ಹೂವಿನ ಹಡಗಲಿ

ರಾಜ್ಯೋತ್ಸವ ಪ್ರಶಸ್ತಿ ಪಡೆದ ಮಲ್ಲಮ್ಮ ಮನೆಗೆ ಶಿವಣ್ಣ ಭೇಟಿ

ರಾಜ್ಯೋತ್ಸವ ಪ್ರಶಸ್ತಿ ಪಡೆದ ಮಲ್ಲಮ್ಮ ಮನೆಗೆ ಶಿವಣ್ಣ ಭೇಟಿ

ಲೋಕದರ್ಶನ ವರದಿ 

ಹೂವಿನಹಡಗಲಿ: 01-ಪಟ್ಟಣದ ಪೌರಕಾರ್ಮಿಕ ಮಹಿಳೆ ಎಂಟುಮನಿ ಮಲ್ಲಮ್ಮ ಅವರನ್ನು ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ರಾಜ್ಯದ ಎಲ್ಲ ಪೌರಕಾರ್ಮಿಕರಿಗೆ ಸಂದ ಗೌರವಾಗಿದೆ ಎಂದು ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ಕೋಟಿ ಅಭಿಪ್ರಾಯಪಟ್ಟರು. 

ಪಟ್ಟಣದ ಹಳೇ ಹರಿಜನ ಕಾಲೋನಿಯಲ್ಲಿರುವ ಮಲ್ಲಮ್ಮ ಮನೆಗೆ ಸೋಮವಾರ ಭೇಟಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.ಸಮಾಜದ ಆರೋಗ್ಯ ರಕ್ಷಕರಾಗಿ ಕೆಲಸ ಮಾಡುವ ಪೌರಕಾರ್ಮಿಕ ಮಹಿಳೆಯನ್ನು ಪ್ರಶಸ್ತಿಗೆ ಆಯ್ಕೆ ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಅಭಿನಂದಿಸಿದರು. 

ಪೌರ ಕಾರ್ಮಿಕರ ಸೇವೆ ಕಾಯಂ : ದಿನಗೂಲಿ ಆಧಾರದಲ್ಲಿ ಕೆಲಸ ಮಾಡುವ 11,133 ಪೌರ ಕಾರ್ಮಿಕ ಸೇವೆ ಕಾಯಂಗೊಳಿಸಲು ಸರ್ಕಾರ ಐತಿಹಾಸಿಕ ತೀರ್ಮಾನ ಕೈಗೊಂಡಿದೆ.ನೇರ ಪಾವತಿ ಯೋಜನೆ ಅಡಿ ಕೆಲಸ ಮಾಡುವ ಪೌರಕಾರ್ಮಿಕರು ಹಾಗೂ ಮಹಾನಗರ ಪಾಲಿಕೆಯ ಯುಜಿಡಿಯಲ್ಲಿ ಕೆಲಸ ಮಾಡುವ 544 ಜನ ಸ್ವಚ್ಛತಾ ಸಿಬ್ಬಂದಿ ಸೇವೆಯನ್ನು ಡಿಸೆಂಬರ್ ಒಳಗಾಗಿ ಕಾಯಂಗೊಳಿಸಲಾಗುವುದು ಎಂದರು. 

ತಹಶೀಲ್ದಾರ ಕೆ.ಶರಣಮ್ಮ, ಸಫಾಯಿ ಕರ್ಮಚಾರಿ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಹೆಚ್‌.ಹನುಮಂತಪ್ಪ, ಪುರಸಭೆ ಅಧ್ಯಕ್ಷ ಜ್ಯೋತಿಮಲ್ಲಣ್ಣ, ಮುಖ್ಯಾಧಿಕಾರಿ ಎಚ್‌.ಇಮಾಮ್ ಸಾಹೇಬ್, ಬಿಜೆಪಿ ಮಂಡಲ ಅಧ್ಯಕ್ಷ ಸಂಜೀವರೆಡ್ಡಿ, ಪಿ.ವಿಜಯಕುಮಾರ,ಓದೋ ಗಂಗಪ್ಪ, ಕೆ.ಸುರೇಶ, ಎಲ್‌.ಕೆ.ರವಿಕುಮಾರ, ಪಿಎಂ.ವಿಲ್ಸನ್, ಈಟಿ.ಲಿಂಗರಾಜ, ಜೆ.ಶಿವರಾಜ,ಜೆ.ಪರಶುರಾಮ ಇದ್ದರು. 


ಸುದ್ದಿ ಓದಿ