ ಹಾಗೂ ಹಣ್ಣುಗಳನ್ನು ನೀಡಲಾಯಿತು. ಸಂಜೆ ಶಿವಪೂಜೆಯ ನಂತರ ರಾತ್ರಿ ಭಕ್ತ ಮಾರ್ಕಾಂಡೇಯ ಹಾಗೂ ಕೋಳೂರು ಕೊಡಗೂಸು ಭಕ್ತಿ ಪ್ರದಾನ ಮಕ್ಕಳ ಚಲನ ಚಿತ್ರಗಳನ್ನು ಪ್ರದರ್ಶಿಸಲಾಯಿತು ಪ್ರಾಂಶುಪಾಲ ಬಸವರಾಜ ಸಲಬಕ್ಕನವರ ಹಾಗೂ ಮೇಲ್ವಿಚಾರಕ ಪ್ರಭಾಕರ ಕೊಂಡಿ ಎಲ್ಲ ಕಾರ್ಯಕ್ರಮಗಳಲ್ಲಿ ಮಕ್ಕಳೊಂದಿಗೆ ಉಪಸ್ಥಿತರಿದ್ದರು.